ನವದೆಹಲಿ: ಕಳೆದ ವಾರ ಸಂಭವಿಸಿದ ಸಂಸತ್ ಭದ್ರತಾ ವೈಫಲ್ಯದಿಂದ (Parliament Security Breach) ಎಚ್ಚೆತ್ತುಕೊಂಡಿರುವ ಸರ್ಕಾರವು, ಸಂಸತ್ತಿನ ಭದ್ರತಾ ಹೊಣೆಯನ್ನು ದಿಲ್ಲಿ ಪೊಲೀಸ್‌ಗೆ (Delhi Police) ಬದಲಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ(Central Industrial Security Force- CISF) ವಹಿಸಿದೆ. ಬುಧವಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಪ್ರವೇಶ ಜವಾಬ್ದಾರಿ ಸೇರಿದಂತೆ ಸಂಸತ್ತಿನ ಎಲ್ಲ ಭದ್ರತೆಯ ಹೊಣೆಗಾರಿಕೆಯನ್ನು ಸಿಐಎಸ್‌ಫ್ ನೋಡಿಕೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವಾಲಯವು (Union Home Ministry) ತಿಳಿಸಿದೆ.
ಸಂಸತ್ತಿನ ಕಟ್ಟದೊಳಗಿನ ಭದ್ರತೆಯ ಹೊಣೆಗಾರಿಕೆಯೂ ಎಂದಿನಂತೆ ಲೋಕಸಭಾ ಸಚಿವಾಲಯವೇ ನೋಡಿಕೊಳ್ಳಲಿದೆ. ಹಾಗೆಯೇ, ಸಂಸತ್ತಿನ ಹೊರ ಆವರಣದ ಸುರಕ್ಷತೆಯನ್ನು ದಿಲ್ಲಿ ಪೊಲೀಸ್ ನೋಡಿಕೊಳ್ಳಲಿದೆ. ಈ ಬದಲಾವಣೆಯನ್ನು – ವಿಭಿನ್ನ ಏಜೆನ್ಸಿಗಳು ಪರಸ್ಪರರ ರೀತಿಯಲ್ಲಿ ಪಡೆಯುವ ಬದಲು ಪ್ರೋಟೋಕಾಲ್‌ಗಳನ್ನು ಸುವ್ಯವಸ್ಥಿತಗೊಳಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ ಎಂದು ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಸಿಎಸ್ಐಎಫ್ ಸೂಕ್ಷ್ಮ ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಮಗ್ರ ಭದ್ರತಾ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಪ್ರಸ್ತುತ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಪರಮಾಣು ಸೌಲಭ್ಯಗಳನ್ನು ಒಳಗೊಂಡಂತೆ 350 ಕ್ಕೂ ಹೆಚ್ಚು ಸ್ಥಳಗಳನ್ನು ಕಾವಲು ಕಾಯುತ್ತಿದೆ.
ಡಿಸೆಂಬರ್ 13ರಂದು ಇಬ್ಬರು ಯುವಕರು ಲೋಕಸಭೆ ಗ್ಯಾಲರಿಗೆ ಹೋಗಿ, ಅಲ್ಲಿಂದ ಸಂಸದರಿದ್ದ ಫ್ಲೋರ್‌ಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ್ದರು. ಇದರೊಂದಿಗೆ ಸಂಸತ್ ಭದ್ರತಾ ವೈಫಲ್ಯದ ಕುರಿತು ಚರ್ಚೆಗೆ ಕಾರಣವಾಗಿದೆ. ಈ ಇಬ್ಬರು ಮೈಸೂರು-ಕೊಡಗು ಸಂಸದ, ಬಿಜೆಪಿಯ ಪ್ರತಾಪ್ ಸಿಂಹ ಅವರ ಶಿಫಾರಸಿನ ಮೂಲಕವೇ ಲೋಕಸಭೆ ಬಂದಿದ್ದರು. ಭಾರೀ ಭದ್ರತೆಯ ನಡುವೆಯು ಯುವಕರಿಬ್ಬರು ಹೇಗೆ ಬಣ್ಣದ ಹೊಗೆ ಕ್ಯಾನಸ್ಟ್‌ರಗಳನ್ನು ಸಂಸತ್ತಿನೊಳಗೆ ತೆಗೆದುಕೊಂಡ ಹೋಗಲು ಯಶಸ್ವಿಯಾಗಿದ್ದರು.
ಇಬ್ಬರು ಯುವಕರು ಲೋಕಸಭೆಯಲ್ಲಿ ಹೊಗೆ ಬಾಂಬ್ ಸಿಡಿಸಿದರೆ ಮತ್ತಿಬ್ಬರು ಸಂಸತ್ತಿನ ಹೊರಗೆ ಹೊಗೆ ಬಾಂಬ್ ಸಿಡಿಸಿ ಪ್ರತಿಭಟನೆ ನಡೆಸಿದ್ದರು, ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಪಾದಿತ ಮಾಸ್ಟರ್ ಮೈಂಡ್ ಸೇರಿದಂತೆ ಇನ್ನಿಬ್ಬರು ಸಹ ಬಂಧನದಲ್ಲಿದ್ದಾರೆ, ಆದರೆ ಇಡೀ ಘಟನೆಯು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಯಿತು, ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದಿಂದ ಉತ್ತರವನ್ನು ಕೋರುತ್ತಿವೆ.
ಈ ಸುದ್ದಿಯನ್ನೂ ಓದಿ: Security breach in Lok Sabha: ಸಂಸತ್ ಭದ್ರತಾ ವೈಫಲ್ಯ ಕುರಿತು ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ಈ ಎಲ್ಲ ಅಪಸವ್ಯದ ಹಿನ್ನೆಲೆಯಲ್ಲಿ ಇದೀಗ ಸಂಸತ್ತಿನ ಭದ್ರತಾ ಹೊಣೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ವಹಿಸಲಾಗಿದೆ. ಈ ಮೂಲಕ ಸಂಸತ್ತಿನ ಭದ್ರತೆಯನ್ನು ಮತ್ತೊಂದು ಹಂತಕ್ಕೆ ಹೆಚ್ಚಿಸಲಾಗಿದೆ. ಸಂಸತ್ತಿನ ಭದ್ರತಾ ವೈಫಲ್ಯವು ಭಾರೀ ಆತಂಕಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಸಾಕಷ್ಟು ವಾಗ್ವಾದಕ್ಕೂ ಕಾರಣವಾಗಿದೆ. ಪರಿಣಾಮ ರಾಜ್ಯಸಭೆ ಮತ್ತು ಲೋಕಸಭೆಯಿಂದ 146ಕ್ಕೂ ಅಧಿಕ ಸಂಸದರನ್ನು ಅಮಾನತು ಮಾಡಲಾಗಿದೆ.
ಈ ಸುದ್ದಿಗೆ ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ