ಬೆಂಗಳೂರು: ಚಂದ್ರಯಾನ-3 (Chandrayaan 3)ರ ಭರ್ಜರಿ ಯಶಸ್ಸು ಕಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ ಮತ್ತು ಚೀನಾದ ಬಳಿಕ ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿದೆ. ಅದರಲ್ಲೂ ಕ್ಲಿಷ್ಟಕರ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಕಳೆದ ಜುಲೈ 14ರಂದು ಶ್ರೀಹರಿ ಕೋಟಾದಿಂದ ನಭಕ್ಕೆ ಜಿಗಿದಿದ್ದ ಚಂದ್ರಯಾನ ಮಿಷನ್ ಅಲ್ಲಿಂದ ನಾನಾ ಹಂತಗಳನ್ನು ದಾಟಿ ಇದೀಗ ಚಂದ್ರನ ಮೇಲೆ ಕಾಲಿಟ್ಟಿದೆ. ಅತ್ಯಂತ ಕಡಿಮೆ ಖರ್ಚಿನದಲ್ಲಿ ಅಂತರಿಕ್ಷ ಯಾನ ಮಾಡಿದ ಹಾಗೂ ಚಂದ್ರನ ಮೇಲೆ ಕಾಲಿಟ್ಟಿರುವ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಭಾರತದ ಚಂದ್ರಯಾನ 3ರ ಐತಿಹಾಸಿಕ ಲ್ಯಾಂಡಿಂಗ್ ಪ್ರಯತ್ನದ ಯಶಸ್ಸಿಗಾಗಿ ಪ್ರಾರ್ಥಿಸುತ್ತಿರುವುದಾಗಿ ಸಿಂಗಾಪುರದ ಹೈಕಮಿಷನರ್ ಸೈಮನ್ ವಾಂಗ್ ಹೇಳಿದ್ದಾರೆ. “#chandrayan3 ಮಿಷನ್‌ನ ಯಶಸ್ಸಿಗಾಗಿ ಪ್ರಾರ್ಥಿಸುವ ಶತಕೋಟಿ ಜನರೊಂದಿಗೆ ನಾನು ಸೇರುತ್ತಿದ್ದೇನೆʼʼ ಎಂದು ಅವರು ತಮ್ಮ ಫೋಟೋ ಹಾಕಿ ಎಕ್ಸ್ (ಟ್ವೀಟ್) ಮಾಡಿದ್ದಾರೆ.
ಚಂದ್ರಯಾನ 3 ಲ್ಯಾಂಡಿಂಗ್ ಎಲ್ಲಿ ವೀಕ್ಷಿಸಬಹುದು?
ಚಂದ್ರಯಾನ 3ರ ಲ್ಯಾಂಡಿಂಗ್ ಕಾರ್ಯಾಚರಣೆಯ ನೇರ ಪ್ರಸಾರವು ಬುಧವಾರ ಸಂಜೆ 5:20ಕ್ಕೆ ಪ್ರಾರಂಭವಾಗುತ್ತದೆ. ISRO ವೆಬ್‌ಸೈಟ್, ಅದರ YouTube ಚಾನಲ್, Facebook ಮತ್ತು ಸಾರ್ವಜನಿಕ ಪ್ರಸಾರದ DD ನ್ಯಾಷನಲ್ ಟಿವಿಯಲ್ಲಿ 5:27ರಿಂದ ಲ್ಯಾಂಡಿಂಗ್‌ನ ಲೈವ್ ಪ್ರಸಾರ ಲಭ್ಯವಿರುತ್ತದೆ.
ದಕ್ಷಿಣ ಆಫ್ರಿಕದಿಂದಲೇ ಮೋದಿ ಚಂದ್ರಯಾನ ವೀಕ್ಷಣೆ
: ಬ್ರಿಕ್ಸ್ ಸಭೆಗಾಗಿ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಲ್ಲಿನ ಜೊಹಾನ್ಸ್‌ಬರ್ಗ್‌ನಿಂದಲೇ ಚಂದ್ರಯಾನ 3ರ ಲ್ಯಾಂಡಿಂಗ್‌ನ ಲೈವ್ ಅನ್ನು ವೀಕ್ಷಿಸಲಿದ್ದಾರೆ.