ನವದೆಹಲಿ: ಪಾಕಿಸ್ತಾನವನ್ನು ತನ್ನ “ಆರ್ಥಿಕ ಬಲೆ”ಯಲ್ಲಿಯೇ ಉಳಿಸಿಕೊಳ್ಳಲು ಚೀನಾ ಎಂತಹ ಹೀನ ಕೆಲಸಕ್ಕೆ ಬೇಕಾದರೂ ಕೈ ಹಾಕುತ್ತದೆ. ಇದಕ್ಕಾಗಿ ಪಾಕ್ ಉಗ್ರ ಪೋಷಣೆಯನ್ನೂ ಬೆಂಬಲಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರೆರಾಷ್ಟ್ರದ ಪರ ವಕಾಲತ್ತೂ ವಹಿಸುತ್ತದೆ. ಕಮ್ಯುನಿಸ್ಟ್ ರಾಷ್ಟ್ರದ ಇಂತಹ ನರಿ ಬುದ್ಧಿಗೆ ಕನ್ನಡಿ ಹಿಡಿದಂತೆ, ಈಗ ಲಷ್ಕರೆ ತಯ್ಬಾ ಉಗ್ರ ಸಾಜಿದ್ ಮಿರ್‌ನನ್ನು (Sajid Mir) ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಹಾಗೂ ಅಮೆರಿಕ ಮಂಡಿಸಿದ ಪ್ರಸ್ತಾಪಕ್ಕೆ ಚೀನಾ ಅಡ್ಡಗಾಲು ಹಾಕಿದೆ.
ಸಾಜಿದ್ ಮಿರ್ ಲಷ್ಕರೆ ತಯ್ಬಾ ಉಗ್ರನಾಗಿದ್ದು, ೨೦೦೮ರಲ್ಲಿ ಮುಂಬೈನಲ್ಲಿ ನಡೆದ ದಾಳಿಯ ಪ್ರಮುಖ ಹ್ಯಾಂಡ್ಲರ್‌ಗಳಲ್ಲಿ ಒಬ್ಬನಾಗಿದ್ದಾನೆ. ಹಾಗಾಗಿ ಈತನನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಬೇಕು ಎಂದು ಭಾರತ ಹಾಗೂ ಅಮೆರಿಕ ಸತತವಾಗಿ ಪ್ರಯತ್ನಿಸುತ್ತಿವೆ. ವಿಶ್ವಸಂಸ್ಥೆಯಲ್ಲಿ ನಾಲ್ಕು ತಿಂಗಳಲ್ಲಿ ಈ ಕುರಿತು ಭಾರತ ಹಾಗೂ ಅಮೆರಿಕ ಮೂರು ಬಾರಿ ಪ್ರಸ್ತಾಪ ಸಲ್ಲಿಸಿದ್ದು, ಮೂರು ಬಾರಿಯೂ ಚೀನಾ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.
ಭಾರತ ಹಾಗೂ ಅಮೆರಿಕದ ಜಂಟಿ ಪ್ರಸ್ತಾಪಕ್ಕೆ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದರೆ ಆತನನ್ನು ಜಾಗತಿಕ ಉಗ್ರನೆಂದು ಪರಿಗಣಿಸಿ, ಅವನ ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ. ಹಾಗೆಯೇ, ಪ್ರಯಾಣ ನಿರ್ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಅದರೆ, ಪಾಕಿಸ್ತಾನದ ಮೇಲಿನ ಮಮತೆಯಿಂದಾಗಿ ಕಮ್ಯುನಿಸ್ಟ್ ರಾಷ್ಟ್ರವು ಪ್ರಸ್ತಾಪಕ್ಕೆ ಅಡ್ಡಗಾಲು ಹಾಕುತ್ತಿದೆ.
ಇದನ್ನೂ ಓದಿ | iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!