Site icon Vistara News

Chandrayaan 3 Live Updates: ಉಡಾವಣೆಯಾಗುತ್ತಲೇ ಮಹತ್ವದ ಮುನ್ನಡೆ ಸಾಧಿಸಿದ ಚಂದ್ರಯಾನ 3 ಮಿಷನ್;‌ ರಾಕೆಟ್‌ನಿಂದ ಬೇರ್ಪಟ್ಟ ಉಪಗ್ರಹ

ISRO Launches Chandrayaan 3

ISRO Successfully Launches Chandrayaan 3 Mission

ಶ್ರೀಹರಿಕೋಟ: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಇದರೊಂದಿಗೆ ಇಸ್ರೊ ಇತಿಹಾಸ ಸೃಷ್ಟಿಸಿದೆ.

ಇದನ್ನೂ ಓದಿ: Chandrayaan 3: ಶ್ರೀಹರಿಕೋಟದಲ್ಲೇ ಲೈವ್‌ ಆಗಿ ಚಂದ್ರಯಾನ ವೀಕ್ಷಿಸಲಿರುವ 100ಕ್ಕೂ ಅಧಿಕ ಕನ್ನಡಿಗರು

B Somashekhar

ಚಂದ್ರಯಾನ 3ಗೆ ಶುಭ ಕೋರಿದ ಸಚಿವ ಎಂ.ಬಿ. ಪಾಟೀಲ್‌

B Somashekhar

ಚಂದ್ರಯಾನ 3ಗೆ ಶುಭ ಹಾರೈಸಿದ ಮೋದಿ

ಚಂದ್ರಯಾನ 3 ಉಡಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್‌ ಯಶಸ್ಸಿಗೆ ಶುಭ ಹಾರೈಸಿದ್ದಾರೆ. “ಜುಲೈ 14 ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಚಂದ್ರಯಾನ 3 ಯಶಸ್ವಿಯಾಗುವ ಮೂಲಕ ಭಾರತದ ಸಾಮರ್ಥ್ಯ ಜಗತ್ತಿಗೇ ಅನಾವರಣವಾಗಲಿ. ಇದರೊಂದಿಗೆ ಭಾರತದ ಕನಸು ನನಸಾಗಲಿ” ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

B Somashekhar

ಚಂದ್ರಯಾನ 3 ಲೈವ್‌ ನೋಡುವುದು ಹೇಗೆ?

ಒಂದೊಮ್ಮೆ ಇಸ್ರೋ ಲಾಂಚಿಂಗ್‌ ಸೆಂಟರ್‌ನಲ್ಲಿ ವೀಕ್ಷಿಸಲು ಸಾಧ್ಯವಾಗದೇ ಹೋದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಸ್ರೋ ಆಫಿಷಿಯಲ್ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಲೈವ್‌ ವೀಕ್ಷಣೆಗೆ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: https://www.youtube.com/watch?v=q2ueCg9bvvQ

B Somashekhar

ಚಂದ್ರಯಾನ 3 ಉದ್ದೇಶವೇನು?

ಚಂದ್ರಯಾನ-3ರ ನೌಕೆಯ ಮೂಲ ಕೆಲಸ ಚಂದಿರನಲ್ಲಿ ಇಳಿಯುವುದು (ಲ್ಯಾಂಡಿಂಗ್) ಮತ್ತು ಪರಿಶೀಲಿಸುವುದು (ರೋವಿಂಗ್). 2019ರಲ್ಲಿ ನಡೆಸಿದ ಚಂದ್ರಯಾನ-2 ಭಾಗಶಃ ಯಶಸ್ವಿಯಾಗಿತ್ತು. ಅದರಲ್ಲಿದ್ದಂತೆ ಈ ಬಾರಿ ಆರ್ಬಿಟರ್ ಇಲ್ಲ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಮತ್ತು ಹಗುರವಾಗಿ ಇಳಿಯುವುದು, ರೋವರ್ ಚಂದ್ರನ ಮೇಲೆ ಸಂಚರಿಸುವುದು, ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಉದ್ದೇಶ.

ಇನ್ನು ಮುಂದೆ ಚಂದ್ರನಲ್ಲಿಗೆ ಮಾತ್ರವಲ್ಲ; ಅದರಿಂದಲೂ ದೂರವಿರುವ ಇತರ ಗ್ರಹಗಳಿಗೂ ನೌಕೆಗಳನ್ನು ಕಳುಹಿಸಬೇಕಾಗಬಹುದು. ಅದಕ್ಕಾಗಿ ಅಗತ್ಯವಾದ ಹೊಸ ತಂತ್ರಜ್ಞಾನ ಹೊಂದಿದ, ದೇಸೀಯವಾಗಿ ತಯಾರಿಸಿದ ಅತ್ಯಾಧುನಿಕ ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್‌ಗಳು ಬೇಕಿವೆ. ಪ್ರಸ್ತುತ ಚಂದ್ರಯಾನ ಇವುಗಳ ಶಕ್ತಿಪರೀಕ್ಷೆ ಮಾಡುವ, ಪ್ರದರ್ಶಿಸುವ ಉದ್ದೇಶವನ್ನೂ ಹೊಂದಿದೆ. ಚಂದ್ರನ ಮೇಲೆ ಆಘಾತವಿಲ್ಲದಂತೆ ಮೆಲ್ಲಗೆ ಇಳಿಯಲು ಲ್ಯಾಂಡರ್ ಅಗತ್ಯ. ಅದರೊಳಗಿರುವ ರೋವರ್‌, ಕೆಳಗಿಳಿದು ಆ ಸ್ಥಳದಲ್ಲಿ ಅಗತ್ಯವಾದ ಭೌಗೋಳಿಕ, ರಾಸಾಯನಿಕ ವಿಶ್ಲೇಷಣೆಯನ್ನು ಕೈಗೊಳ್ಳುತ್ತದೆ.

B Somashekhar

ಮೂರು ಮುಖ್ಯ ಭಾಗಗಳು

ಚಂದ್ರಯಾನ-3 ನೌಕೆಯಲ್ಲಿರುವ ಮುಖ್ಯ ಭಾಗಗಳು ಮೂರು- ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್. ಒಟ್ಟು 3,900 ಕಿಲೋಗ್ರಾಂಗಳಷ್ಟು ತೂಕ. 2,148 ಕಿಲೋಗ್ರಾಂ ತೂಕವಿರುವ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಅನ್ನು 100 ಕಿಲೋಮೀಟರ್ ಎತ್ತರದ ಚಂದ್ರನ ಕಕ್ಷೆಗೆ ಒಯ್ಯುತ್ತದೆ. 1,752 ಕಿಲೋಗ್ರಾಂ ತೂಗುವ ಲ್ಯಾಂಡರ್‌ನ ಒಳಗೆ 26 ಕಿಲೋ ತೂಕದ ರೋವರ್‌ ಇರುತ್ತದೆ. ಈ ರೋವರ್, ಚಂದ್ರಯಾನ-2ರ ವಿಕ್ರಮ್ ರೋವರ್‌ನಂತೆಯೇ ಇದೆ. ಆದರೆ ಈ ಬಾರಿ ಸುರಕ್ಷಿತ ಲ್ಯಾಂಡಿಂಗ್‌ಗೆ ಬೇಕಾದ ಸುಧಾರಣೆಗಳನ್ನು ಮಾಡಲಾಗಿದೆ.

Exit mobile version