Site icon Vistara News

Mann Ki Baat: ಚಂದ್ರಯಾನ ಹೊಸ ಭಾರತದ ಸಂಕೇತ! ಜಿ20 ಭರದ ಸಿದ್ಧತೆ ಜತೆಗೆ ರಕ್ಷಾ ಬಂಧನ ಶುಭಾಶಯ ತಿಳಿಸಿದ ಮೋದಿ

Mann Ki Baat

PM Modi's monthly radio programme 'Mann Ki Baat' to resume today after hiatus of four months

ನವದೆಹಲಿ: ಚಂದ್ರಯಾನವನ್ನು (Chandrayaan Mission) ಹೊಸ ಭಾರತದ ಸಂಕೇತ (Symbol of New India) ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ”ಸೆಪ್ಟೆಂಬರ್ 8ರಿಂದ 10ರವರೆಗೆ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit 2023) ಭಾರತವು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಭಾನುವಾರ ಬೆಳಗ್ಗೆ ಪ್ರಸಾರವಾದ ತಮ್ಮ 104ನೇ ಮನ್ ಕಿ ಬಾತ್ (Mann Ki Baat) ಆವೃತ್ತಿಯಲ್ಲಿ ಹೇಳಿದರು. ಈ ವೇಳೆ, ಚಂದ್ರಯಾನ ಮಿಷನ್‌ನ ಭಾಗವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹಿಳಾ ವಿಜ್ಞಾನಿಗಳನ್ನು ಶ್ಲಾಘಿಸಿದರು ಮತ್ತು ರಕ್ಷಾ ಬಂಧನ (Raksha Bandhan) ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಚಂದ್ರಯಾನ ಮಿಷನ್ ನವ ಭಾರತದ ಚೈತನ್ಯದ ಸಂಕೇತವಾಗಿದೆ. ಅದು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಲು ಬಯಸುತ್ತದೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಹೇಗೆ ಗೆಲ್ಲಬೇಕೆಂದು ತಿಳಿದಿದೆ. ಭಾರತದ ಚಂದ್ರಯಾನ-3 ಮಿಷನ್ ಮಹಿಳಾ ಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರ

ಮಹಿಳೆಯರ ನೇತೃತ್ವದ ಅಭಿವೃದ್ಧಿಯು ರಾಷ್ಟ್ರದ ಲಕ್ಷಣವಾಗಬೇಕು. ಚಂದ್ರಯಾನ ಕೂಡ ಅದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ ಎಂದು ನಾನು ಕೆಂಪು ಕೋಟೆಯಲ್ಲಿ ಹೇಳಿದ್ದೇನೆ. ಈ ಕಾರ್ಯಾಚರಣೆಯಲ್ಲಿ, ಅನೇಕ ಮಹಿಳಾ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಮಿಷನ್‌ಗೆ ನೇರವಾಗಿ ಸಂಪರ್ಕ ಹೊಂದಿದ್ದರು ಮತ್ತು ಅನೇಕ ಪ್ರಮುಖ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ಬಾಹ್ಯಾಕಾಶದಲ್ಲಿ ತಮ್ಮ ಛಾಪು ಮೂಡಿಸಲು ಸಹ ಹೋಗಿದ್ದಾರೆ. ಈಗ ಈ ರಾಷ್ಟ್ರವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇವಲ ವಿಜ್ಞಾನಿಗಳು ಅಲ್ಲ ಚಂದ್ರಯಾನ ಯಶಸ್ವಿಗೆ ಇತರ ವಲಯಗಳು ಕೂಡ ಸಹಾಯ ಮಾಡಿವೆ. ಈ ಎಲ್ಲ ಸಂಗತಿಗಳು ಒಟ್ಟಿಗೆ ಸೇರಿದಾಗ ಚಂದ್ರಯಾನದಂಥ ಬೃಹತ್ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಇದು ಸ್ಪಿರಿಟ್ ಹೀಗೆ ಉಳಿಯಲಿದೆ. ಭವಿಷ್ಯದಲ್ಲೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಜಿ20 ಶೃಂಗಸಭೆಗೆ ಸಕಲ ಸಿದ್ಧತೆ

ಮುಂದಿನ ತಿಂಗಳು ನಡೆಯಲಿರುವ ವಿಶ್ವ ನಾಯಕರ ಜಿ20 ಶೃಂಗಸಭೆಗೆ ಭಾರತವು ಸಂಪೂರ್ಣವಾಗಿ ಸಿದ್ಧವಾಗಿದೆ. ಅಲ್ಲದೇ, ಜಿ20 ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಸಮಾವೇಶವಾಗಿ ಮಾರ್ಪಡಲಿದೆ. ಜಿ20 ಶೃಂಗಸಭೆಯನ್ನು ಯಶಸ್ವಿಗೊಳಿಸಲು ಮತ್ತು ಹೆಮ್ಮೆಯನ್ನು ಹೆಚ್ಚಿಸಲು ದೇಶದ ನಾಗರಿಕರು ಒಂದಾಗಿ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ಕಳೆದ ವರ್ಷ ಬಾಲಿಯಲ್ಲಿ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಪಡೆದ ನಂತರ ಬಹಳಷ್ಟು ಕಾರ್ಯಕ್ರಮಗಳು ನಡೆದಿವೆ. ನಾವು ದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಪ್ರದಾಯದಿಂದ ದೂರ ಸರಿದಿದ್ದೇವೆ ಮತ್ತು ಅದನ್ನು ದೇಶದ 60 ನಗರಗಳಿಗೆ ಕೊಂಡೊಯ್ಯಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕ್ರೀಡಾಕೂಟದಲ್ಲಿ ಗೆದ್ದವರಿಗೆ ಅಭಿನಂದನೆ

ಕೆಲವು ದಿನಗಳ ಹಿಂದೆ, ಚೀನಾದಲ್ಲಿ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟವನ್ನು ನಡೆಸಲಾಯಿತು ಮತ್ತು ಭಾರತವು 26 ಪದಕಗಳನ್ನು ಗಳಿಸುವ ಮೂಲಕ ಇತರ ಎಲ್ಲ ರಾಷ್ಟ್ರಗಳನ್ನು ಮೀರಿಸಿದೆ. ಭಾರತ ಗೆದ್ದು ಒಟ್ಟು ಪದಕಗಳ ಪೈಕಿ 11 ಚಿನ್ನದ ಪದಕಗಳಿವೆ. 1959 ರಿಂದ 2019 ರವರೆಗೆ ಕೇವಲ 18 ಪದಕಗಳನ್ನು ಗೆದ್ದಿದ್ದಾರೆ, ಆದರೆ ನಮ್ಮ ಆಟಗಾರರು ಈ ವರ್ಷ ಮಾತ್ರ 26 ಗೆದ್ದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Mann Ki Baat : ಇದು ವೃಕ್ಷ ಸಂರಕ್ಷಣೆ, ಜಲ ಸಂರಕ್ಷಣೆ ಮಾಡಬೇಕಾದ ಸಮಯ ಎಂದ ಮೋದಿ

ಹರ್ ಮನ್ ತಿರಂಗಾ

ಹರ್ ಘರ್ ತಿರಂಗಾ ಅಭಿಯಾನವು ಹರ್ ಮನ್ ತಿರಾನಾ ಅಭಿಯಾನವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸೆಪ್ಟೆಂಬರ್‌ನಲ್ಲಿ ಹೊಸ ‘ಮೇರಿ ಮಾತಿ ಮೇರಾ ದೇಶ್’ ಅಭಿಯಾನ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಅಭಿಯಾನದ ವಿವರಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಭಕ್ತಿಯ ಉತ್ಸಾಹವನ್ನು ತುಂಬುವ ಅಭಿಯಾನವು ಭರದಿಂದ ಸಾಗುತ್ತಿದ್ದು, ನಾಡಿನ ಪವಿತ್ರ ಮಣ್ಣನ್ನು ಸಾವಿರಾರು ಅಮೃತ ಕಲಶದಲ್ಲಿ ಸಂಗ್ರಹಿಸಲಾಗುವುದು ಮತ್ತು ಅಕ್ಟೋಬರ್ ಅಂತ್ಯದಲ್ಲಿ ಅಮೃತ ಕಲಶ ಯಾತ್ರೆಯೊಂದಿಗೆ ದೆಹಲಿ ತಲುಪಲಿದೆ. ಈ ಮಣ್ಣಿನಿಂದ ದೆಹಲಿಯಲ್ಲಿ ಅಮೃತ ವಾಟಿಕಾ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version