ಹೊಸದಿಲ್ಲಿ: ಅಗ್ಗದ ದರಲ್ಲಿ ವಿಮಾನ ಟಿಕೆಟ್ (Cheap Flight charge) ಬುಕ್ (flight ticket booking) ಮಾಡಲು ಸಹಾಯ ಮಾಡುವ ಹೊಸ ವೈಶಿಷ್ಟ್ಯವನ್ನು ʼಗೂಗಲ್ ಫ್ಲೈಟ್ಸ್ʼ (Google Flights) ಪ್ರಾರಂಭಿಸಿದೆ.
ಗೂಗಲ್‌ನ ಈ ಹೊಸ ಅವಕಾಶ ಬಜೆಟ್ ವಿಮಾನಯಾನ ಮಾಡಬಯಸುವ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದೆ. ಸೋಮವಾರ ಬೆಳಿಗ್ಗೆ ಅಧಿಕೃತವಾಗಿ ಘೋಷಿಸಲಾದ ಹೊಸ ವೈಶಿಷ್ಟ್ಯವು, ವಿಮಾನಗಳನ್ನು ಬುಕಿಂಗ್ ಮಾಡಲು Googleನಿಂದ ಮಾರ್ಗದರ್ಶನವನ್ನು ನೀಡುತ್ತದೆ.
ಈಗಾಗಲೇ ಗೂಗಲ್ ಫ್ಲೈಟ್ಸ್‌ನಲ್ಲಿ ಲಭ್ಯವಿರುವ ಬೆಲೆ ಟ್ರ್ಯಾಕಿಂಗ್ ಅಲರ್ಟ್‌ಗಳು, ಲಭ್ಯವಿರುವ ಬೆಲೆ ಗ್ಯಾರಂಟಿ ಆಯ್ಕೆಗಳನ್ನು ʼಕಡಿಮೆ ದರದಲ್ಲಿ ಬುಕ್ ಮಾಡುವ ಸಮಯʼದ ಕುರಿತು ಹೊಸ ಒಳನೋಟಗಳನ್ನು ಮುಂದೆ ನೀಡಲಿದೆ. “ನೀವು ಆಯ್ಕೆ ಮಾಡಿದ ದಿನಾಂಕ ಮತ್ತು ಗಮ್ಯಸ್ಥಾನಕ್ಕೆ ಟಿಕೆಟ್ ಕಾಯ್ದಿರಿಸಲು ಬೆಲೆಗಳು ಸಾಮಾನ್ಯವಾಗಿ ಕಡಿಮೆ ಇರುವ ಸಮಯವನ್ನು ನಿಮಗೆ ತಿಳಿಸುತ್ತೇವೆ” ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಗೂಗಲ್ ಹೇಳಿದೆ.
ಇದು ಹೇಗೆ ಕೆಲಸ ಮಾಡುತ್ತದೆ?
ಉದಾಹರಣೆಗೆ, ವಿಮಾನ ಪ್ರಯಾಣಗಳನ್ನು ಬುಕ್ ಮಾಡಲು ಅಗ್ಗದ ಸಮಯ ಸಾಮಾನ್ಯವಾಗಿ ಎರಡು ತಿಂಗಳ ಮೊದಲು ಎಂದು ಹೇಳಬಹುದು. ಅಥವಾ ಸಾಮಾನ್ಯವಾಗಿ ಟೇಕ್‌ಆಫ್‌ಗೆ ಅತ್ಯಂತ ಹತ್ತಿರದಲ್ಲಿ ದರಗಳು ಇಳಿಯುತ್ತವೆ. ಆದ್ದರಿಂದ ನೀವು ಬುಕಿಂಗ್ ಮಾಡುವ ಮೊದಲು ಕಾಯಲು ನಿರ್ಧರಿಸುತ್ತೀರಿ. ಆದರೆ ಈ ನಿರ್ಧಾರಕ್ಕೆ ಹೆಚ್ಚಿನ ಆತ್ಮವಿಶ್ವಾಸ ಬೇಕು. ಗೂಗಲ್ ಫ್ಲೈಟ್, 2023ರ ಬುಕಿಂಗ್ ಟ್ರೆಂಡ್‌ಗಳನ್ನು ಅನಾವರಣಗೊಳಿಸಿದೆ. ಇದನ್ನು ಗೂಗಲ್ ಫ್ಲೈಟ್‌ನಲ್ಲಿ ಗಮನಿಸಿದ ಬೆಲೆ ಮಾದರಿಗಳಿಂದ ಪಡೆಯಲಾಗಿದೆ.
“ಕೆಲವು ಫ್ಲೈಟ್ ಫಲಿತಾಂಶಗಳಲ್ಲಿ, ವರ್ಣರಂಜಿತ ಬೆಲೆ ಗ್ಯಾರಂಟಿ ಬ್ಯಾಡ್ಜ್ ಅನ್ನು ಕೊಡಲಾಗಿದೆ. ಇದರರ್ಥ ನೀವು ಇಂದು ನೋಡುವ ದರ ನಿರ್ಗಮನದ ಮೊದಲು ಕಡಿಮೆಯಾಗುವುದಿಲ್ಲ ಎಂದು ನಾವು ವಿಶ್ವಾಸ ಹೊಂದಿದ್ದೇವೆ. ನೀವು ಈ ವಿಮಾನಗಳಲ್ಲಿ ಒಂದನ್ನು ಬುಕ್ ಮಾಡಿದಾಗ, ಟೇಕ್‌ಆಫ್‌ಗೆ ಮೊದಲು ಪ್ರತಿದಿನದ ಬೆಲೆಯನ್ನು ನಾವು ಮೇಲ್ವಿಚಾರಣೆ ಮಾಡುತ್ತೇವೆ. ಬೆಲೆ ಕಡಿಮೆಯಾದರೆ, Google Pay ಮೂಲಕ ವ್ಯತ್ಯಾಸದ ಹಣವನ್ನು ನಾವು ನಿಮಗೆ ಹಿಂತಿರುಗಿಸುತ್ತೇವೆ” ಎಂದು ಬ್ಲಾಗ್ ಪೋಸ್ಟ್ ತಿಳಿಸಿದೆ.
ಕ್ರಿಸ್ಮಸ್ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಲು ಉತ್ತಮ ಸಮಯ
Google ಪ್ರಕಾರ, ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭವಾಗುವ ಪ್ರವಾಸಗಳಿಗೆ ನೀವು ಅಕ್ಟೋಬರ್ ಆರಂಭದಲ್ಲಿ ಉತ್ತಮ ಡೀಲ್ ಮಾಡುವ ಸಾಧ್ಯತೆಯಿದೆ. ನಿರ್ಗಮನದ 71 ದಿನಗಳ ಮೊದಲು ಸರಾಸರಿ ಬೆಲೆಗಳು ಕಡಿಮೆ ಇರುತ್ತವೆ. 2022ರ ಒಳನೋಟದ ಪ್ರಕಾರ ಆ ಅವಧಿಯಲ್ಲಿ ನಿರ್ಗಮನಕ್ಕೆ ಕೇವಲ 22 ದಿನಗಳ ಮೊದಲು ಸರಾಸರಿ ಬೆಲೆ ಕಡಿಮೆ ಎಂದು ಕಂಡುಬಂದಿತ್ತು. ಸಾಮಾನ್ಯವಾಗಿ ಕಡಿಮೆ ಬೆಲೆಯ ಶ್ರೇಣಿಯು ಈಗ ಟೇಕ್‌ಆಫ್‌ಗೆ 54-78 ದಿನಗಳ ಮೊದಲು ಇರುತ್ತದೆ ಎಂದು ಗೂಗಲ್ ಫ್ಲೈಟ್ ತಿಳಿಸಿದೆ.
ಬೇರೊಂದು ರೀತಿಯಲ್ಲಿ ಹೇಳುವುದಾದರೆ, USನಿಂದ ಯುರೋಪ್‌ಗೆ ಸರಾಸರಿ ವಿಮಾನ ದರಗಳು ಪ್ರಯಾಣದ ಅವಧಿ ಹತ್ತಿರ ಬಂದಂತೆ ಹೆಚ್ಚಾಗುತ್ತವೆ. ವಿಶೇಷವಾಗಿ ನಿರ್ಗಮನದ 10 ವಾರಗಳ ಒಳಗೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಟಿಕೆಟ್ ಕಾಯ್ದಿರಿಸುವುದು ಉಚಿತ ಎಂದಿದೆ ಗೂಗಲ್ ಫ್ಲೈಟ್.
ಇದನ್ನೂ ಓದಿ: Viral News: 30 ವರ್ಷದ ಹಳೆಯ ಏರ್ ಪಾಸ್ ಮೂಲಕ ಒಂದೇ ವರ್ಷದಲ್ಲಿ 373 ವಿಮಾನ ಪ್ರಯಾಣ ಮಾಡಿದ!