1. ರೈತರಿಗೆ ಕನಿಷ್ಠ 5 ಗಂಟೆ ನಿರಂತರ ವಿದ್ಯುತ್ ಪೂರೈಸಿ: ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಖಡಕ್ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿ ದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವ ಮೂಲಕ ಲೋಡ್ ಶೆಡ್ಡಿಂಗ್ (Load Shedding) ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಸ್ಕಾಂಗಳ ಎಂ.ಡಿ.ಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
2. 3000 ಕ್ಯೂಸೆಕ್ ನೀರು ಬಿಡುಗಡೆ: CWRC ಆದೇಶ ಎತ್ತಿಹಿಡಿದ CWMA, ರಾಜ್ಯಕ್ಕೆ ಬರೆ
ಬೆಂಗಳೂರು: ಒಂದು ಕಡೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ನಿಷೇಧ ವಿಧಿಸಲಾಗಿದೆ. ಇನ್ನೊಂದೆಡೆ ಮೈಸೂರಿನಲ್ಲಿ ಮಹಿಷ ದಸರಾ (Mahisha dasara) ರ್ಯಾಲಿ ನಿರಾತಂಕವಾಗಿ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Cauvery Water Dispute : ರಾಜ್ಯಕ್ಕೆ ಕೈಕೊಟ್ಟ ಕಾವೇರಿ ಪ್ರಾಧಿಕಾರ; ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ
ಈ ಸುದ್ದಿಯನ್ನೂ ಓದಿ : Cauvery Water Dispute : ಸಿಡಬ್ಲ್ಯುಎಂಎ ಆದೇಶ ಪ್ರಶ್ನಿಸಿ ರಿವ್ಯೂ ಪಿಟಿಶನ್: ರಾಕೇಶ್ ಸಿಂಗ್
3. 42 ಕೋಟಿ ರೂ. ಒಡೆಯ ಅಂಬಿಕಾಪತಿ ಯಾರು? ದುಡ್ಡು ಎಲ್ಲಿಂದ ಬಂತು? ಎಲ್ಲಿಗೆ ಹೋಗ್ತಿತ್ತು?
ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ನಿರಂತರ ಐಟಿ ದಾಳಿಯಲ್ಲಿ (IT Raid) ಅತಿ ಹೆಚ್ಚು ಸುದ್ದಿಯಾಗಿದ್ದು ಒಂದೇ ಮನೆಯಲ್ಲಿ 42 ಕೋಟಿ ರೂ. ನಗದು ಪತ್ತೆಯಾದ ಪ್ರಕರಣ. ಯಾರೂ ಉಪಯೋಗಿಸದ ಕೋಣೆಯ ಮಂಚದ ಅಡಿಯಲ್ಲಿ 22 ಬಾಕ್ಸ್‌ನಲ್ಲಿ ಕೂಡಿಟ್ಟ ಹಣ ಇದಾಗಿತ್ತು. 500 ರೂ. ನೋಟುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ರಾಜಕೀಯ ಉದ್ದೇಶವಿಲ್ಲದೆ ಯಾವುದೇ ಐಟಿ ದಾಳಿ ನಡೆಯಲ್ಲ: ಡಿ.ಕೆ. ಶಿವಕುಮಾರ್
ಈ ಸುದ್ದಿಯನ್ನೂ ಓದಿ : HD Kumaraswamy : ಮಂಚದ ಕೆಳಗೆ 42 ಕೋಟಿ!; ಇದು ಕಮಿಷನ್ ಕಲೆಕ್ಷನ್ ಹಣವೇ ಎಂದು ಕೇಳಿದ HDK
4. ನವರಾತ್ರಿಗೂ ಮುನ್ನ ಪಾಕ್ ಸದೆಬಡಿದು ಗೆಲುವಿನ ನಗೆ ಬೀರಲಿ ಭಾರತ
ಅಹಮದಾಬಾದ್: ವಿಶ್ವಕಪ್ ಪಂದ್ಯಾವಳಿಯ ದೊಡ್ಡ ಕದನವೊಂದು ಶನಿವಾರ ಅಹಮದಾಬಾದ್ನ(Ahmedabad) ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Narendra Modi Stadium) ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ಭಾರತ(IND vs PAK) ಮತ್ತು ಪಾಕಿಸ್ತಾನ. ಎರಡೂ ತಂಡಗಳು ಈವರೆಗೆ ಅಜೇಯವಾಗಿ ಉಳಿದಿರುವುದರಿಂದ ಹಾಗೂ ಎರಡೂ ಬಲಿಷ್ಠ ಪಡೆಗಳಾಗಿರುವುದರಿಂದ ಸಹಜವಾಗಿಯೇ ಈ ಪಂದ್ಯದ ತೂಕ ಹೆಚ್ಚು. ಭಾರತ ಈಗಾಗಲೇ ಅಫಘಾನಿಸ್ತಾನ ಮತ್ತು ಬಲಿಷ್ಠ ಆಸ್ಟ್ರೇಲಿಯಾವನ್ನು ಮಗುಚಿ ಹಾಕಿದರೆ, ಬಾಬರ್ ಪಡೆ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಮಣಿಸಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : IND vs PAK: ಯಾರಿಗೆ ನೆರವು ನೀಡಲಿದೆ ಮೋದಿ ಸ್ಟೇಡಿಯಂ ಪಿಚ್? ಸಂಭಾವ್ಯ ತಂಡ ಹೀಗಿದೆ
ಈ ಸುದ್ದಿಯನ್ನೂ ಓದಿ: Cricket in LA28 : ಇದು ಅಧಿಕೃತ ಮಾಹಿತಿ; ಅಮೆರಿಕ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತು ಸ್ಕ್ವಾಷ್ ಫಿಕ್ಸ್
5. ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಯುವ, ಭೇಟಿ ನೀಡಲೇಬೇಕಾದ ದೇಗುಲಗಳಿವು
ಬೆಂಗಳೂರು: ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಆರಂಭವಾಗಿದೆ. ಅಕ್ಟೋಬರ್ 15ರಂದು ನವರಾತ್ರಿ (Navaratri) ಶುರುವಾಗಲಿದೆ. ಮುಂದಿನ ಹತ್ತು ದಿನಗಳು ಆಚರಣೆ ಕಳೆಕಟ್ಟುತ್ತದೆ. ಕೆಟ್ಟದರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ರಾಜ್ಯದ ವಿವಿಧ ದೇವಿ ದೇವಸ್ಥಾನಗಳ ಪರಿಚಯ ಇಲ್ಲಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Dasara Tour: ದಸರಾ ರಜೆಯಲ್ಲಿ ಪ್ರವಾಸ ಮಾಡ್ತೀರಾ? ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ಹೀಗಿದೆ
6. ಉಗ್ರರ ನಿರ್ನಾಮಕ್ಕೆ ಇಸ್ರೇಲ್ ಸಜ್ಜು; 10 ಲಕ್ಷ ಜನ ಗಾಜಾ ತೊರೆಯಲು ಆದೇಶ!
ಜೆರುಸಲೇಂ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಂಘರ್ಷವು ಮತ್ತೊಂದು ಹಂತದ ಭೀಕರ ಸಮರಕ್ಕೆ ಸಾಕ್ಷಿಯಾಗುವ (Israel Palestine War) ಲಕ್ಷಣಗಳು ಗೋಚರಿಸಿವೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು (Hamas Terrorists) ದಾಳಿ ಮುಂದುವರಿಸಿದ್ದರೆ, ಗಾಜಾಪಟ್ಟಿಯ ನಿರ್ನಾಮಕ್ಕೆ ಇಸ್ರೇಲ್ ಸಜ್ಜಾಗುತ್ತಿದೆ. ಅದರಲ್ಲೂ, ಗಾಜಾದಲ್ಲಿರುವ ಸುಮಾರು 10.1 ಲಕ್ಷ ಜನ ಬೇರೆಡೆಗೆ ಸ್ಥಳಾಂತರಗೊಳ್ಳಬೇಕು ಎಂಬುದಾಗಿ ಇಸ್ರೇಲ್ ಸೂಚನೆ ನೀಡಿದ್ದು, ಶುಕ್ರವಾರವೇ (ಅಕ್ಟೋಬರ್ 13) ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಲಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ಬರಪೀಡಿತ ರಾಜ್ಯದತ್ತ ಕರ್ನಾಟಕ; ಬರ್ಬರ ಬರಕ್ಕೆ ತುತ್ತಾದ 216 ತಾಲೂಕು!
ಬೆಂಗಳೂರು: ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ (Drought in Karnataka) ತುತ್ತಾಗಿದೆ. ಮಳೆ ಇಲ್ಲದೆ ರೈತರು ಸೇರಿದಂತೆ ನಾಗರಿಕರು ಕಂಗೆಟ್ಟಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಕೇಂದ್ರ ಸರ್ಕಾರದ ಬರ ಮಾನದಂಡಗಳ (Central Government drought criteria) ಅನುಸಾರ ರಾಜ್ಯ ಸರ್ಕಾರ ಬರ ತಾಲೂಕುಗಳ ಪರಿಷ್ಕತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಅನುಸಾರ ರಾಜ್ಯದಲ್ಲೀಗ ಒಟ್ಟು 216 ತಾಲೂಕುಗಳು ಬರ ಪೀಡಿತವಾಗಿವೆ ಎಂದು ಘೋಷಿಸಲ್ಪಟ್ಟಿವೆ. ಈ ಮೂಲಕ ಸಂಪೂರ್ಣ ಬರಪೀಡಿತ ರಾಜ್ಯವಾಗಲಿದೆ ಎಂಬ ಆತಂಕ ಕಾಡಲಾರಂಭಿಸಿದೆ. ಇನ್ನು ಬರದಿಂದ ಬಾಕಿ ಉಳಿದಿರುವುದು ಕೇವಲ 20 ತಾಲೂಕುಗಳು ಮಾತ್ರ! ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಲ್ಲಿ ಮೊಬೈಲ್ ಟವರ್; ದೊಡ್ಡ ಸುದ್ದಿ ಎಂದ ಆನಂದ್ ಮಹೀಂದ್ರಾ
ನವ ದೆಹಲಿ: ಭಾರತೀಯ ಸೇನೆ (Indian Army) ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ (Siachen) ಮೊಬೈಲ್ ಟವರ್ ಅನ್ನು ಮೊದಲ ಬಾರಿಗೆ ಸ್ಥಾಪಿಸಲಾಗಿದೆ. ಭಾರತೀಯ ಸೇನೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) ಜತೆಗೂಡಿ ಈ ಸಾಹಸ ಕೈಗೊಂಡಿದೆ. ಈ ಮಾಹಿತಿಯನ್ನು ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ ಎಕ್ಸ್ ಮೂಲಕ ಹಂಚಿಕೊಂಡಿದ್ದು, ಸಚಿವ ದೇವುಸಿನ್ಹ ಚೌಹಾಣ್ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮಹತ್ವದ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ಪ್ರಶಾಂತ್ ನೀಲ್‌ಗೆ ಹೆದರಿದ್ರಾ ಶಾರುಖ್; ʻಡಂಕಿʼ ಮುಂದಕ್ಕೆ?
ಬೆಂಗಳೂರು ಶಾರುಖ್ ಖಾನ್ (Shah Rukh Khan) ಇತ್ತೀಚೆಗೆ ತಮ್ಮ ಮುಂದಿನ ಚಿತ್ರ ಡಂಕಿ ‘ಕ್ರಿಸ್‌ಮಸ್ ಅಥವಾ ಹೊಸ ವರ್ಷದ’ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು. ಪ್ರಭಾಸ್ ಅವರ ಮುಂದಿನ ಚಿತ್ರ ಸಲಾರ್ -ಭಾಗ 1 ಕೂಡ ಡಂಕಿ ಬಿಡುಗಡೆಯಾದ ದಿನವೇ ರಿಲೀಸ್ ಆಗಲಿದೆ. ಈ ಎರಡು ಸಿನಿಮಾಗಳು ಕ್ಲಾಶ್ ಆಗಲಿದೆ ಎಂದು ಈ ಮುಂಚೆಯೇ ವರದಿಯಾಗಿತ್ತು. ಆದರೀಗ ಡಂಕಿ ಸಿನಿಮಾ ರಿಲೀಸ್ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ರೈಡ್ ಕ್ಯಾನ್ಸಲ್ ಮಾಡಿದ ಮಹಿಳೆಯ ವಾಟ್ಸ್‌ಆ್ಯಪ್‌ಗೆ ನಗ್ನ ಚಿತ್ರ ಕಳಿಸಿದ ಕ್ಯಾಬ್ ಚಾಲಕ!
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕ್ಯಾಬ್ ಚಾಲಕನೊಬ್ಬ (Cab Driver) ಮಹಿಳೆಯೊಂದಿಗೆ ಅನುಚಿತವಾಗಿ (Assaulted Case) ವರ್ತಿಸಿದ್ದಾನೆ. ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿ, ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಸಿಟ್ಟಾದ ಆ ಕ್ಯಾಬ್ ಚಾಲಕ ಮಹಿಳೆಯ ವಾಟ್ಸ್‌ಆ್ಯಪ್ ನಂಬರ್‌ಗೆ ನಗ್ನ ಚಿತ್ರಗಳು, ವಿಡಿಯೊ ಜತೆಗೆ ನಿಂದಿಸಿ ಸಂದೇಶಗಳನ್ನು ಕಳಿಸಿ ಮುಜುಗರವನ್ನುಂಟು ಮಾಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.