ಭೋಪಾಲ್: ಮಧ್ಯ ಪ್ರದೇಶದ (Madhya Pradesh) ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ (Kuno National Park) ಮತ್ತೊಂದು ಚೀತಾ ಸಾವಿಗೀಡಾಗಿದೆ(Cheetah Dies). 2022ರಲ್ಲಿ ಭಾರತದಲ್ಲಿ ಚೀತಾಗಳ ಪುನರುಜ್ಜೀವನ (reintroduction) ಕಾರ್ಯಕ್ರಮದ ಬಳಿಕ ಸಾವಿಗೀಡಾಗುತ್ತಿರುವ ಇದು 10ನೇ ಚೀತಾ ಇದಾಗಿದೆ. ಮೃತಪಟ್ಟ ಚೀತಾವನ್ನು ನಮೀಬಿಯಾದಿಂದ ತರಲಾಗಿತ್ತು ಮತ್ತು ಶೌರ್ಯ ಎಂದು ನಾಮಕಾರಣ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಚೀತಾ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೂ 7 ಹಿರಿಯ ಚೀತಾಗಳು ಮತ್ತು ಮೂರು ಚೀತಾಗಳು ಈ ನ್ಯಾಷನಲ್ ಪಾರ್ಕ್‌ನಲ್ಲಿ ಮೃತಪಟ್ಟಿವೆ. ಈ ಪೈಕಿ ಬಹುತೇಕ ಚೀತಾಗಳು ಸೋಂಕಿನಿಂದ ಸಾವಿಗೀಡಾಗಿವೆ.
2024ರ ಜನವರಿ 16ರಂದು ಮಧ್ಯಾಹ್ನ 3.17ಕ್ಕೆ ನಮೀಬಿಯಾದ ಚೀತಾ ಶೌರ್ಯ ಮೃತಪಟ್ಟಿದೆ. ಬೆಳಿಗ್ಗೆ 11 ಗಂಟೆಗೆ, ಟ್ರ್ಯಾಕಿಂಗ್ ತಂಡವು ದಿಗ್ಭ್ರಮೆಗೊಳಿಸುವ ಚೀತಾ ನಡಿಗೆಯನ್ನು ಗಮನಿಸಿತು, ನಂತರ ಪ್ರಾಣಿಗೆ ಅರವಳಿಕೆ ನೀಡಲಾಯಿತು. ಚೀತಾ ತೀರಾ ನಿತ್ರಾಣಗೊಂಡಿತ್ತು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಲಯನ್ ಪ್ರಾಜೆಕ್ಟ್ ನಿರ್ದೇಶಕ ಅವರು ಹೇಳಿದ್ದಾರೆ.
ಬಳಿಕ ಚೀತಾಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆದರೆ, ಅದು ಬದುಕುಳಿಯಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಈ ಚೀತಾ ಸಾವಿನ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುನೋದಲ್ಲಿ ಕೊನೆಯ ಮತ್ತು ಒಂಬತ್ತನೇ ಚಿರತೆಯ ಸಾವು ಕಳೆದ ವರ್ಷ ಆಗಸ್ಟ್ 2 ರಂದು ವರದಿಯಾಗಿದೆ. ಕಳೆದ ಎರಡು ಸಾವುಗಳಿಗೆ ಮಳೆಗಾಲದಲ್ಲಿ ಕೀಟಗಳಿಂದ ಉಂಟಾದ ಸೋಂಕುಗಳು ಕಾರಣ ಎಂದು ಸರ್ಕಾರ ಸಂಸತ್ತಿನಲ್ಲಿ ಮಾಹಿತಿ ನೀಡಿತ್ತು.
1952ರಲ್ಲಿ ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. ಆದರೆ, ಭಾರತದಲ್ಲಿ ಮತ್ತೆ ಚೀತಾಗಳನ್ನು ಬೆಳೆಸುವ ನಿಟ್ಟಿನಲ್ಲಿ ಅವುಗಳ ಪುನರುಜ್ಜೀವನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಯಿತು. ಅದರ ಅನ್ವಯ 2022 ರಲ್ಲಿ 20 ವಯಸ್ಕ ಚೀತಾಗಳನ್ನು ತರಲಾಯಿತು. ಈ ಪೈಕಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಎರಡು ಬ್ಯಾಚ್‌ಗಳಲ್ಲಿ ಚೀತಾಗಳನ್ನು ತಂದು ಕುನೋ ನ್ಯಾಷನಲ್ ಪಾರ್ಕ್‌ಗೆ ಬಿಡಲಾಯಿತು.
ಈ ಚೀತಾಗಳು ಮರಿಗಳನ್ನು ಹಾಕಿವೆ. ಆದರೆ, ಮೇಲಿಂದ ಚೀತಾಗಳು ನಾನಾ ಕಾರಣಗಳಿಂದ ಸಾವಿಗೀಡಾಗುತ್ತಿರುವುದು ಕಳವಳಕಾರಿಯಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಭಾರತದಲ್ಲಿ ಮತ್ತೆ ಚೀತಾಗಳನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ನಡೆಯನ್ನುಪ್ರಶ್ನಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿತ್ತು. ಆದರೆ, ಅವುಗಳ ವಾಸಸ್ಥಾನವನ್ನು ಮಧ್ಯ ಪ್ರದೇಶದಿಂದ ರಾಜಸ್ಥಾನಕ್ಕೆ ಬದಲಾಯಿಸಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಹೇಳಿತ್ತು.
ಈ ಸುದ್ದಿಯನ್ನೂ ಓದಿ: Cheetah Dies: ಕುನೊದಲ್ಲಿ 8ನೇ ಚೀತಾ ಸಾವು; ಕೇಂದ್ರದ ಯೋಜನೆಗೆ ಹಿನ್ನಡೆ?