Site icon Vistara News

Chandrayaan 3: ಚಂದ್ರನಲ್ಲಿ 2ನೇ ಬಾರಿ ಸಾಫ್ಟ್‌ ಲ್ಯಾಂಡ್‌ ಆದ ವಿಕ್ರಮ್‌ ಲ್ಯಾಂಡರ್; ಇದೇನಿದು‌ ಅಚ್ಚರಿ!

Vikram Lander On The Moon

Chandrayaan 3: Vikram Lander soft-landed on again; What is the significance of this

ಬೆಂಗಳೂರು: ಭಾರತದ ಚಂದ್ರಯಾನ 3 ಮಿಷನ್‌ (Chandrayaan 3) ಯಶಸ್ವಿಯಾಗಿದೆ. ಆಗಸ್ಟ್‌ 23ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಆಗುವ ಮೂಲಕ ಇಸ್ರೋ ಇತಿಹಾಸ ಬರೆದಿದೆ. ಹಾಗೆಯೇ, ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಕೆಲವೇ ದಿನದಲ್ಲಿ ನಿದ್ದೆ ಜಾರಲಿವೆ ಎಂದು ಇಸ್ರೋ ತಿಳಿಸಿದೆ. ಇದರ ಬೆನ್ನಲ್ಲೇ, ವಿಕ್ರಮ್‌ ಲ್ಯಾಂಡರ್‌ (Vikram Lander) ಚಂದ್ರನ ಅಂಗಳದಲ್ಲಿ ಎರಡನೇ ಬಾರಿ ಸಾಫ್ಟ್‌ ಲ್ಯಾಂಡ್‌ ಆಗುವ ಮೂಲಕ ಅಚ್ಚರಿ ಮೂಡಿಸಿದೆ.

ಹೌದು, ಎರಡನೇ ಬಾರಿಗೆ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡ್‌ ಆಗಿರುವ ಕುರಿತು ಇಸ್ರೋ ವಿಡಿಯೊ ಸಮೇತ ಮಾಹಿತಿ ನೀಡಿದೆ. “ಚಂದ್ರನ ಅಂಗಳದಲ್ಲಿ ವಿಕ್ರಮ್‌ ಲ್ಯಾಂಡರ್‌ ಮತ್ತೆ ಸಾಫ್ಟ್‌ ಲ್ಯಾಂಡ್‌ ಆಗಿದೆ. ಲ್ಯಾಂಡರ್‌ ಈಗ ತನ್ನ ಮಿಷನ್‌ನ ಉದ್ದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ವಿಕ್ರಮ್‌ ಲ್ಯಾಂಡರ್‌ನನ್ನು ಚಂದ್ರನ ಅಂಗಳದಲ್ಲಿ ಕುಪ್ಪಳಿಸುವ ಪ್ರಯೋಗವನ್ನು ಇಸ್ರೋ ಕೈಗೊಂಡಿದೆ. ಅದರಂತೆ, ವಿಕ್ರಮ್‌ ಲ್ಯಾಂಡರ್‌ ಕುಪ್ಪಳಿಸಿ, ಸಾಫ್ಟ್‌ ಆಗಿ ಲ್ಯಾಂಡ್‌ ಆಗಿದೆ” ಎಂದು ಇಸ್ರೋ ವಿಡಿಯೊ ಸಮೇತ ಪೋಸ್ಟ್‌ ಮಾಡಿದೆ.

ವಿಡಿಯೊ ಸಮೇತ ಇಸ್ರೋ ಪೋಸ್ಟ್

“ಇಸ್ರೋ ಎಂಜಿನ್‌ಗಳನ್ನು ಫೈರ್‌ ಮಾಡಿದೆ. ಆಗ ವಿಕ್ರಮ್‌ ಲ್ಯಾಂಡರ್‌ 30ರಿಂದ 40 ಸೆಂಟಿಮೀಟರ್‌ ಜಿಗಿದು ಸಾಫ್ಟ್‌ ಆಗಿ ಲ್ಯಾಂಡ್‌ ಆಗಿದೆ. ಮುಂದಿನ ದಿನಗಳಲ್ಲಿ ಹತ್ತಾರು ಪ್ರಯೋಗಗಳನ್ನು ಕೈಗೊಳ್ಳಲು, ಮಾನವ ಮಿಷನ್‌ಗಳನ್ನು ಕೈಗೊಳ್ಳಲು ಈ ಪ್ರಯೋಗ ಸಹಕಾರಿಯಾಗಲಿದೆ. ಕುಪ್ಪಳಿಸಿ ಜಿಗಿದ ಬಳಿಕವೂ ವಿಕ್ರಮ್‌ ಲ್ಯಾಂಡರ್‌ ಸುರಕ್ಷಿತವಾಗಿದೆ. ಅದರ ಎಂಜಿನ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ವಲರ್ಮತಿ ಇನ್ನಿಲ್ಲ; ದೇಶವೇ ಕೇಳಿದ್ದ ಧ್ವನಿ ಅದು

ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್‌ ಉಡಾವಣೆ ಮಾಡಿದೆ. ಮಿಷನ್‌ನ ನೌಕೆಯು ಆಗಸ್ಟ್‌ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡ್‌ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡ್‌ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ, ಇಸ್ರೋ ವಿಜ್ಞಾನಿಗಳಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಇದರ ಬೆನ್ನಲ್ಲೇ ವಲರ್ಮತಿ ಅವರ ಅಗಲಿಕೆಯು ಅಚ್ಚರಿ ಮೂಡಿಸಿದೆ.

Exit mobile version