ನವದೆಹಲಿ: ಉಗ್ರರನ್ನು ಸದೆ ಬಡಿಯಲು (Anti-Terrorist Operation) ಮುಂದಾಗಿರುವ ಭದ್ರತಾ ಪಡೆಗಳು (Security Forces) ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯ ಕಾರ್ಯಾಚರಣೆಗೆ ಮುಂದಾಗಿದೆ. ಕಾಶ್ಮೀರ ಕಣಿವೆಯಲ್ಲಿ ಇದೇ (Jammu and Kashmir) ಮೊದಲ ಬಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಎಲೈಟ್ ಕೋಬ್ರಾ(Central Reserve Police Force – CoBRA) ಘಟಕವನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಈಗ ನಡೆಯುತ್ತಿರುವ ಉಗ್ರರನ್ನು ಸದೆ ಬಡೆಯುವ ಕಾರ್ಯಾಚರಣೆಯು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ರೀತಿಯಲ್ಲಿದೆ. ಹಾಗಾಗಿ, ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತಜ್ಞತೆಯನ್ನು ಸಾಧಿಸಿರುವ ಕೋಬ್ರಾ ಘಟಕವನ್ನು ಬಳಸಿಕೊಳ್ಳಲಾಗುತ್ತಿದೆ(Anantnag Encounter).
ಈ ಹಿಂದೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಬೀಡುಬಿಟ್ಟಿದ್ದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (CoBRA) ಘಟಕಗಳನ್ನು ಏಪ್ರಿಲ್‌ನಲ್ಲಿ ತರಬೇತಿಗಾಗಿ ಕರೆತಂದ ಬಳಿಕ, ಕಾಶ್ಮೀರದ ಕುಪ್ವಾರದಲ್ಲಿ ನಿಯೋಜನೆ ಮಾಡಲಾಗಿದೆ. ಆದಾಗ್ಯೂ, ಅವರಿಗೆ ಇನ್ನೂ ಯಾವುದೇ ಕಾರ್ಯಯೋಜನೆಗಳನ್ನು ನೀಡಲಾಗಿಲ್ಲ. ಹೀಗಿದ್ದಾಗ್ಯೂ ಘಟಕವು ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಅರಣ್ಯದಲ್ಲಿ ಗೆರಿಲ್ಲಾ ಮಾದರಿ ಹೋರಾಟವನ್ನು ನಡೆಸುವ ಸಾಮರ್ಥ್ಯವನ್ನು ಕೋಬ್ರಾ ಘಟಕ ಹೊಂದಿರುತ್ತದೆ. ಈ ಕೋಬ್ರಾ ಘಟಕದಲ್ಲಿರುವ ಯೋಧರಿಗೆ ಈ ಕುರಿತು ವ್ಯಾಪಕವಾದ ತರಬೇತಿಯನ್ನು ನೀಡಲಾಗಿರುತ್ತದೆ. ವಿಶೇಷವಾಗಿ ಅರಣ್ಯದಲ್ಲಿ ಅಡಗಿಕೊಂಡು ಹೋರಾಟ ಮಾಡುವುದು ಕರಗತವಾಗಿರುತ್ತದೆ.
ಈ ಸುದ್ದಿಯನ್ನೂ ಓದಿ: Anantnag Encounter: ಒಂದೆಡೆ ಕಾಡು, ಮತ್ತೊಂದೆಡೆ ಬೆಟ್ಟ; ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆಯುತ್ತಿರುವುದು ಹೇಗೆ?
ಕೇಂದ್ರ ಮೀಸಲು ಪೊಲೀಸ್ ಪಡೆಯು ಸುಮಾರು 3.25 ಲಕ್ಷ ಭದ್ರತಾ ಪಡೆ ಸಿಬ್ಬಂದಿಯನ್ನುಹೊಂದಿದೆ. ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರದ ಮೂರು ಪ್ರಮುಖ ಪ್ರದೇಶಗಳು, ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳು ಮತ್ತು ಭಾರತದ ಈಶಾನ್ಯದಲ್ಲಿ ದಂಗೆ-ಪೀಡಿತ ಪ್ರದೇಶಗಳಲ್ಲಿ ಗರಿಷ್ಠ ನಿಯೋಜನೆಯೊಂದಿಗೆ ಪ್ರಮುಖ ಆಂತರಿಕ ಭದ್ರತಾ ಯುದ್ಧ ಘಟಕವಾಗಿ ಹೊರಹೊಮ್ಮಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೋಳೆ ಅರಣ್ಯದಲ್ಲಿಅಡಗಿ ಕುಳಿತಿರುವ ಉಗ್ರರನ್ನು ವಿರುದ್ಧ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲೇ ಸಿಆರ್‌ಪಿಎಫ್‌ನ ಕೋಬ್ರಾ ನಿಯೋಜನೆಯ ಬೆಳವಣಿಗೆಯ ಭಾರೀ ಕುತೂಹಲವನ್ನು ಕೆರಳಿಸಿದೆ.