Site icon Vistara News

ChatGPT v/s Humans: ಚಾಟ್‌ಜಿಪಿಟಿ ಮಾನವರ ಸ್ಥಾನ ಪಡೆಯಲಿದೆಯಾ? ಇನ್ಫಿ ನಾರಾಯಣಮೂರ್ತಿ ಹೇಳುವುದೇನು?

Youngsters should work 70 hours a week Says Narayana Murthy

narayana murthy

ನವದೆಹಲಿ: ಟೆಕ್ ವಲಯದಲ್ಲಿ ಜಾಟ್‌ಜಿಪಿಟಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮಾನವ ಉದ್ಯೋಗಗಳನ್ನು ಈ ಚಾಟ್‌ಬಾಟ್ ಕಸಿದುಕೊಳ್ಳಬಹುದು ಎಂಬ ಭಯ ಆವರಿಸಿದೆ. ಹಾಗಾಗಿ, ಬಹಳಷ್ಟು ಉದ್ಯಮಿಗಳು, ತಂತ್ರಜ್ಞರು ಹಾಗೂ ಅನುಭವಿಗಳು ಚಾಟ್‌ಜಿಪಿಟಿ ಬಳಕೆಯ ಸಾಧ್ಯತೆಗಳು, ಅದು ಉಂಟು ಮಾಡಲಿರುವ ಪರಿಣಾಮ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ (Infosys Founder Narayana Murthy) ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ(ChatGPT v/s Humans).

ಕೆಲವು ತಿಂಗಳ ಹಿಂದೆ ಈ ಚಾಟ್‌ಜಿಪಿಟಿಯನ್ನು ನನಗೆ ನನ್ನ ಮಗ ಪರಿಚಿಯಸಿದ. ನಾನು ಅದನ್ನು ಬಳಸುತ್ತಿದ್ದೇನೆ. ನಿಮಗೆ ಅದು ಜ್ಞಾನವನ್ನು ನೀಡುತ್ತದೆ ಮತ್ತು ನಿಮ್ಮ ಸೃಜನಾತ್ಮಕತೆಗೆ ತಕ್ಕಂತೆ ಆ ಮಾಹಿತಿಯನ್ನು ಬಳಸಿಕೊಳ್ಳಬಹುದು ಎಂದು ನಾರಾಯಣಮೂರ್ತಿ ಅವರು ಹೇಳಿದ್ದಾರೆ. ನಾರಾಯಣ ಮೂರ್ತಿ ಅವರು NASSCOM ಟೆಕ್ನಾಲಜಿ ಮತ್ತು ಲೀಡರ್‌ಶಿಪ್ ಫೋರಮ್‌ನಲ್ಲಿ ಭಾಗವಹಿಸಿ, ಮಾತನಾಡಿದರು ಬಿಸಿನೆಸ್ ಟುಡೇ ವರದಿಯ ಪ್ರಕಾರ.

ಇದನ್ನೂ ಓದಿ: ChatGPT: ನಟ ಶಿವಣ್ಣನಿಗೆ ‘ದಿ ಲೆಗಸಿ’ ಚಿತ್ರಕತೆ ಬರೆದ ಚಾಟ್‌ಜಿಪಿಟಿ! ಹೇಗಿದೆ ಈ ಸಿನಿಮಾ ಕತೆ?

ಮಾನವನ ಮನಸ್ಸು ಅತ್ಯಂತ ಹೊಂದಾಣಿಕೆಯ ಸಾಧನವಾಗಿದೆ. ಚಾಟ್‌ಜಿಪಿಟಿ ಎಂದಿಗೂ ಮಾನವರ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. 1977-78 ಪ್ರೋಗ್ರಾಮರ್ ಜನರೇಟರ್‌ ಚಾಲ್ತಿಗೆ ಬಂದವು. ಎಲ್ಲರೂ ಉದ್ಯೋಗ ನಷ್ಟವಾಗುತ್ತವೆ ಎಂದು ಭಾವಿಸಿದ್ದರು. ಆದರೆ ಹಾಗೇನೂ ಆಗಲಿಲ್ಲ. ಯಾಕೆಂದರೆ, ಮಾನವ ಮನಸ್ಸು ಅತ್ಯಂತ ಹೊಂದಾಣಿಕೆಯ ಸಾಧನವಾಗಿದೆ. ಆದ್ದರಿಂದ, ಮಾನವ ಸೃಜನಶೀಲತೆ ಮತ್ತು ತಂತ್ರಜ್ಞಾನದೊಂದಿಗಿನ ದೊಡ್ಡ ಸಮಸ್ಯೆಗಳಿಗೆ ಸಹಾಯ ಮಾಡಲು ಇದನ್ನು ಬಳಸಲಾಯಿತು. ಜಾಟ್‌ಜಿಪಿಟಿ ಕೂಡ ಒಳ್ಳೆಯದೇ. ಆದರೆ, ಅದನ್ನು ನಾವು ಮೂಲವಾಗಿ ಬಳಸಬೇಕು ಮತ್ತು ಅದು ನಮ್ಮ ಸೃಜನಾತ್ಮಕತೆಯನ್ನು ಪ್ರತಿಫಲಿಸುತ್ತದೆ. ಅದನ್ನು ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ಬಳಸಿಕೊಳ್ಳಬಹುದು. ಚಾಟ್‌ಜಿಪಿಟಿಯೇ ಇರಲಿ, ಎಐನೇ ಇರಲಿ. ಅವು ಎಂದಿಗೂ ಮಾನವರ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

Exit mobile version