Site icon Vistara News

Gujarat Election | ಮತದಾನದ ಬಳಿಕ ಮೋದಿ ರೋಡ್‌ ಶೋ, ನೀತಿ ಸಂಹಿತೆ ಉಲ್ಲಂಘನೆ ಎಂದು ದೂರು ದಾಖಲು

Modi Road Show

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನದ ಹಿನ್ನೆಲೆಯಲ್ಲಿ (Gujarat Election) ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಡಿಸೆಂಬರ್‌ ೫) ಅಹಮದಾಬಾದ್‌ ನಗರದ ರಾಣಿಪ್‌ ಎಂಬಲ್ಲಿ ಮತದಾನ ಮಾಡಿದ್ದಾರೆ. ಆದರೆ, ಮತದಾನದ ಬಳಿಕ ಅವರು ಸುಮಾರು ಎರಡೂವರೆ ಕಿ.ಮೀ ನಡೆದುಕೊಂಡು ಹೋಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಹಾಗೆಯೇ, ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ರಾಣಿಪ್‌ ಪ್ರದೇಶದ ನಿಶಾನ್‌ ಹೈಸ್ಕೂಲ್‌ಗೆ ತೆರಳಿದ ಮೋದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತ ಚಲಾಯಿಸಿದ ಬಳಿಕ ಹೊರಗೆ ಬಂದ ಅವರು ಜನರತ್ತ ಕೈ ಬೀಸುತ್ತ ಸುಮಾರು ಎರಡೂವರೆ ಕಿ.ಮೀ ನಡೆದರು. ಇದೇ ವೇಳೆ ಸಾವಿರಾರು ಜನ ರಸ್ತೆಗಳ ಬಂದಿ ನಿಂತು ಮೋದಿ ಅವರತ್ತ ಕೈ ಬೀಸಿದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ. ‌

ಮತದಾನದ ದಿನ ಪ್ರಚಾರ ಕೈಗೊಳ್ಳಬಾರದು, ರೋಡ್‌ ಶೋ ನಡೆಸಬಾರದು ಎಂಬ ನಿಯಮವಿದ್ದರೂ ಮೋದಿ ರೋಡ್‌ ಶೋ ನಡೆಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹಲವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ | Gujarat Election | ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

Exit mobile version