ಹೈದ್ರಾಬಾದ್, ತೆಲಂಗಾಣ: ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ (Assembly Election) ನಡೆಯಲಿರುವ ತೆಲಂಗಾಣದಲ್ಲಿ (Telangana) ಕಾಂಗ್ರೆಸ್ (Congress Party) ಭರ್ಜರಿಯಾಗಿಯೇ ತನ್ನ ಪ್ರಚಾರವನ್ನು ಆರಂಭಿಸಿದೆ. ಹೈದ್ರಾಬಾದ್ ಸಮೀಪದ ತುಕ್ಕುಗುಡದಲ್ಲಿ ಆಯೋಜಿಸಲಾಗಿದ್ದ ಎಲೆಕ್ಷನ್ ರ್ಯಾಲಿಯಲ್ಲಿ (Election Rally) ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ (Sonia Gandhi) ಅವರು ‘6 ಗ್ಯಾರಂಟಿ’ಗಳನ್ನು ಪ್ರಕಟಿಸಿದರು. ಸಮಾಜದ ಎಲ್ಲ ವರ್ಗದ ಜನರಿಗೆ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ರಚನೆಯಾಗುವುದು ತಮ್ಮ ಕನಸಾಗಿದೆ ಎಂದು ಇದೇ ವೇಳೆ ಹೇಳಿದರು. 500 ರೂ.ಗೆ ಗ್ಯಾಸ್ ಸಿಲಿಂಡರ್ (Gas Cylinder) ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ನೀಡಿದ್ದು ವಿಶೇಷವಾಗಿದೆ.
ನಾವು 6 ಗ್ಯಾರಂಟಿಗಳನ್ನು ಪ್ರಕಟಿಸುತ್ತಿದ್ದೇವೆ. ನಮ್ಮ ಪಕ್ಷದ ಸರ್ಕಾರವು ಅಧಿಕಾರಕ್ಕೆ ಬಂದರೆ ಈ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ನನ್ನ ಸಹೋದ್ಯೋಗಿಗಳ ಜತೆಗೆ ನಾನು ಕೂಡ ಈ ಹೊಸ ರಾಜ್ಯದ ಉದಯಕ್ಕೆ ಸಾಕ್ಷಿಯಾಗಿದ್ದೇನೆ ಎಂದು ಸೋನಿಯಾ ಗಾಂಧಿ ಅವರು ಹೇಳಿದರು.
LIVE: Congress announces '5 Guarantees' for Telangana at Vijayabheri Sabha in Tukkuguda, Rangareddy district. https://t.co/sOGx5HF7YK
— Congress (@INCIndia) September 17, 2023
ತೆಲಂಗಾಣದ ಮಹಿಳೆಯರಿಗೆ ‘ಮಹಾಲಕ್ಷ್ಮಿ’ ಯೋಜನೆಯಡಿ ಮಾಸಿಕ 2,500 ರೂ. ಆರ್ಥಿಕ ನೆರವು, 500ಕ್ಕೆ ಗ್ಯಾಸ್ ಸಿಲಿಂಡರ್, ರಾಜ್ಯಾದ್ಯಂತ ಟಿಎಸ್‌ಆರ್‌ಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ತೆಲಂಗಾಣ ಜನತೆಯ ಆಶೋತ್ತರಗಳನ್ನು ಈಡೇರಿಸಲು ನಾವು 6 ಭರವಸೆಗಳನ್ನು ಘೋಷಿಸುತ್ತಿದ್ದೇವೆ. ಈ ಎಲ್ಲ ಗ್ಯಾರಂಟಿಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ನೆರೆದ ಭಾರೀ ಜನಸ್ತೋಮ ಉದ್ದೇಶಿಸಿ ಹೇಳಿದರು.
ಈ ಸುದ್ದಿಯನ್ನೂ ಓದಿ: CWC Meet: ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಮಹಾತ್ಮ ಗಾಂಧಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ ಎಂದ ಖರ್ಗೆ
ಆರು ಗ್ಯಾರಂಟಿಗಳು ಯಾವವು?
1.ಮಹಾಲಕ್ಷಿ ಯೋಜನೆ
-ಪ್ರತಿತಿಂಗಳು ಮಹಿಳೆ 2,500 ರೂ.
-ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
-500 ರೂ.ಗೆ ಗ್ಯಾಸ್ ಸಿಲಿಂಡರ್
2.ರೈತ ಭರೋಸಾ
-ಪ್ರತಿ ಎಕರೆಗೆ ರೈತರಿಗೆ 15,000 ರೂ. ಸಾಲ
-ಕೃಷಿ ಕಾರ್ಮಿಕರಿಗೆ 12,000 ರೂ. ಸಾಲ
-500 ರೂ. ಬೋನಸ್
3.ಯುವ ವಿಕಸನ್
-ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 5 ಲಕ್ಷ ರೂ. ವಿದ್ಯಾ ಭರೋಸಾ ಕಾರ್ಡ್
-ರಾಜ್ಯ ಪ್ರತಿ ಮಂಡಲ್‌ನಲ್ಲಿ ತೆಲಂಗಾಣ ಅಂತಾರಾಷ್ಟ್ರೀಯ ಸ್ಕೂಲ್
4.ಇಂದಿರಮ್ಮ ಇಂಡ್ಲು
-ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಭೂಮಿ ಮೇಲೆ 5 ಲಕ್ಷ ರೂ.ವರೆಗೆ ಸಹಾಯ
-ತೆಲಂಗಾಣ ಚಳವಳಿಯಲ್ಲಿ ಭಾಗಿಯಾದವರಿಗೆ 250 ವರ್ಗ ಗಜ ಭೂಮಿ
5.ಗೃಹ ಜ್ಯೋತಿ
-ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ
6.ಹಿರಿಯರಿಗೆ ನೆರವು
-ವೃದ್ಧರಿಗೆ ಪ್ರತಿ ತಿಂಗಳು 4000 ರೂ. ವೃದ್ಧಾಪ್ಯವೇತನ
-10 ಲಕ್ಷ ರೂ.ವರೆಗೂ ರಾಜೀವ ಆರೋಗ್ಯ ಶ್ರೀ ವಿಮೆ