ರಾಯಪುರ್, ಛತ್ತೀಸ್‌ಗಢ: ವಿತ್ತ ಖಾತೆಯನ್ನು ಹೊಂದಿರುವ ಸಿಎಂ ಭೂಪೇಶ್ ಬಘೇಲ್ ಅವರು ಸೋಮವಾರ ಬಜೆಟ್ ಮಂಡಿಸಿದ್ದು, ನಿರುದ್ಯೋಗಿಗಳಿಗೆ ತಿಂಗಳಿಗೆ 2,500 ರೂ. ಘೋಷಿಸಿದ್ದಾರೆ. ನಿರುದ್ಯೋಗಿಗಳ ಕುಟುಂಬದ ಆದಾಯವು ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಇದ್ದವರಿಗೆ ಈ ನಿರುದ್ಯೋಗ ಭತ್ಯೆ ದೊರೆಯಲಿದೆ(Chhattisgarh Budget 2023).
ಇದೇ ವೇಳೆ, ಅಂಗನವಾಡಿ ಕಾರ್ಯಕರ್ತೆಯರಿಗೆ 3,500 ರೂ. ವೇತನ ಹೆಚ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಸದ್ಯ ತಿಂಗಳಿಗೆ 6,500 ರೂ. ವೇತನ ಪಡೆಯುತ್ತಿದ್ದರು. ಅದನ್ನು ಈಗ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಛತ್ತೀಸ್‌ಗಢದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ಇದ್ದು, ಜನಪ್ರಿಯ ಬಜೆಟ್ ಮಂಡಿಸಲಾಗಿದೆ.
ಇದನ್ನೂ ಓದಿ: Congress plenary Session: ಸಾಮಾಜಿಕ ನ್ಯಾಯ ಭದ್ರತೆಗೆ ಜಾತಿಗಣತಿಗೆ ಕಾಂಗ್ರೆಸ್ ಒಲವು; ರಾಯಪುರ ಘೋಷಣೆ
ಚುನಾವಣೆಯ ಹಿನ್ನೆಲೆಯಲ್ಲಿ ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಉದ್ಯೋಗಸ್ಥರನ್ನು ಸೆಳೆಯುವ ಪ್ರಯತ್ನವನ್ನು ಬಜೆಟ್ ಮೂಲಕ ಕಾಂಗ್ರೆಸ್ ಸರ್ಕಾರ ಮಾಡಿದೆ. ಇದೇ ವೇಳೆ, ರಾಯಪುರ್ ಮತ್ತು ದುರ್ಗ ಮಧ್ಯೆ ಲೈಟ್ ಮೆಟ್ರೋ ಪ್ರಾಜೆಕ್ಟ್ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.