ಬೆಂಗಳೂರು: ಚಂದ್ರಯಾನ-3 (Chandrayaan 3)ರ ಭರ್ಜರಿ ಯಶಸ್ಸು ಕಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿದೆ. ಅದರಲ್ಲೂ ಕ್ಲಿಷ್ಟಕರ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಕಳೆದ ಜುಲೈ 14ರಂದು ಶ್ರೀಹರಿ ಕೋಟಾದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ ಮಿಷನ್ ಅಲ್ಲಿಂದ ನಾನಾ ಹಂತಗಳನ್ನು ದಾಟಿ ಇದೀಗ ಚಂದ್ರನ ಮೇಲೆ ಕಾಲಿಟ್ಟಿದೆ. ಅತ್ಯಂತ ಕಡಿಮೆ ಖರ್ಚಿನದಲ್ಲಿ ಅಂತರಿಕ್ಷ ಯಾನ ಮಾಡಿದ ಹಾಗೂ ಚಂದ್ರನ ಮೇಲೆ ಕಾಲಿಟ್ಟಿರುವ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಲ್ಯಾಂಡಿಂಗ್ ಆಗುವ ಚಿತ್ರ ಕಳುಹಿಸಿದ ಲ್ಯಾಂಡರ್
ಇಸ್ರೊ ಕಚೇರಿಯಲ್ಲಿ ಚಪ್ಪಾಳೆಗಳ ಸುರಿಮಳೆ.
150 ಮೀಟರ್ ಎತ್ತರದಲ್ಲಿದೆ ಲ್ಯಾಂಡರ್.
ಇಸ್ರೋ ಕಚೇರಿಯಲ್ಲಿ ಚಪ್ಪಾಳೆಗಳ ಸುರಿಮಳೆ.
ವರ್ಟಿಕಪ್ ರೂಪ ಪಡೆದುಕೊಂಡ ಲ್ಯಾಂಡರ್