ನವದೆಹಲಿ: ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ (IGI Airport) ನೂರಾರು ಜನ ಸೇರಿದ ಕಾರಣ ಗದ್ದಲ ಉಂಟಾಗಿದೆ. ಇದರಿಂದಾಗಿ ಇದೇನು ವಿಮಾನ ನಿಲ್ದಾಣವೋ, ರೈಲು ನಿಲ್ದಾಣವೋ ಎಂದು ಜನ ಅಚ್ಚರಿಪಡುವಂತಾಗಿದೆ.
ಜರ್ಮನಿಯಲ್ಲಿ ಪೈಲಟ್‌ಗಳು ಒಂದು ದಿನದ ಮುಷ್ಕರ ಹೂಡಿದ ಕಾರಣ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯು ಜಾಗತಿಕವಾಗಿ ಸುಮಾರು ೮೦೦ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಹಾಗಾಗಿ, ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್‌ನಲ್ಲಿ ಸುಮಾರು ೭೦೦ ಪ್ರಯಾಣಿಕರು ಪ್ರಯಾಣ ಆರಂಭಿಸದೆ ಕಾಲ ಕಳೆಯುವಂತಾಯಿತು.
ಲುಫ್ತಾನ್ಸಾ ಏರ್‌ಲೈನ್ಸ್‌ನ ಎರಡು ವಿಮಾನಗಳು ದೆಹಲಿಯಿಂದ ಜರ್ಮನಿಯ ಫ್ರಾಂಕ್‌ಫರ್ಟ್ ಹಾಗೂ ಮ್ಯುನಿಚ್‌ಗೆ ವಿಮಾನಗಳು ಸಂಚರಿಸುತ್ತವೆ. ಆದರೆ, ವಿಮಾನ ಹಾರಾಟ ರದ್ದುಗೊಳಿಸಿದ ಕಾರಣ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ನೂರಾರು ಜನ ವಿಮಾನ ನಿಲ್ದಾಣದಲ್ಲಿಯೇ ಉಳಿದಿರುವ ಫೋಟೊಗಳು ವೈರಲ್ ಆಗಿವೆ. ಹಾಗೆಯೇ, ಪ್ರಯಾಣಿಕರು ಟಿಕೆಟ್ ಹಣವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಬಂಧನ; 14 ಕೆಜಿ ಹೆರಾಯಿನ್ ಜಪ್ತಿ