ಕೋಲ್ಕೊತ್ತಾ: ಕೋಲ್ಕೊತ್ತಾದ ಇಂಡಿಯನ್ ಮ್ಯೂಸಿಯಂನಲ್ಲಿ ಕೇಂದ್ರ ಔದ್ಯಮಿಕ ಭದ್ರತಾ ಪಡೆ (CISF) ಜವಾನನೊಬ್ಬ ಗುಂಡು ಹಾರಿಸಿ ತನ್ನ ಮೇಲಧಿಕಾರಿಯೊಬ್ಬರನ್ನು ಕೊಂದಿದ್ದಾನೆ. ಹಲವರು ಗಾಯಗೊಂಡಿದ್ದಾರೆ.
ಸಿಐಎಸ್‌ಎಫ್ ಯೋಧ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಸಾವಿಗೆ ಕಾರಣನಾಗಿದ್ದಾನೆ. ಇತರ ಹಲವು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ. ಇಂಡಿಯನ್ ಮ್ಯೂಸಿಯಂನ ಬ್ಯಾರೆಕ್‌ನಲ್ಲಿ ಈ ಘಟನೆ ನಡೆದಿದೆ. ಕೋಲ್ಕೊತ್ತಾದ ಹೃದಯ ಭಾಗದಲ್ಲಿರುವ ಈ ಮ್ಯೂಸಿಯಂ ಅನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ನೋಡಿಕೊಳ್ಳುತ್ತಿದೆ. 2019ರಲ್ಲಿ ಇದರ ರಕ್ಷಣೆಗಾಗಿ CISF ಅನ್ನು ನಿಯೋಜಿಸಲಾಗಿದೆ. ಪ್ರಸ್ತುತ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ತಪ್ಪಿತಸ್ಥ ಯೋಧನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಬಿಎಸ್‌ಎಫ್ ಸೇರಿದಂತೆ ಅರೆಸೇನಾಪಡೆಗಳಲ್ಲಿ ಕೆಲಸ ಹಾಗೂ ಮೇಲಧಿಕಾರಿಗಳ ಒತ್ತಡ ಹೆಚ್ಚಳದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಬಂದೂಕನ್ನು ಕೈಗೆತ್ತಿಕೊಳ್ಳುತ್ತಿರುವ ಯೋಧರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ: ವಿಸ್ತಾರ Explainer: ಹೋಮಿ ಭಾಭಾ, ಶಾಸ್ತ್ರಿಯವರನ್ನು ಅಮೆರಿಕ ಕೊಂದಿತೇ? ವೆಬ್ ಸರಣಿ ಎಬ್ಬಿಸಿದ ಕುತೂಹಲ