ಹೊಸದಿಲ್ಲಿ: ಇಡೀ ದೇಶಾದ್ಯಂತ ಮದರಸಾಗಳ(Closure of Madrasas) ಕಾರ್ಯಾಚರಣೆಯ ಬಗ್ಗೆ ಸಾಕಷ್ಟು ಸಂಶಯಗಳಿವೆ. ಇವುಗಳಲ್ಲಿ ಕೆಲವು ತಿಳಿವಳಿಕೆ ಕೊರತೆಯಿಂದ ಹುಟ್ಟಿದ್ದೂ ಇರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಕೆಲವು ಆರೋಪಗಳು, ಧಾರ್ಮಿಕ ಮೂಲಭೂತವಾದಿ ನಡೆಗಳು, ಅಲ್ಲಿನ ಶಿಕ್ಷಕರೇ ಉಗ್ರ ಚಟುವಟಿಕೆ(Terrorism Activities)ಗಳಲ್ಲಿ ಭಾಗಿಯಾಗಿ ಸಿಕ್ಕಿಬೀಳುತ್ತಿರುವ ವಿದ್ಯಮಾನಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಮದ್ರಸಾದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಈಗಾಗಲೇ ಉತ್ತರಪ್ರದೇಶದಲ್ಲಿ ಹಲವು ಮದರಸಾಗಳಿಗೆ ಬೀಗ ಜಡಿಯಲಾಗಿದೆ. ಹೀಗಿರುವಾಗ ಇದೀಗ ಮಧ್ಯಪ್ರದೇಶದಲ್ಲೂ ಮದರಸಾಗಳ ಬಂದ್‌ಗೆ ಕೂಗು ಕೇಳಿ ಬಂದಿದೆ. ಮಧ್ಯಪ್ರದೇಶದ ಬಿಜೆಪಿ ಶಾಸಕರ ಉಗ್ರರ ಮದರಸಾಗಳು ದೇಶಕ್ಕೆ ಮಾರಕ. ಹೀಗಾಗಿ ಅದನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದ ಖಂಡ್ವಾದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಉಗ್ರರನ್ನು ಅರೆಸ್ಟ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಶಾಸಕರಾದ (BJP MLA) ಉಷಾ ಠಾಕೂರ್(Usha Takur) ಮತ್ತು ಅಭಿಲಾಷ್ ಪಾಂಡೆ ಮದರಸಾಗಳು ಉಗ್ರರ ತಾಣವಾಗಿ ಬೆಳಯುತ್ತಿವೆ. ಅದನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪೂರಕವಾಗಿ ಬಿಜೆಪಿ ಶಾಸಕ ಅಭಿಲಾಷ್ ಪಾಂಡೆ ಅವರು ಅಲ್ಪಸಂಖ್ಯಾತರಿಗೆ ಧಾರ್ಮಿಕ ಅಥವಾ ಭಾಷಾವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುವ ಸಂವಿಧಾನದ 30 ನೇ ವಿಧಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯ ವಿಧಾನಸಭೆಯಲ್ಲಿ ಅನಧಿಕೃತ ನಿರ್ಣಯವನ್ನು ಮಂಡಿಸಿದ್ದಾರೆ.
ಮದರಸಾಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಂವಿಧಾನವು ನಿಗದಿಪಡಿಸಿದ ರಾಷ್ಟ್ರೀಯ ಶೈಕ್ಷಣಿಕ ಮಾನದಂಡಗಳಿಗೆ ಹೊಂದಿಕೆಯಾಗಬೇಕು ಎಂದು ಮಾಜಿ ಹಂಗಾಮಿ ಸ್ಪೀಕರ್ ಮತ್ತು ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಕೂಡ ಬೆಂಬಲ ಸೂಚಿಸಿದರು. ಮದರಸಾಗಳಂತಹ ಸಂಸ್ಥೆಗಳು ದೇಶವಿರೋಧಿ ಭಾವನೆಗಳನ್ನು ಬೆಳೆಸುತ್ತಿದ್ದರೆ ಅವುಗಳನ್ನು ಕಿತ್ತೊಗೆಯಬೇಕು ಎಂದರು.
ಕಾಂಗ್ರೆಸ್ ಕಿಡಿ
ಬಿಜೆಪಿಯ ನಡೆಗೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ಬಿಜೆಪಿ ಮದರಸಾಗಳನ್ನು ಗುರಿಯಾಗಿಸುವ ಮೂಲಕ ಭಾರತೀಯ ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ನಡೆಸುತ್ತಿದೆ. ಮದರಸಾಗಳನ್ನು ಗುರಿಯಾಗಿಸುವುದು ಭಾರತೀಯ ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ, ಇದು ಶಿಕ್ಷಣದ ಹಕ್ಕು ಸೇರಿದಂತೆ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುರ್ಜರ್ ವಾದಿಸಿದರು. ಅನೇಕ ಮದರಸಾಗಳು ಮುಗ್ಧ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ ಮತ್ತು ಕೆಲವು ಘಟನೆಗಳನ್ನು ಇಟ್ಟುಕೊಂಡು ಏಕಪಕ್ಷೀಯ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಅತೀಫ್ ಅಖೀಲ್ ಹೇಳಿದರು.
ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ