Site icon Vistara News

Jagdish Tytler | ಟೀಕೆ ಹಿನ್ನೆಲೆ ಭಾರತ್‌ ಜೋಡೋ ಯಾತ್ರೆಯಿಂದ ಹಿಂದೆ ಸರಿದ ಸಿಖ್‌ ವಿರೋಧಿ ದಂಗೆ ಆರೋಪಿ ಟೈಟ್ಲರ್

Jagdish Tytler

ನವದೆಹಲಿ: 1984ರಲ್ಲಿ ನಡೆದ ಸಿಖ್‌ ವಿರೋಧಿ ದಂಗೆಯ ಆರೋಪಿ, ಕಾಂಗ್ರೆಸ್‌ನ ವಿವಾದಿತ ನಾಯಕ ಜಗದೀಶ್‌ ಟೈಟ್ಲರ್‌ (Jagdish Tytler) ಅವರು ಭಾರತ್‌ ಜೋಡೋ ಯಾತ್ರೆಯಿಂದ ಹಿಂದೆ ಸರಿದಿದ್ದಾರೆ. ಅವರು ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ಯಾತ್ರೆಯು ಡಿಸೆಂಬರ್‌ 24ರಂದು ಹರಿಯಾಣದಿಂದ ದೆಹಲಿಗೆ ಪ್ರವೇಶಿಸಲಿದೆ. ಬಾದರ್‌ಪುರ ಗಡಿಯಲ್ಲಿ ಹಲವು ನಾಯಕರು ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಲಿದ್ದಾರೆ. ಈ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಇದಕ್ಕೂ ಮೊದಲು ಜಗದೀಶ್‌ ಟೈಟ್ಲರ್‌ ಅವರು ಘೋಷಿಸಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಟೈಟ್ಲರ್‌, “ನನಗೆ ರಾಹುಲ್‌ ಗಾಂಧಿ ಅವರು ಕೈಗೊಳ್ಳುತ್ತಿರುವ ಭಾರತ್‌ ಜೋಡೋ ಯಾತ್ರೆ ಅಷ್ಟೇ ಮುಖ್ಯ. ಹಾಗಾಗಿ, ನಾನು ಭಾಗವಹಿಸದಿರಲು ತೀರ್ಮಾನಿಸಿದ್ದೇನೆ” ಎಂದಿದ್ದಾರೆ. ಸಿಖ್‌ ವಿರೋಧಿ ದಂಗೆ ಕೇಸ್‌ ಹಿನ್ನೆಲೆಯಲ್ಲಿ ಮೊದಲು ಟೈಟ್ಲರ್‌ ಅವರಿಂದ ಕಾಂಗ್ರೆಸ್‌ ಅಂತರ ಕಾಪಾಡಿಕೊಂಡಿತ್ತು. ಆದರೆ, ಇತ್ತೀಚೆಗೆ ಟೈಟ್ಲರ್‌ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ಸಹಭಾಗಿತ್ವ ನೀಡಲಾಗುತ್ತಿದೆ.

ಇದನ್ನೂ ಓದಿ | ‘ಸಚಿನ್​ ಪೈಲಟ್​​ರಂಥ ಸಿಎಂ ಬೇಕು’; ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ

Exit mobile version