Site icon Vistara News

ತೆಲಂಗಾಣದಲ್ಲಿ ಎರಡು ಗ್ಯಾರಂಟಿಗಳಿಗೆ ಚಾಲನೆ ನೀಡಿದ ಸಿಎಂ ರೇವಂತ್ ರೆಡ್ಡಿ

CM Revanth Reddy launches two guarantee Schemes in Telangana

ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿಯಾಗುತ್ತಿದ್ದಂತೆ(Telangana Chief Minister), ಚುನಾವಣಾ ಪೂರ್ವ ಭರವಸೆ ನೀಡಿದ್ದ ಎಲ್ಲ ಆರೂ ಗ್ಯಾರಂಟಿಗಳ (Six Guarantee) ಯೋಜನೆ ಜಾರಿಗೆ ರೇವಂತ್ ರೆಡ್ಡಿ (CM Revanth Reddy) ಅವರು ಒಪ್ಪಿಗೆ ನೀಡಿದ್ದರು. ಆ ಪೈಕಿ , ಹೆಣ್ಣು ಮಕ್ಕಳಿಗೆ ಉಚಿತ ಬಸ್ ಸೇವೆ (Free Bus service for woman) ಮತ್ತು ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ (Health Insurance) ಒದಗಿಸುವ ಯೋಜನೆಗಳನ್ನು ಲಾಂಚ್ ಮಾಡದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಜನ್ಮ ದಿನದಂದೆ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.

ವಿಧಾನಸೌಧದ ಆವರಣದಲ್ಲಿ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಹಲವು ಸಚಿವರು, ನೂತನ ವಿಧಾನಸಭೆಯಲ್ಲಿ ಹಂಗಾಮಿ ಸ್ಪೀಕರ್ ಆಗಿರುವ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ರೇವಂತ್ ರೆಡ್ಡಿ ಎರಡು ಯೋಜನೆಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ತೆಲಂಗಾಣ ರಾಜ್ಯ ರಚನೆಯ ಭರವಸೆಯನ್ನು ಸೋನಿಯಾ ಗಾಂಧಿ ಅವರು ಈಡೇರಿಸಿದ ರೀತಿಯಲ್ಲಿ, ಕಾಂಗ್ರೆಸ್ ಸರ್ಕಾರವು 100 ದಿನಗಳಲ್ಲಿ ಆರು ಚುನಾವಣಾ ‘ಗ್ಯಾರಂಟಿ’ಗಳನ್ನು ಜಾರಿಗೊಳಿಸುವ ಮೂಲಕ ತೆಲಂಗಾಣವನ್ನು ಜನರ ಕಲ್ಯಾಣ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾದ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತದೆ ಎಂದು ಹೇಳಿದರು.

2009ರ ಡಿಸೆಂಬರ್ 9 ರಂದು ಆಗಿನ ಯುಪಿಎ ಸರ್ಕಾರ ತೆಲಂಗಾಣ ರಚನೆಯನ್ನು ಘೋಷಿಸಿದ್ದರಿಂದ ಡಿಸೆಂಬರ್ 9 ತೆಲಂಗಾಣಕ್ಕೆ ಹಬ್ಬದ ದಿನವಾಗಿದೆ ಎಂದು ಅವರು ಇದೇ ವೇಳೆ ಬಣ್ಣಿಸಿದರು. ಜನರ ಆಶೆಯಂತೆ ತೆಲಂಗಾಣ ರಾಜ್ಯವನ್ನು ಸಾಕಾರಗೊಳಿಸಿದವರು ಸೋನಿಯಾ ಗಾಂಧಿ ಎಂದು ಅವರು ಹೇಳಿದರು.

ರಾಜೀವ್ ಆರೋಗ್ಯ ಹೆಲ್ತ್ ಯೋಜನೆಯಡಿ ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ ದೊರೆಯಲಿದೆ. ಮಹಾಲಕ್ಷ್ಮೀ ಯೋಜನೆಯಡಿ ತೆಲಂಗಾಣ ರಾಜ್ಯ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಈ ಸಂದರ್ಭದಲ್ಲಿ ರೇವಂತ್ ರೆಡ್ಡಿ ಅವರು ರಾಜ್ಯ ಸರ್ಕಾರದ ಪರವಾಗಿ ಬಾಕ್ಸರ್ ನಿಖತ್ ಜರೀನ್ ಅವರಿಗೆ ಎರಡು ಕೋಟಿ ರೂಪಾಯಿ ಚೆಕ್ ಅನ್ನು ಪ್ರೋತ್ಸಾಹಕವಾಗಿ ಹಸ್ತಾಂತರಿಸಿದರು. ನಿಖತ್ ಝರೀನ್ ಎರಡು ಕೋಟಿ ರೂ.ಗಳ ಪ್ರೋತ್ಸಾಹಧನಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: ರೇವಂತ್ ರೆಡ್ಡಿ ಅಂದು ಎಬಿವಿಪಿ ನಾಯಕ; ಇಂದು ಕಾಂಗ್ರೆಸ್‌ನಿಂದ ತೆಲಂಗಾಣ ಸಿಎಂ!

Exit mobile version