ನವದೆಹಲಿ: ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijay Singh) ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಮತ್ತು ಬೈಕ್ ನಡುವೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ನಡೆದಿದೆ. ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಜತೆ ಮಾತನಾಡಿಕೊಂಡು ಕೋಡಕ್ಯಾ ಹಳ್ಳಿಯಿಂದ ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ವೇಗವಾಗಿ ಸಾಗುತ್ತಿತ್ತು. ಝೀರಾಪುರ ಹಳ್ಳಿಯ ಸಮೀಪ ಈ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ, ಮಧ್ಯಾಹ್ನ ಸುಮಾರು 2.30 ಗಂಟೆಗೆ ಯುವಕನೊಬ್ಬ ಬೈಕ್‌ನಲ್ಲಿ ಸಿಂಗ್ ಪ್ರಯಾಣಿಸುತ್ತಿದ್ದ. ಬೈಕ್ ಸವಾರ್ ತನ್ನ ಬೈಕನ್ ರೋಡ್‌ಗೆ ಅಡ್ಡಲಾಗಿ ಟರ್ನ್ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲಿ, ವೇಗದಿಂದ ಬಂದ ಕಪ್ಪು ಬಣ್ಣದ ಫಾರ್ಚೂನರ್ ಕಾರ್ ಗುದ್ದಿದೆ. ಎಸ್‌ಯುವಿ ಸ್ಪೀಡ್ ಇದ್ದ ಕಾರಣ, ಬೈಕ್‌ನಿಂದ ಸವಾರ ಹಾರಿ 10 ಅಡಿಗಳ ದೂರ ಹೋಗಿ ಬಿದ್ದಿದ್ದಾನೆ. ಅಪಘಾತ ಸಂಭಿವಿಸುತ್ತಿದ್ದಂತೆ ಕಾರಿನಿಂದ ಹೊರಗೆ ಬಂದ ದಿಗ್ವಿಜಯ್ ಸಿಂಗ್ ಅವರು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಮೀಪದ ಆಸ್ಪತ್ರೆಯಲ್ಲಿ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್ ಆಸ್ಪತ್ರೆ ಕಳುಹಿಸಿ ಕೊಟ್ಟಿದ್ದಾರೆ. ಅಪಘಾತಕ್ಕೀಡಾದ ಯುವಕನನ್ನು 20 ವರ್ಷದ ರಾಮಬಾಬು ಬಾಗ್ರಿ ಎಂದು ಗುರುತಿಸಲಾಗಿದೆ.
ಸಿರಾಜ್ ನೂರಾನಿ ಟ್ವೀಟ್
ತಮ್ಮ ಕಾರನ್ನು ಸೀಜ್ ಮಾಡಿ, ಕೇಸ್ ದಾಖಲಿಸುವಂತೆ ದಿಗ್ವಿಜಯ್ ಸಿಂಗ್ ಅವರ ಸ್ವತಃ ಪೊಲೀಸರಿಗೆ ತಿಳಿಸಿದ್ದಾರೆ. ಅಪಘಾತ ತೀವ್ರತೆಯಿಂದ ಕೂಡಿದ್ದರೂ ಯುವಕನಿಗೆ ತೀರಾ ಮಾರಣಾಂತಿಕ ಗಾಯಗಳೇನೂ ಆಗಿಲ್ಲ. ಯುವಕನ ಬೈಕ್‌ಗೆ ಕಾರ್ ಗುದ್ದಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಅಲ್ಲದೇ, ಗಾಯಾಳುವಿನ ಚಿಕಿತ್ಸೆಯ ಎಲ್ಲ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.
ವಾಹನವನ್ನು ಸೀಜ್ ಮಾಡಿ, ಚಾಲಕನ ವಿರುದ್ಧ ದೂರು ದಾಖಲಿಸುವಂತೆ ಪೊಲೀಸ್ ಸಿಬ್ಬಂದಿಗೆ ತಿಳಿಸಿದ ದಿಗ್ವಿಜಯ್ ಸಿಂಗ್ ಅವರು, ಸ್ಥಳೀಯ ಶಾಸಕ ಕಾರಿನಲ್ಲಿ ರಾಜಗಢಕ್ಕೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಬಳಿಕ, ಅಪಘಾತಕ್ಕೀಡಾದ ಕಾರನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋದರು.
ಇದನ್ನೂ ಓದಿ: Pulwama Attack: ಗುಪ್ತಚರ ವೈಫಲ್ಯದಿಂದಾಗಿ 40 ಯೋಧರ ಸಾವು, ದಿಗ್ವಿಜಯ್ ಸಿಂಗ್ ಟ್ವೀಟ್ ವಿವಾದ
ಸಿಂಗ್ ಅವರ ಪ್ರಯಾಣಿಸುತ್ತಿದ್ದ ಕಾರ ಅಪಘಾತವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅಂದರೆ 2019ರಲ್ಲಿ ಸಿಂಗ್ ಅವರ ಬೆಂಗಾವಲು ವಾಹನವು ಚಿತ್ರಕೂಟ ಜಿಲ್ಲೆಯಲ್ಲಿ ಟ್ರಕ್‌ಗೆ ಗುದ್ದಿತ್ತು. ಪರಿಣಾಮ ಅವರ ಭದ್ರತಾ ಸಿಬ್ಬಂದಿ ಪೈಕಿ ಹಲವರಿಗೆ ಗಾಯಗಳಾಗಿದ್ದವು.