Site icon Vistara News

ChatGPT Like AI: ಅಪ್‌ಡೇಟ್‌ ಆಗದಿದ್ದರೆ ಅಳಿಗಾಲ; 30 ಕೋಟಿ ಜನರ ಉದ್ಯೋಗಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕತ್ತರಿ

ChatGPT-Like AI Platforms To Replace 30 Crore Jobs

ChatGPT-Like AI Platforms To Replace 30 Crore Jobs Worldwide, Says Goldman Sachs Report

ನವದೆಹಲಿ: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಮ್ಮ ಬದುಕು ಕೂಡ ಆ್ಯಂಡ್ರಾಯ್ಡ್‌ ವರ್ಷನ್‌ ರೀತಿ ಅಪ್‌ಡೇಟ್‌ ಆಗುತ್ತಲೇ ಇರಬೇಕು. ಹೊಸ ವಿಚಾರ, ಹೊಸ ತಂತ್ರಜ್ಞಾನ, ನವಕೌಶಲಗಳನ್ನು ಅಳವಡಿಸಿಕೊಳ್ಳುತ್ತಲೇ ಇರಬೇಕು. ಇಲ್ಲದಿದ್ದರೆ ತಂತ್ರಜ್ಞಾನದ ಯುಗವು ನಮ್ಮನ್ನು ದೂರ ತಳ್ಳಿ ಹೋಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ (ChatGPT Like AI) ಚಾಟ್‌ಬಾಟ್‌ಗಳು ಜನರ ಉದ್ಯೋಗಕ್ಕೆ ಕತ್ತರಿ ಹಾಕುತ್ತಿವೆ. ಅಷ್ಟೇ ಅಲ್ಲ, ಭವಿಷ್ಯತ್ತಿನ ದಿನಗಳಲ್ಲಿ ಈ ತಂತ್ರಜ್ಞಾನವು ಸುಮಾರು 30 ಕೋಟಿ ಮಂದಿಯ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಂದು ವರದಿಯೊಂದು ತಿಳಿಸಿದೆ.

ಹೌದು, ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್‌ ಹಾಗೂ ಹಣಕಾಸು ಸೇವೆಗಳ ಕಂಪನಿ ‘ಗೋಲ್ಡ್‌ಮನ್‌ ಸಚ್ಸ್‌’ ವರದಿ ಪ್ರಕಾರ, ಮುಂದಿನ ದಿನಗಳಲ್ಲಿ ಚಾಟ್‌ಜಿಪಿಟಿಯಂತಹ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ಗಳು ಜಗತ್ತಿನಾದ್ಯಂತ 300 ಕೋಟಿ ಪೂರ್ಣಕಾಲಿಕ (Full Time) ಜನರ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಂದು ತಿಳಿದುಬಂದಿದೆ. ಕಂಪನಿಗಳಲ್ಲಿ ತಂತ್ರಜ್ಞಾನ ಗೊತ್ತಿರದವರು, ಕೌಶಲಗಳು ಇರದವರು, ಕನಿಷ್ಠ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳನ್ನು ಬಳಸಲು ಬಾರದವರು ಮೊದಲು ಮನೆಯ ದಾರಿ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.

ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಗಳು ಕೋಡ್‌ ರಚನೆಯಿಂದ ಹಿಡಿದು, ಚೆಂದದೊಂದು ಕವನ ಬರೆಯುವವರೆಗೆ ಎಲ್ಲ ವಿಷಯಗಳ ಇನ್‌ಪುಟ್‌ ನೀಡುತ್ತದೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದಿಂದ ಕಾರ್ಯಕ್ಷಮತೆ ಹಾಗೂ ಪರಿಪೂರ್ಣತೆ ಸಾಧಿಸುವುದರಿಂದ ಜಗತ್ತಿನಾದ್ಯಂತ ಇರುವ ಉದ್ಯೋಗಸ್ಥರಲ್ಲಿ ಶೇ.18ರಷ್ಟು ಉದ್ಯೋಗಗಳು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರದ ಮೇಲೆ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ಬಹುರಾಷ್ಟ್ರೀಯ ಐಟಿ ಕಂಪನಿಗಳು ಸಾವಿರಾರು ಜನರನ್ನು ಮನೆಗೆ ಕಳುಹಿಸಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Sam Altman: ಚಾಟ್‌ಜಿಪಿಟಿ ಬಗ್ಗೆಯೂ ಮೋದಿ ಬಳಿ ಉತ್ತರವಿದೆ; ಭೇಟಿ ಬಳಿಕ ಓಪನ್‌ಎಐ ಮುಖ್ಯಸ್ಥ ಹೀಗೆ ಹೇಳಿದ್ದೇಕೆ?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ಈಗಾಗಲೇ ಹೆಚ್ಚಾಗುತ್ತಿದೆ. ಸಾವಿರಾರು ಜನ ಇದರಿಂದ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ವರದಿಗಳು ಕೂಡ ಲಭ್ಯವಾಗಿವೆ. ಕೊರೊನಾ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿತದ ಕಾರಣವೊಡ್ಡಿ ಈಗಾಗಲೇ ಮೈಕ್ರೋಸಾಫ್ಟ್‌, ಟ್ವಿಟರ್‌, ಫೇಸ್‌ಬುಕ್‌ ಸೇರಿ ಜಗತ್ತಿನ ಹತ್ತಾರು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೂ ಕೋಟ್ಯಂತರ ಜನರ ಉದ್ಯೋಗಕ್ಕೆ ಕತ್ತರಿ ಹಾಕಲಿದೆ ಎಂಬ ವರದಿಯು ಆತಂಕ ಮೂಡಿಸಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version