ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಬಿಜಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಿ ಸಭ್ಯತೆಯ ಮಿತಿಯನ್ನು ಮೀರಿದೆ. ಅಂತೆಯೇ ಇಲ್ಲಿನ ಜಲ್ಪೈಗುರಿಯಲ್ಲಿ ಪಂಚಾಯತ್ ಚುನಾವಣೆಗೆ ಮುಂಚಿತವಾಗಿ ಆಯೋಜಿಸಲಾದ ರ್ಯಾಲಿಯ ವೇಳೆ ಹಾಕಲಾಗಿದ್ದ ಭಾರತೀಯ ಜನತಾ ಪಕ್ಷದ ಧ್ವಜದ (BJP Flag) ಮೇಲೆ ಕಾಂಡೋಮ್ ನೇತಾಡುತ್ತಿರುವುದು ಕಂಡುಬಂದಿದೆ. ಇದು ಟಿಎಮ್ಸಿಯ ಹೀನ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ. ಕಾಂಡೋಮ್ ವಿಚಾರದಲ್ಲಿ ಆರೋಪ, ಪ್ರತ್ಯಾರೋಪಗಳು ಮುಂದುವರಿದಿದೆ.
ಶಿಕಾರ್ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಕಾಡ್ಗಿಚ್ಚಿನಂತೆ ಹರಡಿತ್ತು. ಇದು ರಾಜಕೀಯ ನಾಯಕರು ಮತ್ತು ಕಾರ್ಯಕರ್ತರ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ನಕುಲ್ ದಾಸ್ ಗುರುವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ.
ದೂರಿನ ಸ್ವೀಕರಿಸಿದ ಪೊಲೀಸರು, ಈ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಕ್ರಮ ಕೈಗೊಂಡಿದ್ದಾರೆ. ಬಳಿಕ ಕಾಂಡೋಮ್ ಕುರಿತು ತನಿಖೆಯನ್ನು ಸಹ ಪ್ರಾರಂಭಿಸಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೇಸರಿ ಪಕ್ಷದ ಧ್ವಜದ ಮೇಲೆ ಕಾಂಡೋಮ್ ಹಾಕಿದೆ ಎಂದು ನಕುಲ್ ದಾಸ್ ಆರೋಪಿಸಿದ್ದಾರೆ. ಇದೊಂದು ಕೊಳಕು ಕೃತ್ಯ ಎಂದು ಜರೆದಿದ್ದಾರೆ. ಟಿಎಂಸಿ ಯುವ ಘಟಕದ ನಾಯಕಿ ಸಯಾನಿ ಘೋಷ್, ಶಿವಲಿಂಗದ ಮೇಲೆ ಕಾಂಡೋಮ್ ಹಾಕಿರುವ ದಿರಸು ಹಾಕಿದ ಮಾದರಿಯ ಕೃತ್ಯ ಇದಾಗಿದೆ ಎಂದು ಅವರು ಅರೋಪಿಸಿದ್ದಾರೆ.
ಬಿಜೆಪಿಯನ್ನು ದೂಷಿಸುವ ಮತ್ತು ಅದರ ಖ್ಯಾತಿಯನ್ನು ದುರ್ಬಲಗೊಳಿಸುವ ಉದ್ದೇಶದ ದುರುದ್ದೇಶಪೂರಿತ ಕೃತ್ಯ ಎಂದು ಅವರು ಹೇಳಿದ್ದಾರೆ. ಪಕ್ಷದ ವಕ್ತಾರರು ಈ ಕೃತ್ಯವನ್ನು ಖಂಡಿಸಿದ್ದು, ಇದು ಪಕ್ಷದ ವರ್ಚಸ್ಸಿಗೆ ಕಳಂಕ ತರುವ ಮತ್ತು ಅನಗತ್ಯ ವಿವಾದವನ್ನು ಸೃಷ್ಟಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ನುಡಿದಿದ್ದಾರೆ.
ಬಿಜೆಪಿ ಧ್ವಜಕ್ಕೆ ಕಾಂಡೋಮ್ ಅಂಟಿಸಿದ್ದು ರಾಜಕೀಯ ಕೃತ್ಯವೇ ಅಥವಾ ಲೈಂಗಿಕ ಆರೋಗ್ಯ ಮತ್ತು ಜಾಗೃತಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳತ್ತ ಗಮನ ಸೆಳೆಯುವ ಪ್ರಯತ್ನವೇ ಎಂದು ನಿರ್ಧರಿಸಲು ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ : Viral News: ಮೇಕೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಶಾರುಖ್ ಖಾನ್; ಬಕ್ರೀದ್ ಮುಗಿದರೂ ಇದೆಂಥ ಜಗಳ?
ಈ ಘಟನೆಯು ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ಹಕ್ಕುಗಳು ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ಬಿಜೆಪಿಯ ಮನಸ್ಥಿತಿಗೆ ಇದು ಸಾಕ್ಷಿ ಎಂದು ಟಿಎಂಸಿ ನಾಯಕರು ವಾದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿದ ಎಂದೂ ಹೇಳಿದ್ದಾರೆ.
ಇದು ನಾಚಿಕೆಗೇಡಿನ ಕೃತ್ಯ, ನಮ್ಮ ಪಕ್ಷ ಇದನ್ನು ಖಂಡಿಸುತ್ತದೆ. ಈ ಘಟನೆಗೆ ಅವರು ನಮ್ಮನ್ನು ದೂಷಿಸುತ್ತಿದ್ದಾರೆ ಆದರೆ ನಾವು ಇದನ್ನು ಮಾಡಿಲ್ಲ. ಯಾವುದೇ ಪಕ್ಷದ ಧ್ವಜಗಳನ್ನು ಕಿತ್ತುಹಾಕಬಾರದು ಅಥವಾ ಯಾವುದೇ ಪಕ್ಷದ ಧ್ವಜಗಳ ಮೇಲೆ ಏನನ್ನಾದರೂ ನೇತು ಹಾಕಬಾರದು. ಈ ಕೃತ್ಯವನ್ನು ನಾವು ಕಟ್ಟುನಿಟ್ಟಾಗಿ ಖಂಡಿಸುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಇದನ್ನು ಮಾಡಿದ್ದಾರೆ ಎಂದು ನಾನು ನಂಬುವುದಿಲ್ಲ ಎಂದು ಟಿಎಂಸಿಯ ಪ್ರಾದೇಶಿಕ ಅಧ್ಯಕ್ಷ ನಯನ್ ಬಸಕ್ ಹೇಳಿದ್ದಾರೆ.