Site icon Vistara News

Madhya Pradesh Polls: ಮಧ್ಯಪ್ರದೇಶ ಸಿಎಂ ವಿರುದ್ಧ ರಾಮಾಯಣದ ‘ಆಂಜನೇಯ’ ಸ್ಪರ್ಧೆ!

Congress Fields 'Hanuman' Actor Against Madhya Pradesh Chief Minister In Assembly Polls

Congress Fields 'Hanuman' Actor Against Madhya Pradesh Chief Minister In Assembly Polls

ಭೋಪಾಲ್:‌ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ (Madhya Pradesh Polls) ಬೆನ್ನಲ್ಲೇ ಕಾಂಗ್ರೆಸ್‌ 144 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯನ್ನು ಶತಾಯಗತಾಯ ಸೋಲಿಸಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Singh Chouhan) ವಿರುದ್ಧ ‘ರಾಮಾಯಣ’ ಸೀರಿಯಲ್‌ನಲ್ಲಿ ‘ಹನುಮಾನ್’‌ ಪಾತ್ರ ನಿರ್ವಹಿಸುತ್ತಿದ್ದ ನಟ ವಿಕ್ರಮ್‌ ಮಸ್ತಾಲ್ (Vikram Mastal) ಅವರಿಗೆ ಟಿಕೆಟ್‌ ನೀಡಿದೆ. ಆ ಮೂಲಕ ಮುಖ್ಯಮಂತ್ರಿ ವಿರುದ್ಧ ಜನಪ್ರಿಯ ನಟನನ್ನು ನಿಲ್ಲಿಸಿ ರಣತಂತ್ರ ಮಾಡಿದೆ.

ಆನಂದ್‌ ಸಾಗರ್‌ ನಿರ್ದೇಶನದ ರಾಮಾಯಣ ಧಾರಾವಾಹಿಯು 2008ರಲ್ಲಿ ಪ್ರಸಾರವಾಗಿದ್ದು, ವಿಕ್ರಮ್‌ ಮಸ್ತಾಲ್‌ ಅವರು ನಿಭಾಯಿಸಿದ ಆಂಜನೇಯನ ಪಾತ್ರವು ಜನರ ಗಮನ ಸೆಳೆದಿತ್ತು. ಇವರ ಜನಪ್ರಿಯತೆ ಹಾಗೂ ವರ್ಚಸ್ಸನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌, ಶಿವರಾಜ್‌ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸ್ಪರ್ಧಿಸುತ್ತಿರುವ ಬುದ್ನಿ ಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ

ಕಾಂಗ್ರೆಸ್‌ ಘೋಷಿಸಿದ 144 ಅಭ್ಯರ್ಥಿಗಳಲ್ಲಿ 47 ಅಭ್ಯರ್ಥಿಗಳು ಸಾಮಾನ್ಯ, 39 ಒಬಿಸಿ, 30 ಎಸ್‌ಸಿ, 22 ಎಸ್‌ಟಿ, 19 ಮಹಿಳೆಯರು ಹಾಗೂ ಒಬ್ಬ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗಿದೆ. 144 ಅಭ್ಯರ್ಥಿಗಳಲ್ಲಿ 65 ಅಭ್ಯರ್ಥಿಗಳು 50ಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಮಧ್ಯಪ್ರದೇಶದಲ್ಲಿ 144 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ, ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಅವರ ಸಹೋದರ ಲಕ್ಷ್ಮಣ್‌ ಸಿಂಗ್‌ ಅವರಿಗೆ ಚಚೌರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಅಷ್ಟೇ ಅಲ್ಲ, ದಿಗ್ವಿಜಯ್‌ ಸಿಂಗ್‌ ಪುತ್ರ ಜೈವರ್ಧನ್‌ ಸಿಂಗ್‌ ಅವರಿಗೂ ರಾಘಿಗಢ್‌ನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ನವೆಂಬರ್‌ 17ರಂದು ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Assembly Election 2023: ಮದುವೆಗಳಿಗಾಗಿ ರಾಜಸ್ಥಾನ ಚುನಾವಣಾ ದಿನಾಂಕವೇ ಬದಲು!

ರಾಜ್ಯದಲ್ಲಿ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕವಿದೆ. ವಿಧಾನಸಭೆಯ ಒಟ್ಟು 230 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯು ಇದುವರೆಗೆ 136 ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸಿದೆ.

Exit mobile version