Site icon Vistara News

UP Police: 200 ರೂ. ವಾಪಸ್‌ ಕೇಳಿದ್ದಕ್ಕೆ ಬಾಲಕನನ್ನು ಬಟ್ಟೆ ಬಿಚ್ಚಿ, ಮದ್ಯ ಕುಡಿಸಿ ಥಳಿಸಿದರು!

Class 10 boy thrashed and stripped for asking to repay rs 200 says UP Police

ಲಕ್ನೋ, ಉತ್ತರ ಪ್ರದೇಶ: ಸಾಲ ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ 10ನೇ ತರಗತಿಯ ವಿದ್ಯಾರ್ಥಿಯನ್ನು (Class 10 Student) ಬೆತ್ತಲೆ ಮಾಡಿ(Boy Stripped), ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ, ಹಲ್ಲೆ ಮಾಡಿದ (Thrashed) ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ (Uttar Pradesh Jhansi) ನಡೆದಿದೆ. ಈ ಕುರಿತಾದ ವಿಡಿಯೋ ಕೂಡ ವೈರಲ್ ಆಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ(UP Police).

ಆರೋಪಿಗಳು ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆದು, ತಮ್ಮ ಫೋನ್‌ಗಳಲ್ಲಿ ಹಲ್ಲೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದೃಶ್ಯಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಸಂತ್ರಸ್ತ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಒಂದು ವೀಡಿಯೊದಲ್ಲಿ ಶಂಕಿತರು ಬಾಲಕನನ್ನು ಅವಾಚ್ಯವಾಗಿ ನಿಂದಿಸುತ್ತಿರುವುದನ್ನು ತೋರಿಸುತ್ತದೆ ಮತ್ತು ಆತನನ್ನು ವಿವಸ್ತ್ರಗೊಳಿಸುವುದನ್ನು ಕಾಣಬಹುದು. ಇದಕ್ಕೆ ಪ್ರತಿರೋಧ ತೋರಿದ ಬಾಲಕನಿಗೆ ಮುಖಕ್ಕೆ ಹೊಡೆಯುವುದನ್ನು ಕಾಣಬಹುದು.

ತಮ್ಮ ಕುಟುಂಬದ ಸದಸ್ಯರೊಂದಿಗೆ ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ತ ಬಾಲಕ, ವೈರಲ್ ಆಗಿರುವ ವಿಡಿಯೋದಿಂದ ತನಗೆ ತೀವ್ರ ಅವಮಾನವಾಗಿದೆ ಮತ್ತು ದುಃಖ ಕೂಡ ಆಗಿದೆ ಎಂದು ಹೇಳಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ಪ್ರಕರಣ ತನಿಖೆಯನ್ನು ಆರಂಭಿಸಿದ್ದಾರೆ.

ಸಂತ್ರಸ್ತ ಬಾಲಕ ತನ್ನ ಗೆಳೆಯನಿಗೆ 200 ರೂ. ಸಾಲ ನೀಡಿದ್ದ. ಈ ಹಣವನ್ನು ಆತ ವಾಪಸ್ ನೀಡಿರಲಿಲ್ಲ. ಹಣವನ್ನು ವಾಪಸ್ ನೀಡುವಂತೆ ಸಂತ್ರಸ್ತ ಬಾಲಕ ಒತ್ತಾಯಿಸಿದ್ದಾನೆ. ಈ ಘಟನೆಯು ಸುಮಾರು ಎರಡು ತಿಂಗಳ ಹಿಂದೆ ನಡೆದಿದ್ದು, ಅದೇ ಈಗಿನ ಜಗಳಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂತ್ರಸ್ತ ಬಾಲಕ ಹಾಗೂ ಆತನ ಸ್ನೇಹತ ಪಾರ್ಕ್‌ನಲ್ಲಿ ಕುಳಿತಿದ್ದರು. ತನ್ನ ತರಗತಿಯ ನಾಲ್ವರು ಸಹಪಾಠಿಗಳು ಪಾರ್ಕ್‌ಗೆ ಆಗಮಿಸಿ ಸಂತ್ರಸ್ತ ಬಾಲಕನನ್ನು ಕರೆದಿದ್ದಾರೆ. ಈ ನಾಲ್ವರ ಪೈಕಿ ಸಾಲ ಪಡೆದ ಬಾಲಕ ಕೂಡ ಇದ್ದ. ಆ ನಾಲ್ವರು ಇದ್ದ ಕಾರಿನತ್ತ ಸಂತ್ರಸ್ತ ಬಾಲಕ ಹೋಗುತ್ತಿದ್ದಂತೆ, ಆರೋಪಿಗಳು ಆತನನ್ನು ಕಾರಿನೊಳಗೆ ಎಳೆದುಕೊಂಡು, ಸೇನಾ ತರಬೇತಿ ನಡೆಯುವ ಹತ್ತಿರ ಅರಣ್ಯ ಪ್ರದೇಶಕ್ಕೆ ಹೋಗೋಣ ಎಂದು ತಿಳಿಸಿದ್ದಾರೆ.

ಹತ್ತಿರದ ಅರಣ್ಯ ಪ್ರದೇಶಕ್ಕೆ ರೀಚ್ ಆಗುತ್ತಿದ್ದಂತೆ ಇವರಿಗಾಗಿ ಅಲ್ಲಿ ಇನ್ನಿಬ್ಬರು ಇದ್ದರು. ಆಗಲೇ ಕುಡಿದ ನಶೆಯಲ್ಲಿದ್ದರು. ಅಲ್ಲದೇ, ಸಂತ್ರಸ್ತ ಬಾಲಕನಿಗೂ ಕುಡಿಯಲು ಒತ್ತಾಯಿಸಿದ್ದಾರೆ. ಅಲ್ಲದೇ ಆತನನ್ನು ಥಳಿಸಲು ಆರಂಭಿಸಿದ್ದಾರೆ. ಅಲ್ಲಿದ್ದ ಆರೂ ಜನರು ದೊಣ್ಣೆ ಮತ್ತು ಬೆಲ್ಟ್‌ಗಳಿಂದ ಹೊಡೆದಿದ್ದಾರೆ. ಅಲ್ಲದೇ ಬೆತ್ತಲೆಯಾಗಲು ಒತ್ತಾಯಿಸಿದ್ದಾರೆ. ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದರೂ, ಅವರ ಮನವಿಗೆ ಸ್ಪಂದಿಸದೇ ಥಳಿಸುವುದನ್ನು ಮುಂದುವರಿಸಿದ್ದಾರೆ ಎಂದು ಸಂತ್ರಸ್ತ ಬಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಈ ಸುದ್ದಿಯನ್ನೂ ಓದಿ: UP Police: ಮನೆಯ ಪಕ್ಕ ಮೂತ್ರ ವಿಸರ್ಜಿಸಿದ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್‌ನಿಂದ ಹೊಡೆದರು!

ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ, ಕೊಲ್ಲುವ ಬೆದರಿಕೆಯನ್ನು ಆರೋಪಿಗಳು ಹಾಕಿದ್ದರು. ಹೇಗೋ ಅಲ್ಲಿಂದ ತಪ್ಪಿಸಿಕೊಂಡ ಬಂದ ಬಾಲಕ, ಮನಗೆ ಓಡಿ ಹೋಗಿದ್ದಾನೆ. ಈ ಘಟನೆ ನಡೆದ ಎರಡು ದಿನಗಳ ಬಳಿಕ ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಹರಿಯ ಬಿಟ್ಟಿದ್ದಾರೆ ಎಂದು ಸಂತ್ರಸ್ತ ಬಾಲಕ ಹೇಳಿದ್ದಾನೆ.

ಈ ಸುದ್ದಿಯ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ ಮಾಡಿ ತಿಳಿಸಿ.

Exit mobile version