ನವದೆಹಲಿ: ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಚೀನಾದ ಶವೊಮಿ, 15 ಪ್ರತಿಶತ ಉದ್ಯೋಗ ಕಡಿತ ಮಾಡಿದೆ (Xiaomi Job cuts) ಎನ್ನಲಾಗಿದೆ. ಚೀನಾದ ಸೋಷಿಯಲ್ ಮೀಡಿಯಾಗಳಲ್ಲಿ ಶವೊಮಿ ಉದ್ಯೋಗ ಕಡಿತ ಬಗ್ಗೆ ಸಾಕಷ್ಟು ಪೋಸ್ಟ್‌ಗಳನ್ನು ಷೇರ್ ಮಾಡಲಾಗಿದೆ. ಈ ಪೋಸ್ಟ್‌ಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸೆಪ್ಟೆಂಬರ್ 30ಕ್ಕೆ ಶವೊಮಿ ಒಟ್ಟು 35,314 ಉದ್ಯೋಗಿಗಳನ್ನು ಹೊಂದಿದ್ದು, ಈ ಪೈಕಿ 32,000 ಜನರು ಚೀನಾದಲ್ಲಿದ್ದಾರೆ. ಉದ್ಯೋಗ ಕಡಿತ ಮಾಡುತ್ತಿರುವ ಬಗ್ಗೆ ಶವೊಮಿ ಇದೂವರೆಗೆ ಯಾವುದೇ ಖಚಿತ ಮಾಹಿತಿಯನ್ನು ನೀಡಿಲ್ಲ. ಆದರೆ, ಕೆಲಸ ಕಳೆದುಕೊಂಡವರು ಚೀನಾದ ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಷೇರ್ ಮಾಡಿಕೊಳ್ಳುತ್ತಿದ್ದಾರೆ.
ಸ್ಮಾರ್ಟ್‌ಫೋನ್ ಸೇರಿದಂತೆ ನಾನಾ ಗ್ಯಾಜೆಟ್‌ಗಳನ್ನು ಉತ್ಪಾದಿಸುತ್ತದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳ ಪೈಕಿ ಶವೊಮಿ ಅತಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲೂ ಶವೊಮಿ ಸ್ಮಾರ್ಟ್‌ಫೋನುಗಳಿಗೆ ಸಾಕಷ್ಟು ಬೇಡಿಕೆಯಿದೆ. ಬಜೆಟ್ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.
ಇದನ್ನೂ ಓದಿ | Tech layoffs | ಗ್ರೇಟ್ ರಿಸೆಶನ್ ಮಟ್ಟವನ್ನೂ ಮೀರಿದ ಐಟಿ ಉದ್ಯೋಗ ಕಡಿತ, 2023ರಲ್ಲಿ ಮತ್ತಷ್ಟು ಜಾಬ್ ಕಟ್?