ಅಮರಾವತಿ: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮುಖ್ಯವಾಗಿದ್ದು, ಜಗತ್ತಿನೊಂದಿಗೆ ಸ್ಪರ್ಧಿಸಲು ಸಜ್ಜುಗೊಳಿಲು ಅತಿದೊಡ್ಡ ಶೈಕ್ಷಣಿಕ ಟೆಕ್ ಕಂಪನಿ ಬೈಜೂಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶದ ಶೈಕ್ಷಣಿಕ ರಂಗದಲ್ಲಿ ಮಹತ್ವದ ಕ್ರಾಂತಿಯಾಗಲಿದೆ.
ಇದನ್ನೂ ಓದಿ | Video | ಆಂಧ್ರಪ್ರದೇಶ ಸಾಗರ ತೀರದಲ್ಲಿ ಅಬ್ಬರದ ಅಲೆಗಳೊಂದಿಗೆ ತೇಲುತ್ತ ಬಂತೊಂದು ಚಿನ್ನದ ಬಣ್ಣದ ರಥ !
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರಿ ಶಾಲೆಗಳಲ್ಲಿ 4 ರಿಂದ 10ನೇ ತರಗತಿವರೆಗೆ ಬೈಜೂಸ್‌ನೊಂದಿಗೆ ಶಿಕ್ಷಣ, ತಂತ್ರಜ್ಞಾನ ಕುರಿತ ತಿಳಿವಳಿಕೆ ನೀಡಲಾಗುವುದು. ತೆಲುಗು ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಸಮಗ್ರವಾಗಿ ಕಲಿಯಲು ಇದು ನೆರವಾಗಲಿದೆ. ಈ ವರ್ಷ ಪಠ್ಯಪುಸ್ತಕ ಮುದ್ರಣವಾಗಿದ್ದು, ದ್ವಿಭಾಷಾ ಮಾಹಿತಿಯಲ್ಲಿ ಮುಂದಿನ ವರ್ಷದಿಂದ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುತ್ತದೆ. ಪ್ರತಿ ವರ್ಷ 8ನೇ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗುವುದು. ಜತೆಗೆ ವಿಡಿಯೋ ವಿಷಯದ ಮೂಲಕ ಕಲಿಯಲು ತರಗತಿಯಲ್ಲಿ ಟಿವಿ ಹಾಕಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಉತ್ಸಾಹದಿಂದ ಕಲಿಯಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಶಾಲೆ ಮಕ್ಕಳು ಯಾವ ಖಾಸಗಿ ಶಾಲಾ ಮಕ್ಕಳಿಗೂ ಕಡಿಮೆ ಇಲ್ಲದೇ ಉತ್ತಮವಾದ ಶಿಕ್ಷಣ ಒದಗಿಸುವ ಕೆಲಸ ಆಗಬೇಕಿದೆ. ಸರ್ಕಾರಿ/ಖಾಸಗಿ ಎಂಬ ಯಾವ ಬೇಧಭಾವವೂ ಇಲ್ಲದೇ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬುದೇ ನಮ್ಮ ಉದ್ದೇಶ ಎಂದು ಹೇಳಿದರು.
ಇದನ್ನೂ ಓದಿ | ಆಂಧ್ರದಲ್ಲಿ 13 ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ: ಕೊಟ್ಟ ಮಾತಿನಂತೆ ನಡೆದುಕೊಂಡ ಸಿಎಂ ಜಗನ್