Site icon Vistara News

Viral Video: ಪ್ರತಿಷ್ಠಿತ ಶೌರ್ಯ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ವಿಂಗ್​ ಕಮಾಂಡರ್ ದೀಪಿಕಾ ಮಿಶ್ರಾ

Commander Deepika Misra received Vayu Sena Medal Gallantry

#image_title

ಭಾರತೀಯ ವಾಯುಸೇನೆಯ ವಿಂಗ್​ ಕಮಾಂಡರ್​ ದೀಪಿಕಾ ಮಿಶ್ರಾ (Deepika Misra) ಅವರು ಗುರುವಾರ ಶೌರ್ಯ ಪ್ರಶಸ್ತಿ ಪುರಸ್ಕೃತರಾದರು. ಈ ಮೂಲಕ, ಶೌರ್ಯ ಪ್ರಶಸ್ತಿ ಪಡೆದ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೀಪಿಕಾ ಮಿಶ್ರಾ ಅವರು ಮೂಲತಃ ರಾಜಸ್ಥಾನದವರಾಗಿದ್ದು, ಸೇನಾ ಹೆಲಿಕಾಪ್ಟರ್​ನ ಪೈಲೆಟ್​ ಆಗಿದ್ದಾರೆ. ಮಧ್ಯಪ್ರದೇಶದಲ್ಲಿ 2021ರ ಅಗಸ್ಟ್​​​ನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದ ಸಂದರ್ಭದಲ್ಲಿ, ಜನ-ಜಾನುವಾರುಗಳ ರಕ್ಷಣಾ ಕಾರ್ಯಾಚರಣೆ ವೇಳೆ ದೀಪಿಕಾ ಮಿಶ್ರಾ ತೋರಿಸಿದ್ದ ಅಸಾಮಾನ್ಯ ಸಾಹಸವನ್ನು ಪರಿಗಣಿಸಿ ಅವರಿಗೆ ‘ವಾಯು ಸೇನಾ ಪದಕ (ಶೌರ್ಯ ಪ್ರದರ್ಶನಕ್ಕಾಗಿ ಕೊಡುವ ಪುರಸ್ಕಾರ) ನೀಡಿ ಗೌರವಿಸಲಾಗಿದೆ. ಇದುವರೆಗೆ ವಾಯುಪಡೆಯಲ್ಲಿ ಯಾವುದೇ ಮಹಿಳಾ ಅಧಿಕಾರಿಗಳೂ ಈ ಪದಕವನ್ನು ಗೆದ್ದಿರಲಿಲ್ಲ.

ನವದೆಹಲಿಯ ಸುಬ್ರೊತೊ ಪಾರ್ಕ್​​ನಲ್ಲಿರುವ ಏರ್​ಪೋರ್ಸ್​ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್​ ವಿ.ಆರ್​.ಚೌಧರಿ ಅವರು ದೀಪಿಕಾ ಮಿಶ್ರಾಗೆ ಈ ವಾಯುಸೇನಾ ಪದಕ ನೀಡಿ, ಗೌರವಿಸಿದರು. ವಾಯುಪಡೆದ 57 ಮತ್ತು ಭೂಸೇನೆಯ ಒಬ್ಬ ಅಧಿಕಾರಿಗೆ ಈ ವೇಳೆ ವಿವಿಧ ಪದಕ ನೀಡಲಾಯಿತು. ಐಎಎಫ್​​ನ ಇಬ್ಬರು ಅಧಿಕಾರಿಗಳು ಯುದ್ಧ ಸೇವಾ ಪದಕ, ದೀಪಿಕಾ ಮಿಶ್ರಾ ಸೇರಿ 13 ಅಧಿಕಾರಿಗಳು ವಾಯು ಸೇನಾ ಪದಕ (ಶೌರ್ಯ) ಮತ್ತು 3 ಮಂದಿ ವಾಯು ಸೇನಾ ಪದಕ, 30 ಅಧಿಕಾರಿಗಳು ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾಗಿದ್ದಾರೆ ಎಂದು ವಾಯುಸೇನಾ ವಕ್ತಾರರು ತಿಳಿಸಿದ್ದಾರೆ. ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಹಲವು ಮಹಿಳಾ ಅಧಿಕಾರಿಗಳು ಬೇರೆ ವಿಧದ ಪುರಸ್ಕಾರಗಳನ್ನು ಪಡೆದಿದ್ದಾರೆ. ಆದರೆ ಯಾವುದೇ ಮಹಿಳಾ ಅಧಿಕಾರಿಯೂ ಶೌರ್ಯ ವಿಭಾಗದಡಿ ವಾಯು ಸೇನಾ ಪದಕ ಗೆದ್ದಿರಲಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Missiles Misfired: ಭಾರತೀಯ ಸೇನೆ ಫೈರಿಂಗ್ ಅಭ್ಯಾಸದ ವೇಳೆ ತಪ್ಪಾಗಿ ಹಾರಿದ 3 ಕ್ಷಿಪಣಿಗಳು; ದೊಡ್ಡಮಟ್ಟದ ಸ್ಫೋಟ

2021ರ ಆಗಸ್ಟ್​ನಲ್ಲಿ ಮಧ್ಯಪ್ರದೇಶದಲ್ಲಿ ವಿಪರೀತ ಮಳೆಯಿಂದಾಗಿ ಭಯಂಕರ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಆ ವೇಳೆ ಅಲ್ಲಿ ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆ, ಸೇನಾ ಸಿಬ್ಬಂದಿ ಧಾವಿಸಿದ್ದರು. ದೀಪಿಕಾ ಮಿಶ್ರಾ ಈ ತಂಡದ ಭಾಗವಾಗಿದ್ದರು. ತುಂಬ ನಾಜೂಕಾಗಿ, ದುರ್ಗಮ ಪ್ರದೇಶದಲ್ಲಿ ಹೆಲಿಕಾಪ್ಟರ್​​ ಹಾರಾಡಿಸಿದ್ದರು, ಮಕ್ಕಳು-ಮಹಿಳೆ ಎಲ್ಲ ಸೇರಿ ಸುಮಾರು 47ಮಂದಿಯನ್ನು ಇವರು ರಕ್ಷಣೆ ಮಾಡಿದ್ದರು. ಇದೇ ಸಾಹಸವನ್ನು ಪರಿಗಣಿಸಿ ಅವರಿಗೆ ಈಗ ಶೌರ್ಯ ಪ್ರಶಸ್ತಿ ನೀಡಲಾಗಿದೆ.

Exit mobile version