ಹೈದ್ರಾಬಾದ್: ‘ಮುಖ್ಯಮಂತ್ರಿ ಉಪಹಾರ ಯೋಜನೆ’ಗೆ(CM Breakfast Scheme) ತೆಲಂಗಾಣ ಸರ್ಕಾರವು ಶುಕ್ರವಾರ ಚಾಲನೆ ನೀಡಿದೆ. ಈ ಯೋಜನೆಯಡಿ ಪಂಚಾಯತ್ ರಾಜ್ ಇಲಾಖೆಯಿಂದ ನಡೆಯುವ ಶಾಲೆಗಳು ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರವನ್ನು ಒದಗಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕೆಗಳ ರಾಜ್ಯ ಸಚಿವ ಕೆ ಟಿ ರಾಮರಾವ್(K T Rama Rao) ಅವರು ಹೈದರಾಬಾದ್‌ನ ವೆಸ್ಟ್ ಮಾರೆಡ್‌ಪಲ್ಲಿಯ (West Marredpally) ಸರ್ಕಾರಿ ಪ್ರೌಢಶಾಲೆಯಲ್ಲಿ (Government High School) ಈ ಯೋಜನೆಗೆ ಚಾಲನೆ ನೀಡಿದರು. ಅಲ್ಲದೇ ವಿದ್ಯಾರ್ಥಿಗಳ ಜತೆಗೆ ಉಪಹಾರವನ್ನು ಸವಿದರು.
Minister @KTRBRS speaking after launching "CM's Breakfast Scheme" at Government School, West Marredpally in Secunderabad. https://t.co/DHEZurTjg3
— Minister for IT, Industries, MA & UD, Telangana (@MinisterKTR) October 6, 2023
ಯೋಜನೆಗೆ ಚಾಲನೆ ನೀಡುವ ವೇಳೆ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೆ ಟಿ ರಾಮ ರಾವ್ ಅವರು, ಸಿಎಂ ಉಪಹಾರ ಸ್ಕೀಮ್ ವಿನೂತನ ಯೋಜನೆಯಾಗಿದೆ. ಈ ಯೋಜನೆಯಡಿ, ರಾಜ್ಯದ ಪಂಚಾಯತ್ ರಾಜ್ ಶಾಲೆಗಳು ಸೇರಿದಂತೆ 27,147 ಶಾಲೆಗಳ 23 ಲಕ್ಷ ಮಕ್ಕಳಿಗೆ ಲಾಭವಾಗಲಿದೆ. ಈ ಯೋಜನೆಗಾಗಿ ಸರ್ಕಾರವು 400 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಹೇಳಿದರು.
ಉಪಹಾರವು ತುಂಬಾ ಪೌಷ್ಟಿಕವಾಗಿದೆ ಮತ್ತು ಇದು ತುಂಬಾ ರುಚಿಯಾಗಿದೆ ಎಂದು ಹೇಳಿದ ಕೆಟಿಆರ್ ಅವರು, ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಆಗಾಗ್ಗೆ ಮತ್ತು ನಿಯಮಿತವಾಗಿ ಗುಣಮಟ್ಟವನ್ನು ಪರೀಕ್ಷಿಸಲು ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳನ್ನು ಸೂಚಿಸಿದ್ದೇನೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: Students Fall Sick: ಬಿಸಿಯೂಟ ಸೇವಿಸಿ 41 ವಿದ್ಯಾರ್ಥಿಗಳು ಅಸ್ವಸ್ಥ
ತಮಿಳುನಾಡಿನಲ್ಲಿ 1 ರಿಂದ 5 ನೇ ತರಗತಿಯ ಶಾಲಾ ಮಕ್ಕಳಿಗೆ ಇದೇ ರೀತಿಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ ಕೆಟಿಆರ್, ಮಾದರಿಯನ್ನು ಅಧ್ಯಯನ ಮಾಡಲು ತಮಿಳುನಾಡಿಗೆ ತೆರಳಿದ್ದ ಅಧಿಕಾರಿಗಳ ತಂಡವು ಉತ್ತಮ ಮಾದರಿಯನ್ನು ಶೋಧಿಸಿದೆ. ತೆಲಂಗಾಣದಲ್ಲಿ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಯಸಿದ್ದರು ಎಂದು ಅವರು ಇದೇ ವೇಳೆ ಹೇಳಿದರು.
ಮುಂಜಾನೆಯೇ ಪಾಲಕರು ಕೆಲಸಕ್ಕೆ ಹೋಗುವ ವಿದ್ಯಾರ್ಥಿಗಳು ಶಾಲೆಗಳಿಗೆ ಬರುತ್ತಿಲ್ಲ. ಹಾಗಾಗಿ, ಅಂಥ ಮಕ್ಕಳು ಖಾಲಿ ಹೊಟ್ಟೆಯಲ್ಲಿ ತರಗತಿಗಳಿಗೆ ಹಾಜರಾಗಬಾರದು ಎಂಬುದು ಯೋಜನೆಯ ಉದ್ದೇಶವಾಗಿದೆ. ಮಕ್ಕಳಲ್ಲಿರುವ ಪೌಷ್ಟಿಕಾಂಶ ಕೊರತೆಯ ಸಮಸ್ಯೆ ನಿವಾರಣೆಗೂ ಈ ಯೋಜನೆಯು ನೆರವು ಒದಗಿಸಲಿದೆ ಎಂದು ಸಚಿವ ಕೆ ಟಿ ರಾಮ ರಾವ್ ಅವರು ತಿಳಿಸಿದರು.