ಬೆಂಗಳೂರು: ಚಂದ್ರಯಾನ-3 (Chandrayaan 3)ರ ಭರ್ಜರಿ ಯಶಸ್ಸು ಕಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿದೆ. ಅದರಲ್ಲೂ ಕ್ಲಿಷ್ಟಕರ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಕಳೆದ ಜುಲೈ 14ರಂದು ಶ್ರೀಹರಿ ಕೋಟಾದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ ಮಿಷನ್ ಅಲ್ಲಿಂದ ನಾನಾ ಹಂತಗಳನ್ನು ದಾಟಿ ಇದೀಗ ಚಂದ್ರನ ಮೇಲೆ ಕಾಲಿಟ್ಟಿದೆ. ಅತ್ಯಂತ ಕಡಿಮೆ ಖರ್ಚಿನದಲ್ಲಿ ಅಂತರಿಕ್ಷ ಯಾನ ಮಾಡಿದ ಹಾಗೂ ಚಂದ್ರನ ಮೇಲೆ ಕಾಲಿಟ್ಟಿರುವ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇಸ್ರೊದ ವೆಬ್ಸೈಟ್ನಲ್ಲಿ ನೇರ ಪ್ರಸಾರ ಆರಂಭಗೊಂಡಿದೆ. ಲಿಂಕ್ ಕೆಳಗಿದೆ.
https://www.isro.gov.in/LIVE_telecast_of_Soft_landing.html
ಚಂದ್ರಯಾನ 3 ಲ್ಯಾಂಡಿಂಗ್ ನೇರ ಪ್ರಸಾರ ಇಸ್ರೊದ ಈ ಕೆಳಗಿನ ಸಾಮಾಜಿಕ ಜಾಲತಾಣಗಳ ಮೂಲಕ ಆರಂಭಗೊಂಡಿದೆ.
ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಇಸ್ರೊ ಅಧ್ಯಕ್ಷರು
ಬೆಂಗಳೂರು: ಚಂದ್ರಯಾನ 3 ಯಶಸ್ಸಿನ ವಿಚಾರದಲ್ಲಿ ಅತಿ ಹೆಚ್ಚು ತಲೆ ಕೆಡಿಸಿಕೊಂಡಿರುವವರು ಎಂದರೆ ಇಸ್ರೊ ಅಧ್ಯಕ್ಷರಾಗಿರುವ ಎಸ್. ಸೋಮನಾಥ್ ಅವರು. ಅವರು ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳವಾರ ಸಂಜೆ 5.35ಕ್ಕೆ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಇಸ್ರೊ ಅಧ್ಯಕ್ಷರು ಚಂದ್ರಯಾನ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.