Site icon Vistara News

CM Yogi Adityanath: ಗುಮಾಸ್ತರೂ ನಮ್ಮ ಫೋನ್ ಎತ್ತುತ್ತಿಲ್ಲ! ಯೋಗಿ ಎದುರು ಬಿಜೆಪಿ ಮುಖಂಡರ ಅಳಲು!

CM Yogi Adityanath

ಉತ್ತರ ಪ್ರದೇಶದಲ್ಲಿ (Uttar pradesh) ಜನಪ್ರತಿನಿಧಿಗಳ ಫೋನ್ ಸ್ವೀಕರಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಎಚ್ಚರಿಸಿದ್ದಾರೆ. ಅಧಿಕಾರಿಗಳು ಫೋನ್ ಎತ್ತುವುದಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಸಿಎಂ ಯೋಗಿ ಅವರಿಗೆ ದೂರು ನೀಡಿದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಪಕ್ಷದ ಮುಖಂಡರೊಬ್ಬರು ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಸಾಕಷ್ಟು ಹೆಚ್ಚಾಗಿದೆ. ಅಧಿಕಾರಿಗಳ ಅಧಿಕೃತ ಮೊಬೈಲ್ ಸಂಖ್ಯೆಗಳಿಗೆ ಕಾಲ್ ಮಾಡಿದರೂ ತೆಗೆದುಕೊಳ್ಳುವುದಿಲ್ಲ. ಈಗ ಸಣ್ಣ ಸರ್ಕಾರಿ ಗುಮಾಸ್ತರು ಕೂಡ ಇದನ್ನು ಮಾಡಲು ಪ್ರಾರಂಭಿಸಿದ್ದಾರೆ ಎಂದು ದೂರಿದರು. ಲೋಕಸಭೆ ಚುನಾವಣೆಯ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಹೆಚ್ಚುತ್ತಿದೆ. ಆದರೆ ತಮ್ಮ ಮಾತು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಯೋಗಿ ಆದಿತ್ಯನಾಥ್ ಸೋಮವಾರ ವಾರಣಾಸಿ ಮತ್ತು ಅಜಂಗಢ ಪ್ರವಾಸದಲ್ಲಿದ್ದರು. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು ಅದಕ್ಕೂ ಮುನ್ನ ಅಜಂಗಢಕ್ಕೆ ಭೇಟಿ ನೀಡಿದ್ದರು. ಇಲ್ಲಿ ಮೊದಲಿಗೆ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಎಲ್ಲಾ ಶಾಸಕರು, ಎಂಎಲ್ಸಿಗಳು, ಸಚಿವರು, ಕಮಿಷನರ್, ಐಜಿ, ಎಲ್ಲಾ ಡಿಎಂಗಳು ಮತ್ತು ಎಸ್ಪಿಗಳು ಹಾಜರಿದ್ದರು. ಈ ಸಭೆಯಲ್ಲಿ ಸಿಎಂ ಯೋಗಿ ಅವರ ಮುಂದೆ ಬಿಜೆಪಿ ಮುಖಂಡರೊಬ್ಬರು ಅಧಿಕಾರಗಳ ವಿರುದ್ಧ ನೇರವಾಗಿ ಮುಖ್ಯಮಂತ್ರಿಗೆ ದೂರು ನೀಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಶಾಸಕರಿಂದ ಸಲಹೆಗಳನ್ನು ಕೇಳಿದರು. ಯಾರಾದರೂ ಸಲಹೆ ನೀಡುವ ಮುನ್ನವೇ ವಿಧಾನ ಪರಿಷತ್ ಸದಸ್ಯ ರಾಮ್‌ಸುರತ್ ರಾಜ್‌ಭರ್ ಮಾತನಾಡಿ, ಅಧಿಕಾರಿಗಳು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಅಸಹಯಾಕತೆ ತೋಡಿಕೊಂಡರು.

ಆಗ ಸಿಎಂ ಯೋಗಿ, ಇಲ್ಲಿ ಕುಳಿತಿರುವ ಅಧಿಕಾರಿಗಳಲ್ಲಿ ಯಾರು ಹೀಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಆಗ ರಾಜ್ ಭರ್ ಅವರನ್ನು ಮರೆತುಬಿಡಿ, ಈಗ ಕೆಳಹಂತದ ಸರ್ಕಾರಿ ಗುಮಾಸ್ತರು ಕೂಡ ಇದನ್ನು ಮಾಡಲು ಪ್ರಾರಂಭಿಸಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಸಾಕಷ್ಟು ಹೆಚ್ಚಾಗಿದೆ. ಇತರ ಕೆಲವು ಬಿಲ್‌ಗಳಿಂದಲೂ ಇದೇ ರೀತಿಯ ದೂರುಗಳು ಬಂದಿವೆ ಎಂದು ಹೇಳಿದರು.

ಇದನ್ನೂ ಓದಿ: Union Budget 2024: ಕಾಶಿ ಕಾರಿಡಾರ್‌ ಮಾದರಿಯಲ್ಲಿ ಬಿಹಾರದ ಎರಡು ದೇಗುಲಗಳ ಅಭಿವೃದ್ಧಿ

ಆಗ ಸಿಎಂ ಯೋಗಿ ಅವರ ಬಳಿ ಏನಾದರೂ ಪುರಾವೆ ಇದ್ದರೆ ಖಂಡಿತ ಹೇಳಲಿ ಎಂದು ಹೇಳಿದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಾರೆ. ಸಿಎಂ ಯೋಗಿ ಕೆಲವೇ ಜನರನ್ನು ಭೇಟಿ ಮಾಡುತ್ತಾರೆ ಎಂದು ಅವರದೇ ಪಕ್ಷದವರೇ ಟೀಕಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯೋಗಿ ಆದಿತ್ಯನಾಥ್ ನಿರಂತರವಾಗಿ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

Exit mobile version