ನವದೆಹಲಿ: 10ನೇ ತರಗತಿಯ ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಷನ್ (ICSE) ಹಾಗೂ 12ನೇ ತರಗತಿಯ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ISC) ಪರೀಕ್ಷೆಯ ಫಲಿತಾಂಶವನ್ನು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (CISCE Results 2023) ಪ್ರಕಟಿಸಿದೆ. ಐಸಿಎಸ್‌ಇಯಲ್ಲಿ ರುಶಿಲ್ ಕುಮಾರ್ ದೇಶಕ್ಕೇ ಮೊದಲ ರ‍್ಯಾಂಕ್ ಪಡೆದರೆ, ಐಎಸ್‌ಸಿಯಲ್ಲಿ ರಿಯಾ ಅಗರ್ವಾಲ್ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಐಸಿಎಸ್‌ಇ ಪರೀಕ್ಷೆಯು ಫೆಬ್ರವರಿ 27ರಿಂದ ಮಾರ್ಚ್ 29ರವರೆಗೆ ನಡೆದಿದ್ದವು. ಐಎಸ್‌ಸಿ ಪರೀಕ್ಷೆಯು ಫೆಬ್ರವರಿ 13ರಿಂದ ಮಾರ್ಚ್ 21ರವರೆಗೆ ನಡೆದಿದ್ದವು. ಎರಡೂ ಪರೀಕ್ಷೆಗೆ 2.5 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಐಎಸ್‌ಸಿಇ 10 ಟಾಪರ್‌ಗಳು
- ರುಶಿಲ್ ಕುಮಾರ್
- ಅನನ್ಯಾ ಕಾರ್ತಿಕ್
- ಶ್ರೇಯಾ ಉಪಾಧ್ಯಾಯ
- ಅದ್ವಯ್ ಸರ್ದೇಸಾಯಿ
- ಯಶ್ ಮನೀಶ್
- ಭಾಸೇನ್ ತನಯ್
- ಸುಶೀಲ್ ಶಾ
- ಹಿಯಾ ಸಂಘ್ವಿ
- ಅವಿಶಿ ಸಿಂಗ್
- ಸಂಬಿತ್ ಮುಖ್ಯೋಪಾಧ್ಯಾಯ
ಐಎಸ್‌ಸಿ ಟಾಪರ್‌ಗಳು (ಜಂಟಿ)
ರಿಯಾ ಅಗರ್ವಾಲ್
ಇಪ್ಶಿತಾ ಭಟ್ಟಾಚಾರ್ಯ
ಮೊಹಮ್ಮದ್ ಆರ್ಯನ್ ತಾರಿಕ್
ಶುಭಂ ಕುಮಾರ್ ಅಗರ್ವಾಲ್
ಮಾನ್ಯ ಗುಪ್ತಾ
ನೀವೂ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ; ಹುಡುಗಿಯರದೇ ಮೇಲುಗೈ, ಬೆಂಗಳೂರು 2ನೇ ಸ್ಥಾನದಲ್ಲಿ