Site icon Vistara News

Chhota Rajan: ಕಾರ್ಮಿಕ ನಾಯಕ ಡಾ.ದತ್ತಾ ಸಾಮಂತ್ ಕೊಲೆ ಆರೋಪಿ ಗ್ಯಾಂಗಸ್ಟರ್ ಛೋಟಾ ರಾಜನ್ ಖುಲಾಸೆ!

Chhota Rajan and Dr Datta Samant

ಮುಂಬೈ: 1997ರಲ್ಲಿ ಸಂಭವಿಸಿದ ಮುಂಬೈನ ಖ್ಯಾತ ಟ್ರೇಡ್ ಯೂನಿಯನ್ ನಾಯಕ (Trade Union Leader) ಡಾ. ದತ್ತಾ ಸಾಮಂತ್ (Dr. Datta Samant Murder Case) ಕೊಲೆ ಪ್ರಕರಣದ ಆರೋಪಿ, ಗ್ಯಾಂಗಸ್ಟರ್ ರಾಜೇಂದ್ರ ಸದಾಶಿವ್ ನಿಕಾಲ್ಜೆ ಅಲಿಯಾಸ್ ಛೋಟಾ ರಾಜನ್(Chhota Rajan)ನನ್ನು ಸಿಬಿಐ ವಿಶೇಷ ನ್ಯಾಯಾಲಯ (CBI Special Court) ಶುಕ್ರವಾರ ಖುಲಾಸೆಗೊಳಿಸಿದೆ. ಡಾ. ದತ್ತಾ ಸಾಮಂತ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಇದೊಂದು ಹೈ ಪ್ರೊಫೈಲ್ ಕೊಲೆ ಪ್ರಕರಣವಾಗಿದ್ದರಿಂದ ಭಾರೀ ಗಮನ ಸೆಳೆದಿದ್ದು. ಈ ಕೊಲೆ ಹಿಂದಿನ ಸಂಚು ರೂಪಿಸಿದ ಆರೋಪವನ್ನು ಛೋಟಾ ರಾಜನ್ ಮೇಲೆ ಇತ್ತು. ರಾಜನ್ ವಿರುದ್ಧ ಎಲ್ಲ ಆರೋಪಗಳನ್ನು ಸಿಬಿಐ ಜಡ್ಜ್ ಎ ಎಂ ಪಾಟೀಲ್ ಅವರು ಖುಲಾಸೆಗೊಳಿಸಿದ್ದಾರೆ.

1997ರ ಜನವರಿ 16ರಂದು ಡಾ. ಸಾಮಂತ್ ಅವರು ತಮ್ಮ ಜೀಪಿನಲ್ಲಿ ಪೋವಯಿಂದ ಘಾಟ್ಕೋಪರ್‌ಗೆ ಹೊರಟಿದ್ದರು. ಜೀಪು ಪದ್ಮಾವತಿ ರಸ್ತೆಗೆ ಆಗಮಿಸುತ್ತಿದ್ದಂತೆ ನಾಲ್ವರು ಅಪರಿಚಿತರು ಡಾ. ಸಾಮಂತ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಈ ನಾಲ್ವರು ಜೀಪ್ ಅಡ್ಡಗಡ್ಡಿ ಸಾವಂತ್ ಅವರ ಮೇಲೆ 17 ಬುಲೆಟ್‌ಗಳನ್ನು ಹಾರಿಸಿದ್ದರು. ಸಾಮಂತ್ ಅವರನ್ನು ಹತ್ತಿರದ ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು.

ಘಟನೆಯ ನಂತರ ಡಾ.ಸಮಂತ್ ಅವರ ಚಾಲಕ ಭೀಮರಾವ್ ಸೋನಕಾಂಬಳೆ ಅವರು ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಅಪರಿಚಿತ ದಾಳಿಕೋರರ ವಿರುದ್ಧ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಯಿತು. ಈ ಗುಂಡಿನ ದಾಳಿಯಲ್ಲಿ ಸೋನಕಾಂಬಳೆ ಅವರಿಗೂ ಮುಖ ಮತ್ತು ಕುತ್ತಿಗೆಗೆ ಗಾಯಗಳಾಗಿದ್ದವು.

ಮೊದಲ ಹಂತದ ತನಿಖೆಯಲ್ಲಿ ಕೆಲವು ಸ್ಥಳೀಯರನ್ನು ಈ ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಜುಲೈ 2000ರಲ್ಲಿ ತೀರ್ಪು ಪ್ರಕಟಿಸಲಾಯಿತು. ರಾಜನ್ ವಿರುದ್ಧದ ಪ್ರಕರಣದಲ್ಲಿ ಇನ್ನೊಬ್ಬ ಗ್ಯಾಂಗ್‌ಸ್ಟರ್ ಗುರು ಸತಮ್ ಮತ್ತು ರಾಜನ್ ಅವರ ವಿಶ್ವಾಸಾರ್ಹ ಗ್ಯಾಂಗಸ್ಟರ್ ರೋಹಿತ್ ವರ್ಮಾ ಕೂಡ ತಲೆಮರೆಸಿಕೊಂಡಿದ್ದಾನೆಂದು ತೋರಿಸಲಾಯಿತು ಮತ್ತು ಪ್ರತ್ಯೇಕ ವಿಚಾರಣೆಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಲೆಗೆ 25 ಲಕ್ಷ ರೂ ಬಹುಮಾನ ಘೋಷಿಸಿದ ರಾಷ್ಟ್ರೀಯ ತನಿಖಾ ದಳ

2015ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಛೋಟಾ ರಾಜನ್‌ನನ್ನು ಅರೆಸ್ಟ್ ಮಾಡಲಾಯಿತು. ಆ ಬಳಿಕ, ರಾಜನ್ ವಿರುದ್ಧ ಎಲ್ಲ ಕೇಸ್‌ಗಳನ್ನು ಕೇಂದ್ರ ತನಿಖಾ ದಳ(CBI) ತನ್ನ ಸುಪರ್ದಿಗೆ ತೆಗೆದುಕೊಂಡಿತು. ಡಾ. ಸಾಮಂತ್ ಕೊಲೆ ಪ್ರಕರಣದಲ್ಲೂ ರಾಜನ್‌ನನ್ನು ತೀವ್ರ ವಿಚಾರಣೆಗೊಳಪಡಿಸಿತು. ಅಂತಿಮವಾಗಿ ಈ ಕೊಲೆಯ ಸಂಚಿನ ಆರೋಪದಿಂದ ಈಗ ರಾಜನ್ ಮುಕ್ತರಾಗಿದ್ದಾರೆ. ಆದರೆ, ಅವರು ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಿಲ್ಲ. ಯಾಕೆಂದರೆ, ಅವರ ವಿರುದ್ಧ ಇನ್ನೂ ಹಲವು ಪ್ರಕರಣಗಳ ವಿಚಾರಣೆ ಬಾಕಿ ಇದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version