ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಚಂದ್ರಯಾನ 3 ಮಿಷನ್‌ಅನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅದರಲ್ಲೂ, ಚಂದ್ರನ ದಕ್ಷಿಣ ಧ್ರುವದಲ್ಲಿ ಮಿಷನ್‌ಅನ್ನು ಸಾಫ್ಟ್ ಲ್ಯಾಂಡ್ ಮಾಡಿದ ಜಗತ್ತಿನ ಮೊದಲ ದೇಶ ಎನಿಸಿದೆ. ಇದಾದ ಬಳಿಕ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಛಾಪು ಮೂಡಿಸಿದೆ. ಆದರೆ, ಉಡಾವಣೆಯಾದ ಕೆಲವೇ ಹೊತ್ತಿನಲ್ಲಿ ಚಂದ್ರಯಾನ 3 ಮಿಷನ್ (Chandrayaan 3) ಬಾಹ್ಯಾಕಾಶದಲ್ಲೇ ಛಿದ್ರವಾಗುತ್ತಿತ್ತು. ಆದರೆ, ಅದನ್ನು ಇಸ್ರೋ ವಿಜ್ಞಾನಿಗಳು ಕೇವಲ 4 ಸೆಕೆಂಡ್‌ಗಳಲ್ಲಿ ತಡೆದರು ಎಂಬ ಮಾಹಿತಿ ಲಭ್ಯವಾಗಿದೆ.
2023ರ ಜುಲೈ 14ರಂದು ಚಂದ್ರಯಾನ 3 ಮಿಷನ್ ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇದ್ದವು. ಇನ್ನೇನು ಉಡಾವಣೆ ಮಾಡಬೇಕು ಎನ್ನುವಷ್ಟರಲ್ಲಿಯೇ ಚಂದ್ರಯಾನ 3 ರಾಕೆಟ್ ಸಾಗುವ ಮಾರ್ಗದಲ್ಲಿ ಬಾಹ್ಯಾಕಾಶ ತ್ಯಾಜ್ಯವೊಂದು ಇಸ್ರೋ ವಿಜ್ಞಾನಿಗಳಿಗೆ ಕಾಣಿಸಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಉಡಾವಣೆ ಮಾಡಬೇಕಿದೆ. ಉಡಾವಣೆ ಮಾಡಿದರೆ ಬಾಹ್ಯಾಕಾಶ ತ್ಯಾಜ್ಯಕ್ಕೆ ಚಂದ್ರಯಾನ 3 ರಾಕೆಟ್ ಡಿಕ್ಕಿಯಾಗಿ, ಇಡೀ ಮಿಷನ್ ಹಾಳಾಗುತ್ತಿತ್ತು.
Sriharikota, India: Launch of Chandrayaan-3.
— Pagan 🚩 (@paganhindu) April 1, 2024
India is rising and some people in India & across the world are not happy. pic.twitter.com/xIN1Baqiyk
ಇಸ್ರೋ ವಿಜ್ಞಾನಿಗಳ ಚಾಣಾಕ್ಷತನ
ಚಂದ್ರಯಾನ 3 ಉಡಾವಣೆ ಮಾಡಲೇಬೇಕಿತ್ತು. ಹಾಗಾಗಿ, ಇಸ್ರೋ ವಿಜ್ಞಾನಿಗಳು ಚಾಣಾಕ್ಷತನ ಮೆರೆದರು. ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು 4 ಸೆಕೆಂಡ್ ವಿಳಂಬ ಮಾಡಿದರು. ಇದೇ ಅವಧಿಯಲ್ಲಿ ಬಾಹ್ಯಾಕಾಶ ತ್ಯಾಜ್ಯವು ಚಂದ್ರಯಾನ 3 ಮಿಷನ್ ಮಾರ್ಗದಿಂದ ಬೇರೆಡೆ ವಾಲಿತು. ಆಗ, ವಿಜ್ಞಾನಿಗಳು ಯಶಸ್ವಯಾಗಿ ಚಂದ್ರಯಾನ 3 ಮಿಷನ್‌ಅನ್ನು ಉಡಾವಣೆ ಮಾಡಿದರು. ನಿಗದಿತ ಸಮಯಕ್ಕೆ ಉಡಾವಣೆ ಮಾಡಿದ್ದರೆ ಇಡೀ ಮಿಷನ್ ವಿಫಲವಾಗುತ್ತಿತ್ತು ಎನ್ನಲಾಗಿದೆ.
2023ರ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ LVM3 ರಾಕೆಟ್‌ನ ಮೂಲಕ ಉಡಾವಣೆಗೊಂಡ ಚಂದ್ರಯಾನ-3, ಒಂದು ತಿಂಗಳ ಕಾಲ ಬಾಹ್ಯಾಕಾಶ ಹಾರಾಟದ ನಂತರ ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಿತು. ಆ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ಜಗತ್ತಿನ ಮೊದಲ ಮಿಷನ್ ಎಂಬ ಖ್ಯಾತಿಗೆ ಭಾಜನವಾಯಿತು. ಇದರೊಂದಿಗೆ ಇಸ್ರೋ ಮೈಲುಗಲ್ಲು ಸ್ಥಾಪಿಸಿತು.
ಅಷ್ಟೇ ಅಲ್ಲ, ಚಂದ್ರಯಾನ 3 ಮಿಷನ್ ಲ್ಯಾಂಡ್ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು (International Astronomical Union) ಮಾರ್ಚ್ 19ರಂದು ಅನುಮತಿ ನೀಡಿದೆ. ಇದರೊಂದಿಗೆ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶವೀಗ ಅಧಿಕೃತವಾಗಿ ಶಿವಶಕ್ತಿ ಪಾಯಿಂಟ್ ಎನಿಸಿದೆ.
ಇದನ್ನೂ ಓದಿ: Chandrayaan-3 mission: ಇಸ್ರೋದ ಚಂದ್ರಯಾನ-3 ಟೀಮ್‌ಗೆ ಅಮೆರಿಕದ ಪ್ರಶಸ್ತಿ: ʼಸ್ಫೂರ್ತಿʼ ಎಂದ ಸ್ಪೇಸ್ ಫೌಂಡೇಶನ್