Site icon Vistara News

‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Danish Ali and Rahul Gandhi

ನವದೆಹಲಿ: ಲೋಕಸಭೆಯಲ್ಲಿ (Lok Sabha) ಬಿಜೆಪಿ ಸಂಸದ ರಮೇಶ್ ಬಿಧುರಿ (BJP MP Ramesh Bidhuri) ಅವರಿಂದ ‘ಉಗ್ರ’ (Terrorist) ಎಂದು ಕರೆಯಿಸಿಕೊಂಡಿದ್ದ ಬಿಎಸ್‌ಪಿ ಸಂಸದ ಕುನ್ವರ್ ಡ್ಯಾನಿಶ್ ಅಲಿ(BSP MP Danish Ali) ಅವರನ್ನು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಲೋಕಸಭೆಯಲ್ಲಿ ಚಂದ್ರಯಾನ-3 (Chandrayaan 3) ಯಶಸ್ಸಿನ ಕುರಿತಾದ ಚರ್ಚೆ ನಡೆಯುತ್ತಿತ್ತು. ಈ ವೇಳೆ, ಭಾರತೀಯ ಜನತಾ ಪಾರ್ಟಿಯ ಸಂಸದ ರಮೇಶ್ ಬಿಧುರಿ ಅವರು, ಡ್ಯಾನಿಶ್ ಅಲಿ ಅವರನ್ನು ಇಸ್ಲಾಮೋಫೋಬಿಕ್ ಆಗಿ ನಿಂದಿಸುತ್ತಿದ್ದರು. ಒಂದು ಹಂತದಲ್ಲಿ ಅವರನ್ನು ಭಯೋತ್ಪಾದಕ ಎಂದು ಕೂಡ ಕರೆದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ಸಂಜೆ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು, ಬಿಜೆಪಿ ಸಂಸದರಿಂದ ನಿಂದನೆಗೊಳಗಾದ ಡ್ಯಾನಿಶ್ ಅಲಿಯನ್ನು ಭೇಟಿ ಮಾಡಿ, ಸಮಾಧಾನಪಡಿಸಿದರು. ಈ ಕುರಿತಾದ ಫೋಟೋಗಳನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದು, ನಫ್ರತ್ ಕೆ ಬಜಾರ್ ಮೇ, ಮೊಹಬ್ಬತ್ ಕಿ ದುಕಾನ್(ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಎಂದು ಬರೆಯಲಾಗಿದೆ(Parliament Special Session).

ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು, ಭಾರತೀಯ ಜನತಾ ಪಾರ್ಟಿ ಹುಟ್ಟು ಹಾಕಿರುವ ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯಲಿದ್ದೇನೆ ಎಂದು ಹೇಳಿದ್ದರು. ಬಳಿಕ ಭಾರತ್ ಜೋಡೋ ಯಾತ್ರೆಯ ವೇಳೆ, ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ಘೋಷಣೆಯಾಗಿ ಹೊರ ಹೊಮ್ಮಿತು. ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ವೇಳೆ ಈ ಘೋಷವಾಕ್ಯವನ್ನು ಬಳಸುತ್ತಾರೆ.

ರಾಹುಲ್ ಗಾಂಧಿ ಅವರು ಭೇಟಿಯಾಗುವ ಮುಂಚೆ ಡ್ಯಾನಿಶ್ ಅಲಿ ಅವರು, ಬಿಜೆಪಿ ಸಂಸದರಿಂದ ನಿಂದನೆಗೊಳಗಾದ ಬಳಿಕ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ ಎಂದು ಎನ್‌ಡಿ ಟಿವಿ ಮುಂದೆ ಕಣ್ಣೀರಿಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Parliament Special Session: ಬಿಎಸ್ಪಿ ಸಂಸದ ಡ್ಯಾನಿಶ್ ಅಲಿಗೆ ‘ಉಗ್ರ’ ಎಂದು ಜರಿದ ಬಿಜೆಪಿ ಎಂಪಿ ಬಿಧುರಿ! ಕ್ರಮಕ್ಕೆ ಪ್ರತಿಪಕ್ಷಗಳ ಆಗ್ರಹ

ಚುನಾಯಿತ ಸಂಸದರನ್ನು ಅವರ ಸಮುದಾಯಕ್ಕೆ ಸೇರಿಸುವ ಮೂಲಕ ಅವರ ಮೇಲೆ ದಾಳಿ ಮಾಡಲು ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆಯೇ? ಇದರಿಂದ ಇಡೀ ದೇಶವೇ ತಲೆತಗ್ಗಿಸಿದೆ. ಆ ಸಂಸದ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಉತ್ತೇಜನ ನೀಡುತ್ತದೆಯೋ ಕಾದು ನೋಡಬೇಕು. ಬಿಧುರಿಯದ್ದು ಸಂಪೂರ್ಣವಾಗಿ ದ್ವೇಷ ಭಾಷಣವಾಗಿದೆ ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ. ಈ ಮಧ್ಯೆ, ನಿಂದನೆಯ ಮಾತುಗಳನ್ನಾಡಿರುವ ಬಿಜೆಪಿ ಸಂಸದ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಾರ್ಟಿಯು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದೆ. ಹಾಗೆಯೇ, ಕಲಾಪದ ಕಡಿತದಿಂದ ಉಗ್ರ ಪದವನ್ನು ತೆಗೆದ ಹಾಕಲಾಗಿದೆ. ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಒಳಗಾಗಿರುವ ಬಿಜೆಪಿಯು, ಸಂಸದ ರಮೇಶ್ ಬಿಧುರಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಈ ನಡವಳಿಕೆ ಕುರಿತು ವಿವರಣೆ ನೀಡುವಂತೆ ಕೋರಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version