ಶ್ರೀಹರಿಕೋಟ: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಇದರೊಂದಿಗೆ ಇಸ್ರೊ ಇತಿಹಾಸ ಸೃಷ್ಟಿಸಿದೆ.
ಇದನ್ನೂ ಓದಿ: Chandrayaan 3: ಶ್ರೀಹರಿಕೋಟದಲ್ಲೇ ಲೈವ್ ಆಗಿ ಚಂದ್ರಯಾನ ವೀಕ್ಷಿಸಲಿರುವ 100ಕ್ಕೂ ಅಧಿಕ ಕನ್ನಡಿಗರು
ಇಸ್ರೊ ವಿಜ್ಞಾನಿಗಳಿಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ
Congratulations to @isro for the successful launch of Chandrayaan3 mission.
— CM of Karnataka (@CMofKarnataka) July 14, 2023
It is a proud moment for India and a new milestone in India's space research & innovation.
This achievement will inspire young minds of India to take up research in Science and Technology.… pic.twitter.com/k6UaEjPIN2
ಚಂದ್ರಯಾನ 3 ಮಿಷನ್ ವೈಶಿಷ್ಟ್ಯ
ಚಂದ್ರಯಾನ -3 ಮಿಷನ್ ವಿಶೇಷತೆ | Chandrayaan – 3 | ISRO | Vistara News #Chandrayaan3 #ISRO #vistaranews #ವಿಸ್ತಾರನ್ಯೂಸ್ pic.twitter.com/y47k5DVVRb
— Vistara News (@VistaraNews) July 14, 2023
ಆರಂಭಿಕ ಮುನ್ನಡೆ ಸಾಧಿಸಿದ ಚಂದ್ರಯಾನ 3 ಮಿಷನ್
ಶ್ರೀಹರಿಕೋಟ: ಚಂದ್ರನ ಅಂಗಳದಲ್ಲಿ ಐತಿಹಾಸಿಕ ಸಾಧನೆ ಮಾಡುವ ಇಸ್ರೊ ಕನಸಿಗೆ ರೆಕ್ಕೆ-ಪುಕ್ಕ ಬಂದಿವೆ. ಉಡಾವಣೆಯಾಗುತ್ತಲೇ ಚಂದ್ರಯಾನ ಮಿಷನ್ ಮೂರನೇ ಹಂತ ತಲುಪಿದೆ. ಅದರಲ್ಲೂ, ರಾಕೆಟ್ನಿಂದ ಬೇರ್ಪಟ್ಟ ಉಪಗ್ರಹವು ಕಕ್ಷೆ ಸೇರಿದೆ. ಇದು ಭಾರತದ ಚಂದ್ರಯಾನ 3 ಮಿಷನ್ಗೆ ಸಿಕ್ಕ ಮಹತ್ವದ ಮುನ್ನಡೆ ಎಂದೇ ಹೇಳಲಾಗುತ್ತಿದೆ.
ಚಂದ್ರಯಾನ 3 ಉಡಾವಣೆ ಆಯ್ತು; ಮುಂದೇನು?
ಭಾರತವು ನಿರೀಕ್ಷೆಯಂತೆಯೇ ಚಂದ್ರಯಾನ 3 ಮಿಷನ್ನ ಉಡಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಎಲ್ವಿಎಂ 3 ರಾಕೆಟ್ ನಭಕ್ಕೆ ಹಾರಿದ್ದು, ಇದಾದ ಬಳಿಕ ಚಂದ್ರಯಾನ 3 ಮಿಷನ್ 15 ನಿಮಿಷದಲ್ಲಿ ಭೂಮಿಯ ಕಕ್ಷೆ ಸೇರಿದೆ. ಭೂಮಿಯ ಕಕ್ಷೆಯಲ್ಲಿ ಹಲವು ಸುತ್ತುಗಳ ನಂತರ ಮಿಷನ್ ಚಂದ್ರನತ್ತ ಲಗ್ಗೆ ಇಡಲಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಸಾಫ್ಟ್ ಆಗಿ ಲ್ಯಾಂಡ್ ಆಗಲಿದೆ. ಸಾಫ್ಟ್ ಆಗಿ ಲ್ಯಾಂಡ್ ಆದಾಗಲೇ ಭಾರತದ ಚಂದ್ರಯಾನ 3 ಯಶಸ್ವಿಯಾಗಲಿದೆ.
ಚಂದಮಾಮನತ್ತ ಯಾನ, ಮಿಷನ್ ಉಡಾವಣೆ ಯಶಸ್ವಿ
ಶ್ರೀಹರಿಕೋಟ: ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ 3 ಮಿಷನ್ಅನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಮಿಷನ್ ಹೊತ್ತ ಲಾಂಚ್ ವೆಹಿಕಲ್ ಮಾರ್ಕ್ III (LVM 3) ರಾಕೆಟ್ ನಭಕ್ಕೆ ಹಾರಿದೆ. ಇದರೊಂದಿಗೆ ಬಾಹ್ಯಾಕಾಶ ಕ್ಷೇತ್ರ ಹಾಗೂ ಚಂದ್ರನ ಅಂಗಳದಲ್ಲಿ ಮಹತ್ವದ ಸಂಶೋಧನೆ ಮಾಡಬೇಕು ಎಂಬ ಇಸ್ರೊ ಕನಸಿಗೆ ರೆಕ್ಕೆ-ಪುಕ್ಕ ಬಂದಂತಾಗಿದೆ.