Site icon Vistara News

Idli Sambar : ಇಡ್ಲಿ ರುಚಿಯಿಲ್ಲದ ತಿಂಡಿ ಎಂದ ಕಾಮಿಡಿಯನ್​, ರುಬ್ಬಿದ ಅಭಿಮಾನಿಗಳು!

Comedian Calls Idli 'Tasteless White Sponge

#image_title

ಮುಂಬಯಿ: ದಕ್ಷಿಣ ಭಾರತೀಯರ ಜನಪ್ರಿಯ ತಿಂಡಿ (Idli Sambar) ಇಡ್ಲಿ ಜಗತ್ತನೇ ಆಳಲು ಹೊರಟಿದೆ. ದುಂಡು ದುಂಡಾಗಿರುವ ಹಾಗೂ ಮೃದುವಾದ ಸ್ವಾದಿಷ್ಟ ಇಡ್ಲಿಯನ್ನು ಇಷ್ಟಪಡದವರು ನತದೃಷ್ಟರು ಎಂದೇ ಹೇಳಬಹುದು. ಹಾಗೊಂದು ವೇಳೆ ಅದು ಇಷ್ಟ ಇಲ್ಲ ಎಂದು ಹೇಳಿದರೆ ದಕ್ಷಿಣ ಭಾರತೀಯರು ಸುಮ್ಮನಿರುತ್ತಾರೆಯೇ? ಹೇಳಿದವನನ್ನೇ ಹಿಡಿದು ಚೆನ್ನಾಗಿ ರುಬ್ಬುತ್ತಾರೆ. ಇಂಥದ್ದೇ ಪರಿಸ್ಥಿತಿ ಮುಂಬಯಿ ಮೂಲದ ಸ್ಟಾಂಡಪ್​ ಕಾಮಿಡಿಯನ್​ಗೆ ಎದುರಾಗಿದೆ. ಇಡ್ಲಿಗೊಂದು ರುಚಿಯಿಲ್ಲ, ಸ್ಪಾಂಜ್​ನಂತಿದೆ ಎಂದ ಅವರಿಗೆ ಇಡ್ಲಿ ಅಭಿಮಾನಿಗಳು ಬಗೆಬಗೆಯಾಗಿ ಪಾಠ ಹೇಳಿದ್ದಾರೆ.

ಗೋವಿಂದ್​ ಮೆನನ್​ ಎಂಬುವ ಸ್ಟಾಂಡ್​ಅಪ್​ ಕಾಮಿಡಿಯನ್​ ಇಡ್ಲಿ ಕುರಿತು ವಿಡಿಯೊವೊಂದನ್ನು ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಬಿಟ್ಟಿದ್ದಾರೆ. ಅದರಲ್ಲಿ ಅವರು ಇಡ್ಲಿ ಬಿಳಿ ಬಣ್ಣ ಸ್ಪಾಂಜ್​ ತುಂಡು. ಅದಕ್ಕೆ ಅದರದ್ದೇ ಆದ ರುಚಿಯೇ ಇಲ್ಲ. ನನಗೆ ಪ್ರತಿಯೊಂದು ಬಾರಿ ಇಡ್ಲಿ ಬಾಯಿಗೆ ಬಿದ್ದಾಗ ಶಿಕ್ಷೆ ಎಂದು ಅನಿಸುತ್ತದೆ. ಕೆಲವರು ಸಾಂಬಾರ್​ ಜತೆ ಹಾಕಿಕೊಂಡು ತಿಂದರೆ ಇಡ್ಲಿ ರುಚಿಯಾಗಿರುತ್ತದೆ ಎಂದು ಹೇಳುತ್ತಾರೆ. ಸಾಂಬರ್​ ಜತೆ ಬಿಳಿ ಟಿಶರ್ಟ್ ಹಾಕಿಕೊಂಡು ತಿಂದರೂ ರುಚಿಯಾಗಿರುತ್ತದೆ ಎಂದು ಹೇಳಿದ್ದಾರೆ. ಇದೇ ನೆಪದಲ್ಲಿ ಅವರು ಬಾಲಿವುಡ್​ ನಟ ರಣಬೀರ್ ಕಪೂರ್ ಅವರನ್ನು ಲೇವಡಿಯೂ ಮಾಡಿದ್ದಾರೆ. ಇಡ್ಲಿ ರಣಬೀರ್​ ಕಪೂರ್ ಅವರಂತೆಯೇ. ಹೇಳುವುದಕ್ಕೆ ಅವರು ದೊಡ್ಡ ನಟ. ಆದರೆ, ಅವರು ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Viral video | ಲಂಡನ್‌ ವ್ಯಕ್ತಿಯ ಭಾರತೀಯ ಅಡುಗೆ ಸರಣಿ, ಮನಗೆದ್ದ ರವೆ ಇಡ್ಲಿ ಸಾಂಬಾರ್!

ಕಾಮೆಡಿಯನ್​ ಮಾತಿಗೆ ಇಡ್ಲಿ ಅಭಿಮಾನಿಗಳು ನಾನಾ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ನಿನಗೆ ಇಡ್ಲಿಯ ಬಣ್ಣ ಯಾವುದೆಂದೂ ಗೊತ್ತಿಲ್ಲ ಅಂಥದ್ದರಲ್ಲಿ ಟೇಸ್ಟ್​ ಗೊತ್ತಾಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ನಿನ್ನ ಕೊರಕಲು ಹಲ್ಲಿನಲ್ಲಿ ಇಡ್ಲಿಯಲ್ಲ, ಯಾವುದೇ ತಿಂಡಿ ಕೊಟ್ಟರೂ ಟೇಸ್ಟ್​ ಗೊತ್ತಾಗದು ಎಂದು ಬರೆದುಕೊಂಡಿದ್ದಾರೆ.

ಇಡ್ಲಿಯನ್ನು ಜಗತ್ತೇ ಮೆಚ್ಚಿಕೊಂಡಿದೆ. ಅಂಥದ್ದರಲ್ಲಿ ನೀನು ನೆಚ್ಚದಿರುವಾಗ ತಪ್ಪು ನಿನ್ನದೇ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಜಗತ್ತಿನ ಕಾರ್ಯಚಟುವಟಿಕೆಗಳೆಲ್ಲವೂ ಚೆನ್ನಾಗಿ ನಡೆಯುವುದಕ್ಕೆ ಇಡ್ಲಿಯ ಪರಾಕ್ರಮವೇ ಕಾರಣ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಗದೊಬ್ಬರು, ರಣಬೀರ್​ ಕಪೂರ್ ಅಥವಾ ಇನ್ಯಾವುದಕ್ಕೂ ಹೋಲಿಸಿ ಇಡ್ಲಿಯ ಮರ್ಯಾದೆ ಕಳೆಯಬೇಡ. ನಿನಗೊಂದು ಅಸ್ತಿತ್ವವೇ ಇಲ್ಲ ಎಂದಿದ್ದಾರೆ.

Exit mobile version