ಮಕ್ಕಳ ಎದುರು ಮಾತನಾಡುವಾಗ ತುಂಬ ಜಾಗೃತರಾಗಿರಬೇಕು. ಇಲ್ಲದೆ ಹೋದರೆ ಈ ತಂದೆಯ ಪರಿಸ್ಥಿತಿ ಅಥವಾ ಇಂಥ ಯಾವುದಾದರೂ ಒಂದು ಇಕ್ಕಟ್ಟಿನ ಸ್ಥಿತಿ ನಿಮಗೂ ಎದುರಾಗಬಹುದು. ಮಕ್ಕಳ ತಪ್ಪೇನೂ ಇರುವುದಿಲ್ಲ, ಆದರೆ ಪಾಲಕರು ದುಬಾರಿ ಬೆಲೆ ತೆರಬೇಕಾಗುತ್ತದೆಯಷ್ಟೇ…
ದಕ್ಷಿಣ ಚೀನಾದ ನಿವಾಸಿಯೊಬ್ಬರು ಬೆಳಗ್ಗಿನ ತಿಂಡಿ ತಿನ್ನುತ್ತ, ಪತ್ನಿಯ ಬಳಿ, ‘ನನ್ನ ಕಂಪ್ಯೂಟರ್ನಲ್ಲಿ ತುಂಬ ಜಂಕ್ಸ್ (ಅನುಪಯುಕ್ತ ವಸ್ತುಗಳು, ಕಸ) ಇವೆ ಎಂದು ಹೇಳಿದ್ದ. ಅದನ್ನು ಅಲ್ಲಿಯೇ ಇದ್ದ ಎರಡು ವರ್ಷದ ಮಗಳು ಕೇಳಿಸಿಕೊಂಡಿದ್ದಳು. ಹೀಗಾಗಿ ಆಕೆ ತನ್ನ ತಂದೆಗೆ ಸಹಾಯ ಮಾಡಬೇಕು. ಲ್ಯಾಪ್ಟಾಪ್ ಸ್ವಚ್ಛ ಮಾಡಿಕೊಡಬೇಕು ಎಂದು ನಿರ್ಧರಿಸಿದ್ದಳು. ಆದರೆ ಅದೇ ದೊಡ್ಡ ಎಡವಟ್ಟಾಗಿದೆ’
ಇತ್ತ ಅಪ್ಪ ತಿಂಡಿ ತಿಂದು, ಉಳಿದ ಕೆಲಸಗಳನ್ನೆಲ್ಲ ಮಾಡಿಕೊಳ್ಳುತ್ತಿದ್ದರೆ, ಆತನ ಲ್ಯಾಪ್ಟಾಪ್ನ್ನು ಎತ್ತಿಕೊಂಡು ಹೋದ ಎರಡು ವರ್ಷದ ಬಾಲೆ ಅದನ್ನು ಬಾತ್ರೂಮಿನಲ್ಲಿ ಬಕೆಟ್ನಲ್ಲಿ ನೀರಿನಲ್ಲಿ ನೆನೆ ಹಾಕಿದ್ದಳು. ಹಾಗೇ, ತನ್ನ ಪುಟ್ಟ ಕೈಗಳಿಂದ ಸೋಪ್ ಹಾಕಿ ಉಜ್ಜುತ್ತಿದ್ದಳು. ಮಗಳೆಲ್ಲಿ ಎಂದು ಹುಡುಕಿಕೊಂಡು ಬಂದ ಅಮ್ಮ ಈ ದೃಶ್ಯನೋಡಿ ಸಿಟ್ಟಿನಿಂದ ಕುದಿಯುತ್ತಿದ್ದರು. ಆದರೆ ಮಾಡೋದೇನು? ಆಗಲೇ ಆಕೆ ಲ್ಯಾಪ್ಟಾಪ್ನ್ನು ನೀರಿನಲ್ಲಿ ಮುಳುಗಿಸಿ ಇಟ್ಟಾಗಿತ್ತು. ಬಳಿಕ ಅದನ್ನು ವಿಡಿಯೊ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೊ ನೋಡಿದರೆ ಹುಡುಗಿಯ ಮುಗ್ಧತೆಗೆ ‘ಅಯ್ಯೊ’ ಎನ್ನಬೇಕು ಎನ್ನಿಸುತ್ತದೆ. ಆದರೆ ಆ ಅಪ್ಪನ ಪರಿಸ್ಥಿತಿ ನೆನಪಿಸಿಕೊಂಡಾಗಲೂ ‘ಅಯ್ಯೋ’ ಎಂಬ ಶಬ್ದವೇ ಉದ್ಘಾರವಾಗುತ್ತದೆ..!
ಇದನ್ನೂ ಓದಿ: Viral Video | ಪರಸ್ತ್ರೀಯೊಂದಿಗೆ ಹೊರಟಿದ್ದ ಚಿತ್ರ ನಿರ್ಮಾಪಕ; ತಡೆಯಲು ಬಂದ ಪತ್ನಿಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿ