ನವದೆಹಲಿ: ಕಾನೂನು ಪ್ರವೇಶ ಪರೀಕ್ಷೆ (Law entrance test) ಸಿಎಲ್‌ಎಟಿ 2024ರ ರಿಸಲ್ಟ್ (CLAT Result 2024) ಅನ್ನು ಡಿಸೆಂಬರ್ 10, ಭಾನುವಾರ ಪ್ರಕಟಿಸಲಾಗಿದೆ. ಈ ಪರೀಕ್ಷೆಯನ್ನು ಬರೆದಿರುವ ಅಭ್ಯರ್ಥಿಗಳು ಸಿಎಲ್ಎಟಿ ರಿಸಲ್ಟ್ ಅನ್ನು ಅಧಿತೃತ consortiumofnlus.ac.in ಜಾಲತಾಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು. ರಿಸಲ್ಟ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ರಿಸಲ್ಟ್ ಪ್ರಕಟಿಸುವ ಮುನ್ನ ಡಿಸೆಂಬರ್ 9ರಂದು ಫೈನಲ್ ಆನ್ಸರ್ ಕೀ ಪ್ರಕಟಿಸಲಾಗಿತ್ತು ಮತ್ತು ಡಿಸೆಂಬರ್ 4 ಪ್ರಾವಿಷನಲ್ ಆನ್ಸರ್ ತಿಳಿಸಲಾಗಿತ್ತು. ಫಲಿತಾಂಶಗಳ ನಂತರ, ಪ್ರವೇಶ ಕಮ್ ಕೌನ್ಸೆಲಿಂಗ್ ಪ್ರಕ್ರಿಯೆಯ ನೋಂದಣಿಗಳು ಡಿಸೆಂಬರ್ 12 ರಂದು ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ 22ಕ್ಕೆ ಕೊನೆಗೊಳ್ಳುತ್ತದೆ.
ಸಿಎಲ್ಎಟಿ-2024 ಅಂತಿಮ ಉತ್ತರದ ಕೀಗಳ ಬಗ್ಗೆ ಕುಂದುಕೊರತೆಗಳನ್ನು ಹೊಂದಿರುವ ಅಭ್ಯರ್ಥಿಗಳು ತಕರಾರು ಸಲ್ಲಿಸಬಹುದು. ದೂರು ಸಲ್ಲಿಸಲು ಪೋರ್ಟಲ್ 2023 ಡಿಸೆಂಬರ್ 11 ರಂದು ಮಧ್ಯಾಹ್ನ 12 ಗಂಟೆಗೆ ತೆರೆಯುತ್ತದೆ.
CLAT 2024: ತಕಾರರು ಸಲ್ಲಿಸುವುದು ಹೇಗೆ?
-ಮೊದಲಿಗೆ ನಿಮ್ಮ ಸಿಎಲ್ಎಟಿ ಅಕೌಂಟ್‌ಗೆ ಲಾಗಿನ್ ಆಗಿ
-Submit Grievance ಬಟನ್ ಮೇಲ ಕ್ಲಿಕ್ ಮಾಡಿ
-ನಿಮ್ಮ ತಕರಾರಿನ ಸ್ವರೂಪವನ್ನು ತಿಳಿಸಿ
-ಗರಿಷ್ಠ ಸಾವಿರ ಅಕ್ಷರಿಗಳಿಗೆ ಮೀರದಂತೆ ನಿಮ್ಮ ತಕರಾರು ವಿವರಿಸಿ
-ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ
-ಘೋಷಣಾ ಪತ್ರವನ್ನು ಸಬ್‍ಮಿಟ್ ಮಾಡಿ
-ಇಷ್ಟಾದ ಮೇಲೆ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: UPSC Mains Result 2023: ಯುಪಿಎಸ್ಸಿ ಮುಖ್ಯ ಪರೀಕ್ಷೆಯ ರಿಸಲ್ಟ್ ಪ್ರಕಟ; ಚೆಕ್ ಮಾಡ್ಕೊಳ್ಳಿ