ದಿಸ್ಪುರ: ಫ್ರಾನ್ಸ್ ವಿರುದ್ಧ ನಡೆದ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಅರ್ಜೆಂಟೀನಾ ಹಾಗೂ ಆ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಬಗ್ಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೆಸ್ಸಿ ಬಗ್ಗೆ ಅಂತೂ ಕೊಂಡಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಅಸ್ಸಾಂ ಕಾಂಗ್ರೆಸ್ ಸಂಸದ ಅಬ್ದುಲ್ ಖಲೇಕ್ ಅವರು, “ಮೆಸ್ಸಿ ಜನಿಸಿದ್ದು ಅಸ್ಸಾಂನಲ್ಲಿ” ಎಂದು ಹೇಳುವ ಮೂಲಕ ಜಾಲತಾಣದಲ್ಲಿ ಹಾಸ್ಯಕ್ಕೆ ಗುರಿಯಾಗಿದ್ದಾರೆ.
ಅರ್ಜೆಂಟೀನಾ ಗೆಲುವಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಅಬ್ದುಲ್, “ಲಿಯೋನೆಲ್ ಮೆಸ್ಸಿ ಅವರಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು. ನೀವು ಅಸ್ಸಾಂ ಜತೆ ನಂಟು ಹೊಂದಿದ್ದೀರಿ ಎಂಬುದೇ ನಮಗೆ ಹೆಮ್ಮೆ” ಎಂದು ಹೇಳಿದ್ದರು.
ಅಬ್ದುಲ್ ಟ್ವೀಟ್‌ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, “ಅಸ್ಸಾಂ ಜತೆ ನಂಟಾ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ, “ಹೌದು, ಮೆಸ್ಸಿ ಹುಟ್ಟಿದ್ದು ಅಸ್ಸಾಂನಲ್ಲಿ” ಎಂದು ಹೇಳಿದ್ದಾರೆ. ಇದಾದ ಬಳಿಕ ಜಾಲತಾಣಿಗರು ಫ್ಯಾಕ್ಟ್‌ಚೆಕ್ ಮಾಡಿ, ಕಾಂಗ್ರೆಸ್ ಅಬ್ದುಲ್ ಅವರಿಗೆ ತಿರುಗೇಟು ನೀಡಿದ್ದಾರೆ. ಮೆಸ್ಸಿ ಜನಿಸಿದ್ದು ಅರ್ಜೆಂಟೀನಾದಲ್ಲಿಯೇ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಅಬ್ದುಲ್ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ | FIFA World Cup | ವಿಶ್ವ ವಿಜೇತನಾದರೂ ಅಮ್ಮನ ಮಗ; ತಾಯಿಯೊಂದಿಗೆ ಮೆಸ್ಸಿ ಸಂಭ್ರಮಿಸಿದ ರೀತಿ ಹೀಗಿತ್ತು