Site icon Vistara News

Rahul Gandhi | ಚೀನಾ ಯುದ್ಧಕ್ಕೆ ಸಿದ್ಧವಾಗುತ್ತಿದೆ, ಸರ್ಕಾರ ಮಲಗಿದೆ, ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ರಾಹುಲ್‌ ಗಾಂಧಿ ಟೀಕೆ

Rahul Gandhi Response Video Viral

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಡಿಸೆಂಬರ್‌ 9ರಂದು ಸಂಘರ್ಷ ನಡೆದಿದೆ. ಭಾರತದ ಯೋಧರು ಚೀನಾ ಸೈನಿಕರಿಗೆ ಪೆಟ್ಟು ನೀಡಿದರೂ ಗಡಿಯಲ್ಲಿ ಕಮ್ಯುನಿಸ್ಟ್‌ ರಾಷ್ಟ್ರದ ಕುತಂತ್ರಗಳು ನಡೆಯುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿರುವ ಮಧ್ಯೆಯೇ, “ಚೀನಾ ಯುದ್ಧಕ್ಕೆ ಸನ್ನದ್ಧವಾಗುತ್ತಿದೆ” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಎಚ್ಚರಿಕೆ ನೀಡಿದ್ದಾರೆ.

“ಗಡಿಯಲ್ಲಿ ಚೀನಾ ಯದ್ಧಕ್ಕೆ ಸಿದ್ಧವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರವು ಮಲಗಿದಂತೆ ಕಾಣುತ್ತಿದೆ. ಗಡಿಯಲ್ಲಿ ನಮ್ಮ ಯೋಧರಿಗೆ ಚೀನಾ ಸೈನಿಕರು ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಬಾಯ್ಮಾತಿನ ಪ್ರತಾಪ ತೋರಿಸುವ ಬದಲು ಗಡಿಯಲ್ಲಿ ಏನಾಗುತ್ತಿದೆ ಎಂಬ ವಾಸ್ತವವನ್ನು ಅರಿಯಬೇಕು. ಭಾರಿ ಎಚ್ಚರಿಕೆಯಿಂದ ಇರಬೇಕು” ಎಂದು ಭಾರತ್‌ ಜೋಡೋ ಯಾತ್ರೆ ಮಧ್ಯೆಯೇ ಜೈಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

“ನಾನು ಎರಡೂವರೆ ವರ್ಷದಿಂದ ಇದನ್ನೇ ಹೇಳುತ್ತಿದ್ದೇನೆ. ಈಗಾಗಲೇ ಭಾರತದ 2 ಸಾವಿರ ಚದರ ಕಿ.ಮೀ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ. ಸರ್ಕಾರವು ಘಟನೆಗಳ ಆಧಾರಿತವಾಗಿ ಮಾತನಾಡುತ್ತದೆ. ಆದರೆ, ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಚೀನಾದ ಯುದ್ಧ ಸಿದ್ಧತೆಯನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಿಲ್ಲ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | India China Clash | ಅರುಣಾಚಲ ಗಡಿಯಲ್ಲಿ ಚೀನಾ ಯೋಧರಿಗೆ ಭಾರತದ ಯೋಧರು ಹೇಗೆ ಬಡಿದರು? ಇಲ್ಲಿದೆ ವಿಡಿಯೊ

Exit mobile version