Site icon Vistara News

Chandrayaan 3 Launch: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ; ಸಾಫ್ಟ್‌ ಲ್ಯಾಂಡ್‌ಗೆ ಎಷ್ಟು ದಿನ ಬೇಕು?

Countdown Starts For Chandrayaan 3

Chandrayaan 3: Countdown begins for ISRO's Mission

ಶ್ರೀಹರಿಕೋಟ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಇಸ್ರೊ ಚಂದ್ರಯಾನ-3 ಮಿಷನ್‌ (Chandrayaan 3) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 2.35ಕ್ಕೆ ಎಲ್‌ವಿಎಂ3-4ಎಂ ರಾಕೆಟ್‍‌ ನಭಕ್ಕೆ ಹಾರಲಿದ್ದು, ಸಕಲ ರೀತಿಯಲ್ಲಿ ಇಸ್ರೊ ಸಜ್ಜಾಗಿದೆ. ಇಸ್ರೊ ಉಡಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಕೊನೆಯ ಹಂತದ ಸಿದ್ಧತೆ ಕೂಡ ಮುಗಿದಿದೆ ಎಂದು ತಿಳಿದುಬಂದಿದೆ.

ಎಲ್ಲ ಅಂದುಕೊಂಡಂತೆಯೇ ಆದರೆ ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವದಲ್ಲಿ ಮಾನವ ಇಳಿಸಿದ ಮೊದಲ ನೌಕೆ ಎನಿಸಲಿದೆ. ಅಮೆರಿಕದ ಅಪೋಲೋ ಸೇರಿದಂತೆ ಯಾವುದೇ ಮಾನವ ಕಾರ್ಯಾಚರಣೆಗಳು ಉಪಹಗ್ರಹದ ದಕ್ಷಿಣ ಧ್ರುವಕ್ಕೆ ಇದುವರೆಗೆ ತಲುಪಿಲ್ಲ. ಹೀಗಾಗಿ ಇದೊಂದು ಮಹತ್ವಾಕಾಂಕ್ಷೆಯ ತಾಂತ್ರಿಕ ಪರಾಕ್ರಮವೇ ಸರಿ.

ಇದನ್ನೂ ಓದಿ: ವಿಸ್ತಾರ Explainer: Chandrayaan- 3; ಚಂದ್ರಯಾನ- 3ಕ್ಕೆ ಕ್ಷಣಗಣನೆ; ದಕ್ಷಿಣ ಧ್ರುವಕ್ಕೆ ಪ್ರಥಮ ಚುಂಬನ ಸೇರಿದಂತೆ ಹಲವು ವಿಶೇಷತೆ!

ಚಂದ್ರಯಾನ-3ರ ಮೂಲಕ ಆ ಉಪಗ್ರಹದ ನೆಲದ ಮೇಲೆ ಇಳಿಯುವ ವೈಜ್ಞಾನಿಕ ಉಪಕರಣಗಳು ಅಲ್ಲಿ 14 ಭೂಗ್ರಹ ದಿನಗಳ ಕಾಲ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ. ಚಂದ್ರನ ಮೇಲಿನ ಒಂದು ದಿನ ಭೂಗ್ರಹದ ಮೇಲಿನ 14 ದಿನಗಳಿಗೆ ಸಮಾನ. ಈ ಚಂದ್ರಯಾನದ ತಂತ್ರಜ್ಞಾನ ಸೇರಿದಂತೆ ಇವೆಲ್ಲವೂ ಮುಂದೊಂದು ದಿನ ಇತರ ಗ್ರಹಗಳ ನಡುವಿನ ಸಂಪರ್ಕ ಸಾಹಸಗಳಿಗೆ ಹೇತುವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

ಇದನ್ನೂ ಓದಿ: ವಿಸ್ತಾರ Explainer: Chandrayaan- 3; ಚಂದ್ರಯಾನ- 3ರ ವಿಶೇಷತೆಗಳು ಏನೇನು? ಏನಿದರ ಉದ್ದೇಶ?

ಆಗಸ್ಟ್‌ನಲ್ಲಿ ಲ್ಯಾಂಡಿಂಗ್‌

ಚಂದ್ರಯಾನ-3ರ ನೌಕೆಯ ಮೂಲ ಕೆಲಸ ಚಂದಿರನಲ್ಲಿ ಇಳಿಯುವುದು (ಲ್ಯಾಂಡಿಂಗ್) ಮತ್ತು ಪರಿಶೀಲಿಸುವುದು (ರೋವಿಂಗ್). 2019ರಲ್ಲಿ ನಡೆಸಿದ ಚಂದ್ರಯಾನ-2 ಭಾಗಶಃ ಯಶಸ್ವಿಯಾಗಿತ್ತು. ಅದರಲ್ಲಿದ್ದಂತೆ ಈ ಬಾರಿ ಆರ್ಬಿಟರ್ ಇಲ್ಲ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಮತ್ತು ಹಗುರವಾಗಿ ಇಳಿಯುವುದು, ರೋವರ್ ಚಂದ್ರನ ಮೇಲೆ ಸಂಚರಿಸುವುದು, ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಉದ್ದೇಶ. ಶುಕ್ರವಾರ ನಭಕ್ಕೆ ಹಾರಲಿರುವ ಚಂದ್ರಯಾನ-3 ಮಿಷನ್‌, ಆಗಸ್ಟ್‌ 23ರಂದು 5.47 ನಿಮಿಷಕ್ಕೆ ಸಾಫ್ಟ್‌ ಲ್ಯಾಂಡ್‌ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Chandrayaan 3: ಶ್ರೀಹರಿಕೋಟದಲ್ಲೇ ಲೈವ್‌ ಆಗಿ ಚಂದ್ರಯಾನ ವೀಕ್ಷಿಸಲಿರುವ 100ಕ್ಕೂ ಅಧಿಕ ಕನ್ನಡಿಗರು

Exit mobile version