ಲಖನೌ: ಹತ್ರಾಸ್ ಡಿಪೋದಿಂದ ಲಖನೌಗೆ ತೆರಳುತ್ತಿದ್ದ ಉತ್ತರ ಪ್ರದೇಶ ಸರಕಾರಿ ಬಸ್ನಲ್ಲಿ ಅದರ ಕಂಡೆಕ್ಟರ್ ಮಹಿಳೆಯೊಬ್ಬಳ ಜತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾನೆ. ಚಲಿಸುತ್ತಿರುವ ಬಸ್ನಲ್ಲಿ ಕಂಡಕ್ಟರ್ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಪ್ರಯಾಣಿಕರ ಮೊಬೈಲ್ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಕಂಡಕ್ಟರ್ ನಡೆಸಿದ್ದ ಕೃತ್ಯ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅದೇ ರೀತಿ ಕಂಡೆಕ್ಟರ್ ವಿರುದ್ಧ ಪ್ರಯಾಣಿಕರು ದೂರು ನೀಡಿದ್ದು ಬಳಿಕ ಅಧಿಕಾರಿಗಳು ಕಂಡೆಕ್ಟರ್ನನ್ನು ಕರ್ತವ್ಯದಿಂದ ವಜಾಗೊಳಿಸಿದ್ದಾರೆ.
A man had sex with a woman in a moving bus in Hathras. Don't these people care about these things that there are small children and elderly people in the bus. @Uppolice is requested to take action against this person with immediate effect.@hathraspolicepic.twitter.com/Fzhqam4en1
— 🇮🇳 DhotiRam Jhule 🕉️ (@DhotiRamJhule) July 1, 2023
ವೀಡಿಯೊ ಕ್ಲಿಪ್ನಲ್ಲಿ ಬಸ್ನಲ್ಲಿ ಪ್ರಯಾಣಿಕರು ನಿಧಾನವಾಗಿ ಕಂಡಕ್ಟರ್ ಮತ್ತು ಮಹಿಳೆ ಕುಳಿತಿರುವ ಸೀಟ್ನ ಬಳಿಗೆ ಹೋಗಿ ವಿಡಿಯೊ ಮಾಡಿದ್ದಾರೆ. ಕಂಡೆಕ್ಟರ್ ಮತ್ತು ಯುವತಿ ಕಂಬಳಿಯೊಂದನ್ನು ಹೊದ್ದುಕೊಂಡು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದರು. ವಿಡಿಯೊ ಮಾಡುವುದು ಗೊತ್ತಾದ ತಕ್ಷಣ ಕಂಡಕ್ಟರ್ ಕೋಪಗೊಂಡು ಪ್ರಯಾಣಿಕರ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಕಂಡೆಕ್ಟರ್ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ.
ವಾಗ್ವಾದದ ಸಮಯದಲ್ಲಿ, ಪ್ರಯಾಣಿಕರೊಬ್ಬರು ಒಂದು ಗಂಟೆಗೂ ಹೆಚ್ಚು ಕಾಲದಿಂದ ತಪ್ಪು ನಡೆಯುತ್ತಿದೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಆಲಂಬಾಗ್ ತಲುಪಿದ ನಂತರ ಬಸ್ ಕಂಡಕ್ಟರ್ ವಿರುದ್ಧ ದೂರು ದಾಖಲಿಸಲು ಅವರು ನಿರ್ಧರಿಸಿದ್ದು ಗೊತ್ತಾಗಿದೆ. ಹಲವಾರು ಪ್ರಯಾಣಿಕರು ಕಂಡಕ್ಟರ್ ನ ದುರ್ವರ್ತನೆ ಗಮನಿಸಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಫ್ರೀಪ್ರೆಸ್ ಜರ್ನಲ್ಸ್ ವರದಿಗಳ ಪ್ರಕಾರ, ಈ ಘಟನೆ 10 ದಿನಗಳ ಹಿಂದೆಯೇ ನಡೆದಿದೆ.
ಇದನ್ನೂ ಓದಿ : Viral News: ಪಕ್ಕದ ಮನೆಯವರ 32 ಮರ ಕಡಿದವನಿಗೆ 12 ಕೋಟಿ ರೂ. ದಂಡ, ಕತ್ತರಿಸಲು ಕಾರಣ ವಿಚಿತ್ರ
ಘಟನ ನಡೆದ ನಿಖರವಾದ ಸ್ಥಳ ವೀಡಿಯೊದಲ್ಲಿ ಗೊತ್ತಾಗಿಲ್ಲ. ಪ್ರಯಾಣಿಕರೊಬ್ಬರು ಅರ್ಧ ಗಂಟೆಯೊಳಗೆ ಮುಂಬರುವ ಆಲಂಬಾಗ್ ಬಸ್ ನಿಲ್ದಾಣದ ಬಗ್ಗೆ ಸುಳಿವು ನೀಡಿರುವ ಕಾರಣ ಇದು ಲಕ್ನೋ ಬಳಿ ನಡೆದಿದೆ ಎಂದು ಹೇಳಲಾಗಿದೆ.. ಅಧಿಕಾರಿಗಳು ಪ್ರಯಾಣಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ ಆತನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.
ಜಾಗರಣ್ ವರದಿ ಪ್ರಕಾರ, ಯುಪಿ ರಸ್ತೆ ಸಾರಿಗೆ ಬಸ್ ಅಲಿಗಢದಿಂದ ಲಕ್ನೋ ಕಡೆಗೆ ಹೋಗುತ್ತಿತ್ತು. ವೀಡಿಯೊ ವೈರಲ್ ಆದ ನಂತರ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕರು ಬಸ್ನ ಸಚಾಲಕ ಮತ್ತು ನಿರ್ವಾಹಕನ ವಿರುದ್ಧ ಕ್ರಮ ಕೈಗೊಂಡಿದೆ. ಘಟನೆ ಕುರಿತು ಸಮಗ್ರ ತನಿಖೆಯೂ ನಡೆಯುತ್ತಿದೆ.