Site icon Vistara News

Tamil Nadu : ದೇಗುಲದಲ್ಲಿ ಪೂಜೆಗೆ ನಿರ್ಬಂಧ; ಅರ್ಚಕರ ವಿರುದ್ಧ ಕೇಸ್ ದಾಖಲಿಸಿದ ಅಧಿಕಾರಿಗಳು, ಪ್ರತಿಭಟನೆ

Scuffle at tamil nadu temple

ನವದೆಹಲಿ: ದೇವಾಲಯದ (Temple) ಪವಿತ್ರ ಪೀಠದ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಲು ಪೊಲೀಸರು ಮತ್ತು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (HR&CE) ಅಧಿಕಾರಿಗಳಿಗೆ ನಿರ್ಬಂಧಿಸಿದ ಚಿದಂಬರಂಪ ದೇಗುಲ ಅರ್ಚಕರ ವಿರುದ್ಧ ದೂರು ದಾಖಲಾಗಿದೆ. ತಮಿಳುನಾಡಿನ ದೇಗುಲಗಳ ಆಡಳಿತವನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ (Hindu Religious and Charitable Endowments Department) ಇಲಾಖೆಯು ನಿರ್ವಹಣೆ ಮಾಡುತ್ತದೆ. ದೇಗುಲದ ಕನಗಸಾಬಾಯಿ (chidambaram nataraja temple) ವೇದಿಕೆಯಲ್ಲಿ ಪೂಜೆ ಸಲ್ಲಿಸಲು ಅರ್ಚಕರು (priests) ನಿರ್ಬಂಧಿಸಿರುವ ಕುರಿತು ಇಲಾಖೆಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದೇಗುಲಕ್ಕೆ ಆಗಮಿಸಿದ್ದರು. ಆಗ ಅಧಿಕಾರಿಗಳು ಹಾಗೂ ಅರ್ಚಕರ ಮಧ್ಯೆ ಸಂಘರ್ಷ ನಡೆದಿದೆ.

ಎಚ್ ಆರ್ ಮತ್ತು ಸಿಇ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಚಿದಂಬರಂನ ನಟರಾಜ ದೇಗುಲದ ಒಳಗಿರುವ ಕನಗರಸಾಬಾಯಿ ಮೇಲೆ ಏರಿ ಪ್ರಾರ್ಥನೆ ಸಲ್ಲಿಸಲು ಮುಂದಾದರು. ಆಗ ಅರ್ಚಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಡೀ ದೇವಾಲಯವು ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಕನಗಸಾಬಾಯಿ ಎಂಬುದು ಎರಡು ತಮಿಳು ಪದಗಳಿಂದ ಉತ್ಪತ್ತಿಯಾಗಿದೆ. ಕನಗಮ್ ಎಂದರೆ ಬಂಗಾರ ಮತ್ತು ಸಾಬಾಯಿ ಎಂದರೆ ಆಸ್ಥಾನ. ದೇಗುಲದಲ್ಲಿರುವ ಮೂರ್ತಿಯ ಭರತ್ಯನಾಟ್ಯ ಪ್ರದರ್ಶನ ಮಾಡುತ್ತಿರುವ ಭಂಗಿಯಲ್ಲಿದೆ. ಹಾಗಾಗಿ, ಮೂರ್ತಿ ಇರುವ ಸ್ಥಳವನ್ನು ಕನಗಸಾಬಾಯಿ ಎಂದು ಕರೆಯಲಾಗುತ್ತದೆ. ಈ ಜಾಗಕ್ಕೆ ತೆರಳಿ ಅಧಿಕಾರಿಗಳು ಪ್ರಾರ್ಥನೆ ಸಲ್ಲಿಸಲು ಮುಂದಾದದ್ದು, ಪ್ರತಿಭಟನೆಗೆ ಕಾರಣವಾಗಿದೆ.

ತಿಲ್ಲೈ ನಟರಾಜ ದೇಗುಲದ ಆಡಳಿತ ನಡೆಸುವ ಅರ್ಚಕರು, ಭದ್ರತಾ ದೃಷ್ಟಿಯಿಂದ ನಾಲ್ಕು ದಿನಗಳ ಕಾಲ ನಡೆಯುವ ಆತಿ ತಿರುಮಂಜನಂ ಶುಭ ಕಾರ್ಯಕ್ರಮದ ಸಮಯದಲ್ಲಿ ಚಿನ್ನದ ವೇದಿಕೆಯ ಮೇಲೆ ಭಕ್ತರು ಹತ್ತುವುದನ್ನು ನಿಷೇಧಿಸಿದ್ದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಪೂಜೆ ಮಾಡಲು ಮತ್ತು ಆಭರಣಗಳ ಸುರಕ್ಷತೆಯ ಕಷ್ಟವಾಗುತ್ತದೆ. ಹಾಗಾಗಿ, ಮಂಡಳಿ ವಿಶೇಷ ಸಂದರ್ಭದಲ್ಲಿ ವೇದಿಕೆಯ ಮೇಲೇರಲು ಯಾರಿಗೂ ಅವಕಾಶವನ್ನು ನೀಡುವುದಿಲ್ಲ ಎಂಬುದು ಅರ್ಚಕರವಾದವಾಗಿದೆ.

ಈ ಸುದ್ದಿಯನ್ನೂ ಓದಿ: Double Murder | ದೇವಸ್ಥಾನ ಜಾಗದ ವಿಚಾರಕ್ಕೆ ಗಲಾಟೆ, ಮಹಿಳೆ ಸೇರಿ ಇಬ್ಬರ ಬರ್ಬರ ಹತ್ಯೆ

ಈ ಕುರಿತು ದೂರುಗಳ ಬಂದ ಹಿನ್ನೆಲೆಯಲ್ಲಿ ಎಚ್ ಆರ್ ಮತ್ತು ಸಿಇ ಅಧಿಕಾರಿಗಳು ದೇಗುಲದ ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿಟ್ಟಿದ್ದಾರೆ. ಭಕ್ತಾದಿಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಈ ನಿರ್ಧಾರವನ್ನು ಅರ್ಚಕರು ಬಲವಾಗಿ ವಿರೋಧಿಸಿದರು. ಕನಗಸಾಬಾಯಿ ಮೇಲೇರಿ ಪಾರ್ಥನೆ ಸಲ್ಲಿಸಲು ಮುಂದಾದ ಒಂದು ಗುಂಪು ಮತ್ತು ಅರ್ಚಕರ ನಿರ್ಧಾರವನ್ನು ಬೆಂಬಲಿಸುವ ಮತ್ತೊಂದು ದೇಗುಲದಲ್ಲಿ ಜಮಾವಣೆಯಾದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಈ ವೇಳೆ ಎರಡೂ ಕಡೆಯಿಂದಲೂ ವಾಗ್ವಾದ ನಡೆಯಿತು.

ಆಗ ಅಧಿಕಾರಿಗಳು ಕನಗಸಾಬಾಯಿ ವೇದಿಕೆಯನ್ನು ಏರಿ ಪೂಜೆ ಮಾಡಿದ್ದು ಸಂಘರ್ಷಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಹಿರಿಯ ಅರ್ಚಕರು ನದಾಯಿಯನ್ನು ಮುಚ್ಚುವಂತೆ ಚೀರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದೇ ವೇಳೆ, ಅರ್ಚಕರು ಕೂಡ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಿರಿಯ ಅರ್ಚಕರನ್ನು ಅಧಿಕಾರಿಗಳು ತಳ್ಳುತ್ತಿರುವ ದೃಶ್ಯಗಳಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಅರ್ಚಕರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಈ ಮಧ್ಯೆ, ಈ ವಿಷಯವು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version