Site icon Vistara News

Rahul Gandhi: ರಾಮ ಮಂದಿರ ಉದ್ಘಾಟನೆಗೆ ಬಹಿಷ್ಕಾರ; ರಾಹುಲ್ ಗಾಂಧಿ ಸಮರ್ಥನೆ ಏನು?

Congress is not attending ram mandir event and Rahul Gandhi gave statement

ಚಿಫೋಬೋಝೌ, ನಾಗಾಲ್ಯಾಂಡ್: ರಾಮ ಮಂದಿರ ಉದ್ಘಾಟನೆಯನ್ನು (Ayodhya Ram Mandir) ಬಿಜೆಪಿ (BJP Party) ಮತ್ತು ಆರೆಸ್ಸೆಸ್ (RSS) ‌ರಾಜಕೀಯ ಕಾರ್ಯಕ್ರಮವಾಗಿ (Political Event) ಪರಿವರ್ತಿಸಿವೆ ಮತ್ತು ಅದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೇಂದ್ರೀಕೃತವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ನಾಯಕರು ಭಾಗವಹಿಸುವುದು ಕಷ್ಟವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಹೇಳಿದರು. ಭಾರತ್ ಜೋಡೋ ನ್ಯಾಯ ಯಾತ್ರೆಯ (Bharat Jodo Nyay Yatra) ಸಂದರ್ಭದಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದರು.

ರಾಮ ಮಂದಿರ ಉದ್ಘಾಟನೆಯ ಪ್ರಧಾನಿಯು ನರೇಂದ್ರ ಮೋದಿ ಅವರ ಸುತ್ತ ಗಿರಕಿ ಹೊಡೆಯುತ್ತಿರುವ ರಾಜಕೀಯ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಚುನಾವಣೆ ಪ್ರಚಾರದ ಲೇಪನ ಮಾಡಿವೆ. ಹಾಗಾಗಿ, ನಮಗೆ(ಕಾಂಗ್ರೆಸ್) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಷ್ಟವಾಗುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಇದೇ ವೇಳೆ, ಇಂಡಿಯಾ ಕೂಟದಲ್ಲಿ ಉಂಟಾಗಿರುವ ಭಿನ್ನಮತಗಳ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಕೂಟವು ಬಿಜೆಪಿಯನ್ನು ಸೋಲಿಸಿಲಿದೆ ಎಂದು ಹೇಳಿದರು. ಸಣ್ಣ ಪುಟ್ಟ ಗೊಂದಲಗಳಿವೆ. ಅವುಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಮೈತ್ರಿಕೂಟದ ನಡುವೆ ಸೀಟ್ ಷೇರಿಂಗ್ ಸಮಸ್ಯೆ ಬಗೆಹರಿಯಲಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಇಂಡಿಯಾ ಕೂಟದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ನಾವು ಒಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ. ಸೀಟು ಹಂಚಿಕೆಯ ವಿಷಯವನ್ನು ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳೊಂದಿಗೆ ಬಗೆಹರಿಸಿಕೊಳ್ಳಲಾಗುತ್ತದೆ. ಈ ಸಂಬಂಧ ಮಾತುಕತೆಗಳು ಸಾಕಷ್ಟು ಚೆನ್ನಾಗಿ ನಡೆಯುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತ್ ಜೋಡೋ ನ್ಯಾಯ ಯಾತ್ರೆಯು ಜನವರಿ 14 ಮಣಿಪುರ ತೌಬಲ್‌ನಿಂದ ಆರಂಭವಾಗಿ ಸೋಮವಾರ ನಾಗಾಲ್ಯಾಂಡ್ ಪ್ರವೇಶಿಸಿತು. ಈ ಯಾತ್ರೆಯು ಒಟ್ಟು 15 ರಾಜ್ಯಗಳ ನೂರು ಲೋಕಸಭೆ ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಒಟ್ಟಾರೆ 6,713 ಕಿ.ಮೀ ಕ್ರಮಿಸಲಿದ್ದು, ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಸಂಪನ್ನಗೊಳ್ಳಲಿದೆ.

ಈ ಸುದ್ದಿಯನ್ನೂ ಓದಿ: PM Narendra Modi: ಆಂಧ್ರದ ಲೇಪಾಕ್ಷಿ ದೇಗುಲಕ್ಕೆ ಮೋದಿ ಭೇಟಿ; ರಾಮಾಯಣದಲ್ಲಿ ಈ ಸ್ಥಳದ ಮಹತ್ವ ಏನು?

Exit mobile version