ನವದೆಹಲಿ: 300 ಕೋಟಿ ರೂ.ನಷ್ಟು ನಗದು ಹಣವನ್ನು ಸಂಗ್ರಹಿಸಿಟ್ಟಿದ್ದ (IT Raids) ಕಾಂಗ್ರೆಸ್ ರಾಜ್ಯ ಸಭಾ ಮೇಂಬರ್ ಧೀರಜ್ ಸಾಹು (Congress MP Dheeraj Sahu) ಅವರು 2022ರಲ್ಲಿ ಮಾಡಿದ ಟ್ವೀಟ್‌ವೊಂದು (old post) ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಜಾ ಅಂದರೆ, ಕಪ್ಪು ಹಣವನ್ನು (black money) ಹೊಂದಿರುವ ಸಾಹು, ಅಂದು ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಬರೆದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರವೇ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿಕೊಂಡಿರುವ ಈ ಟ್ವೀಟ್ ಈಗ ವೈರಲ್ ಆಗಿದೆ.
2022ರ ಆಗಸ್ಟ್ 12ರಂದು ಸಾಹು ಅವರು ಟ್ವೀಟ್ ಮಾಡಿದ್ದು, ನೋಟು ಅಮಾನ್ಯೀಕರಣದ ನಂತರವೂ, ದೇಶದಲ್ಲಿ ಇಷ್ಟು ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ಕಂಡು ನನ್ನ ಹೃದಯವು ದುಃಖಿತವಾಗಿದೆ. ಜನರು ಎಲ್ಲಿಂದ ಇಷ್ಟೊಂದು ಕಪ್ಪು ಹಣವನ್ನು ಸಂಗ್ರಹಿಸುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಈ ದೇಶದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯುವುದು ಸಾಧ್ಯವಾಗುವುದಾದರೆ ಅದ ಕಾಂಗ್ರೆಸ್‌ನಿಂದ ಮಾತ್ರವೇ ಸಾಧ್ಯ ಎಂದು ಬರೆದುಕೊಂಡಿದ್ದಾರೆ. ಈಗ ಅದೇ ಸಾಹು ಅವರಿಗೆ ಸೇರಿದ ಕಂಪನಿಗಳ ಆವರಣದಲ್ಲಿ 300 ಕೋಟಿ ರೂ. ಅಧಿಕ ಕಪ್ಪು ಹಣ ಸಿಕ್ಕಿ ಬಿದ್ದಿದೆ!
Dhiraj Prasad Sahu has a dark sense of humour. 😂#CorruptionKiDukan pic.twitter.com/2esDCyip1O
— Amit Malviya (@amitmalviya) December 10, 2023
ಭಾರತೀಯ ಜನತಾ ಪಾರ್ಟಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಈ ಪೋಸ್ಟ್ ಷೇರ್ ಮಾಡಿಕೊಂಡು, ಭ್ರಷ್ಟಾಚಾರ ಕೀ ದುಕಾನ್ ಹ್ಯಾಷ್‌ಟ್ಯಾಗ್‌ನೊಂದಿಗೆ ಡಾರ್ಕ್ ಸೆನ್ಸ್ ಆಫ್ ಹ್ಯೂಮರ್ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸೇರಿದ ಕಚೇರಿ ಹಾಗೂ ಕಾರ್ಖಾನೆಗಳಲ್ಲಿ ಆದಾಯ ತೆರಿಗೆ ಇಲಾಖೆ (Income Tax Raid) ದಾಳಿ ನಡೆಸಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳನ್ನು ಆಧರಿಸಿ ಬಿಜೆಪಿ ಮುಖಂಡರು ಭಾನುವಾರ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಂಗ್ರೆಸ್ನ ಭ್ರಷ್ಟರ ಕೈಗೆ ಕಾನೂನಿಗೆ ಕುಣಿಗೆ ಬೀಳಲಿದೆ, ಅವರೆಲ್ಲರೂ ಅದಕ್ಕೆ ಹೊಣೆಯಾಗಲಿದ್ದಾರೆ ಎಂಬುದಾಗಿ ಬಿಜೆಪಿ ಹೇಳಿದೆ.
ಒಡಿಶಾದ ಬಾಲಂಗೀರ್ನಲ್ಲಿರುವ ಸಾಹು ಅವರ ಸಹೋದರನ ಒಡೆತನದ ಡಿಸ್ಟಿಲರಿ ಕಂಪನಿಯ ಆವರಣದಿಂದ ಆದಾಯ ತೆರಿಗೆ ಇಲಾಖೆ 300 ಕೋಟಿ ರೂ.ಗಿಂತ ಹೆಚ್ಚು ನಗದು ವಶಪಡಿಸಿಕೊಂಡಿದೆ. ನಿರಂತರವಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ಬಗೆದಷ್ಟು ನೋಟಿನ ಕಂತೆಗಳು ಸಿಗುತ್ತಿವೆ. ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಬೆಳಿಗ್ಗೆ ಹೊಸ ಎಣಿಕೆ ಯಂತ್ರಗಳನ್ನು ತಂದು ದುಡ್ಡನ್ನು ಎಣಿಸಲು ಆರಂಭಿಸಿದ್ದಾರೆ.
ಸಹೋದರ, ನೀವು ಮತ್ತು ನಿಮ್ಮ ನಾಯಕ ರಾಹುಲ್ ಗಾಂಧಿ ಇದಕ್ಕೆಲ್ಲ ಉತ್ತರಿಸಬೇಕು. ಇದು ನವ ಭಾರತ. ವಂಶಪಾರಂಪರ್ಯದ ಹೆಸರಿನಲ್ಲಿ ಜನಸಾಮಾನ್ಯರ ಶೋಷಣೆ ಮಾಡಲು ಇಲ್ಲಿ ಕಿಂಚಿತ್ತೂ ಅವಕಾಶವಿಲ್ಲ. ನೀವು ತಪ್ಪಿಸಿಕೊಳ್ಳಲು ಓಡಿ ಓಡಿ ಸುಸ್ತಾಗುತ್ತೀರಿ. ಕಾನೂನು ನಿಮ್ಮನ್ನು ಬೆನ್ನಟ್ಟದೆ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ಖಾತರಿ ಕೊಟ್ಟರೆ, ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಕ್ರಮದ ಖಾತರಿ ನೀಡುತ್ತಾರೆ. ಸಾರ್ವಜನಿಕರ ಹಣವನ್ನು ನೀವು ಹಿಂದಿರುಗಿಸಬೇಕಾಗುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಐಟಿ ರೇಡ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ಮೌನವನ್ನು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. “ಧೀರಜ್ ಸಾಹು ವಿರುದ್ಧದ ಐಟಿ ಶೋಧದ ಬಗ್ಗೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನೀವು ಸದಾ ಆದಾಯ ತೆರಿಗೆ ಇಲಾಖೆಯನ್ನು ಟೀಕಿಸುತ್ತೀರುತ್ತೀರಿ. ಆದರೆ ಈಗ ಏಕೆ ಸುಮ್ಮನಿದ್ದೀರಿ ಎಂದು ಕೇಳಿದ್ದಾರೆ.
ಬೌಧ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಆವರಣದಿಂದ ಆದಾಯ ತೆರಿಗೆ ಇಲಾಖೆ 300 ಕೋಟಿ ರೂ.ಗಿಂತ ಹೆಚ್ಚು ನಗದು ವಶಪಡಿಸಿಕೊಂಡಿದೆ. ವಶಪಡಿಸಿಕೊಳ್ಳಲಾದ ಒಟ್ಟು ಮೊತ್ತವು 350 ಕೋಟಿ ರೂಪಾಯಿಯನ್ನು ಮೀರುತ್ತದೆ ಎಂದು ಅದು ನಿರೀಕ್ಷಿಸಲಾಗಿದೆ. ಸಾಹು ಕುಟುಂಬವು ದೇಶೀಯ ಮದ್ಯವನ್ನು ತಯಾರಿಸುವ ಡಿಸ್ಟಿಲರಿ ಕಂಪನಿಯನ್ನು ಹೊಂದಿದೆ. ಇಲಾಖೆಯು ಮಾಲೀಕ ಮತ್ತು ಅವರೊಂದಿಗೆ ನಂಟು ಹೊಂದಿರುವ ಜನರ ಮನೆಗಳನ್ನು ಶೋಧಿಸಿದೆ.
ಈ ಸುದ್ದಿಯನ್ನೂ ಓದಿ: IT Raids: ಬಗೆದಷ್ಟು ಅಕ್ರಮ ದುಡ್ಡು; ಹಣ ಎಣಿಸಲು ಮತ್ತಷ್ಟು ಯಂತ್ರಗಳ ರವಾನೆ!