ನವದೆಹಲಿ: ರಾಜ್ಯಸಭೆ ಕಲಾಪದ ಚಟುವಟಿಕೆಗಳನ್ನು ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್ ಅಧಿವೇಶನದಿಂದಲೇ ರಾಜ್ಯಸಭೆ ಕಾಂಗ್ರೆಸ್ ಸದಸ್ಯೆ ರಜನಿ ಪಾಟೀಲ್ ಅವರನ್ನು ಸದನದಿಂದ (Rajani Patil Suspended) ಅಮಾನತುಗೊಳಿಸಲಾಗಿದೆ. ರಾಜ್ಯಸಭೆ ಕಲಾಪದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಅಮಾನತುಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜನವರಿ ೯) ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಪ್ರತಿಪಕ್ಷಗಳು ಗಲಾಟೆ ಆರಂಭಿಸಿದವು. ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದೇ ದೃಶ್ಯವನ್ನು ರಜನಿ ಪಾಟೀಲ್ ಅವರು ಚಿತ್ರೀಕರಣ ಮಾಡಿ, ಪೋಸ್ಟ್ ಮಾಡಿದ ಕಾರಣಕ್ಕಾಗಿ ಕ್ರಮ ತೆಗೆದುಕೊಳ್ಳಲಾಗಿದೆ.
ಟ್ವಿಟರ್‌ನಲ್ಲಿ ವಿಡಿಯೊ ಪೋಸ್ಟ್ ಆಗುತ್ತಲೇ ಬಿಜೆಪಿಯು ಸದನದ ನಿಯಮ ಉಲ್ಲಂಘನೆ ಕುರಿತು ದೂರು ನೀಡಿತ್ತು. ಅದರಂತೆ, ಜಗದೀಪ್ ಧನಕರ್ ಅವರು ಕ್ರಮ ಕೈಗೊಂಡಿದ್ದಾರೆ. ಪ್ರಸಕ್ತ ಬಜೆಟ್ ಅಧಿವೇಶನ ಮುಗಿಯುವರೆಗೆ ರಜನಿ ಪಾಟೀಲ್ ಅವರು ಕಲಾಪದಲ್ಲಿ ಪಾಲ್ಗೊಳ್ಳುವ ಹಾಗಿಲ್ಲ.
ಇದನ್ನೂ ಓದಿ: Viral Video : ಸಂಸತ್ತಿನಲ್ಲಿ ಕವನದ ಮೂಲಕವೇ ಮೋದಿಯನ್ನು ಹೊಗಳಿ, ರಾಹುಲ್ ಕಾಲೆಳೆದ ಸಚಿವ