ನವದೆಹಲಿ: ಉತ್ತರ ಪ್ರದೇಶದ ಆಗ್ರಾದಲ್ಲಿ ಚೀನಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ (Coronavirus) ದೃಢಪಟ್ಟಿದೆ. ಹಾಗಾಗಿ, ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಚೀನಾದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು ಡಿಸೆಂಬರ್ 23ರಂದು ದೆಹಲಿ ಮಾರ್ಗವಾಗಿ ಆಗ್ರಾಗೆ ಆಗಮಿಸಿದ್ದಾರೆ. ಅವರನ್ನು ಖಾಸಗಿ ಪ್ರಯೋಗಾಲಯದಲ್ಲಿ ತಪಾಸಣೆ ಮಾಡಲಾಗಿತ್ತು. ಇವರ ವರದಿ ಪಾಸಿಟಿವ್ ಬಂದಿದೆ. ಸದ್ಯ ಅವರಿಗೆ ಕೊರೊನಾದ ಲಕ್ಷಣಗಳಿಲ್ಲ. ಶಾಹ್‌ಗಂಜ್‌ನಲ್ಲಿರುವ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ” ಎಂದು ಚೀಫ್ ಮೆಡಿಕಲ್ ಆಫೀಸರ್ ಅರುಣ್ ಶ್ರೀವಾಸ್ತವ ಮಾಹಿತಿ ನೀಡಿದರು.
ವ್ಯಕ್ತಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರನ್ನೂ ತಪಾಸಣೆ ಮಾಡಲು ಸೂಚಿಸಲಾಗಿದೆ. ಚೀನಾದಲ್ಲಿ ಓಮಿಕ್ರಾನ್ ಉಪತಳಿ ಬಿಎಫ್.7 ಪ್ರಸರಣ ಜಾಸ್ತಿಯಾಗಿದೆ. ಭಾರತದಲ್ಲೂ ಇದೇ ಸೋಂಕು ಪತ್ತೆಯಾಗುತ್ತಿರುವ ಕಾರಣ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ | Coronavirus | ಕೊರೊನಾ ಭೀತಿ, ಇದುವರೆಗೆ ಕೇಂದ್ರ ತೆಗೆದುಕೊಂಡ ಪ್ರಮುಖ ಕ್ರಮಗಳು ಯಾವವು? ತಯಾರಿ ಹೇಗಿದೆ?