Site icon Vistara News

Congress Party: 5 ರಾಜ್ಯಗಳಿಗೆ ಕಾಂಗ್ರೆಸ್‌ ವೀಕ್ಷಕರ ನೇಮಕ; ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್‍‌ಗೆ ಅವಕಾಶ

Ranadeep Singh Surjewala and Sasikant Senthil

ನವದೆಹಲಿ: ಪ್ರಮುಖ ರಾಜಕೀಯ ಪಕ್ಷಗಳು (Congress Party) ಮುಂಬರುವ ಐದು ರಾಜ್ಯಗಳ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಗೆ ಸಿದ್ಧತೆಯನ್ನು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು, ಚುನಾವಣೆ ಎದುರಿಸಲಿರುವ ರಾಜ್ಯಗಳಿಗೆ ಚುನಾವಣಾ ವೀಕ್ಷಕರನ್ನು (observers) ನೇಮಕ ಮಾಡಿದೆ. ಜತೆಗೆ, ಪಕ್ಷದ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾ ವೇದಿಕೆಗಳ ಪದಾಧಿಕಾರಿಗಳ ತಂಡವನ್ನು ಪರಿಷ್ಕರಿಸಲಾಗಿದೆ(assembly election).

ರಾಜಸ್ಥಾನಕ್ಕೆ ಹಿರಿಯ ವೀಕ್ಷಕರಾಗಿ ಮಧುಸೂದನ್ ಮಿಸ್ತ್ರಿ ಹಾಗೂ ವೀಕ್ಷರಾಗಿ ಶಶಿಕಾಂತ ಸೆಂಥಿಲ್ ಅವರನ್ನು ನೇಮಕ ಮಾಡಲಾಗಿದೆ. ಇದೇ ಮಾದರಿಯಲ್ಲಿ ಮಧ್ಯಪ್ರದೇಶಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಚಂದ್ರಕಾಂತ್ ಹಂದೋರೆ, ಛತ್ತೀಸ್‌ಗಢ ರಾಜ್ಯಕ್ಕೆ ಪ್ರೀತಮ್ ಸಿಂಗ್ ಹಾಗೂ ಮೀನಾಕ್ಷಿ ನಟರಾಜನ್, ತೆಲಂಗಾಣಕ್ಕೆ ದೀಪಾ ದಾಸಮುನ್ಶಿ ಹಾಗೂ ಡಾ. ಸಿರಿವೆಳ್ಳಾ ಪ್ರಸಾದ್ ಮಿಜೋರಾಮ್‌ಗೆ ಸಚಿನ್ ರಾವ್ ಅವರನ್ನು ನೇಮಕ ಮಾಡಲಾಗಿದೆ.

ಭವ್ಯಾ ನರಸಿಂಹ ಮೂರ್ತಿಗೆ ಅವಕಾಶ

ಕಾಂಗ್ರೆಸ್ ಪಕ್ಷ ಸೋಷಿಯಲ್ ಮೀಡಿಯಾ ನಿರ್ವಹಣೆ ಮತ್ತು ಡಿಜಿಟಲ್ ವೇದಿಕೆ ನಿರ್ವಹಣೆಗಳ ತಂಡವನ್ನು ಪರಿಷ್ಕರಿಸಲಾಗಿದೆ. ಕೆಲವು ಹೊಸಬರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಕೆ.ಸಿ.ವೇಣುಗೋಪಾಲ್ ಅವರು ಹೇಳಿದ್ದಾರೆ.

ರಾಷ್ಟ್ರೀಯ ಸಂಚಾಲಕರಾಗಿ ಪ್ರಣವ್ ಕೆ ವಛಾರಜನಿ, ರುಚಿರಾ ಚತುರ್ವೇದಿ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ, ರಾಷ್ಟ್ರೀಯ ಸಂಯೋಜಕರಾಗಿ 20 ಪದಾಧಿಕಾರಿಗಳ ತಂಡವನ್ನು ಕಟ್ಟಲಾಗಿದೆ. ಈ ತಂಡದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವಕ್ತಾರೆಯಾಗಿ ಸಕ್ರಿಯಾಗಿ ಗುರುತಿಸಿಕೊಂಡಿ ಭವ್ಯಾ ನರಸಿಂಹ ಮೂರ್ತಿ ಅವರಿಗೆ ಅವಕಾಶ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ: 30 vs 24: ಈಗ ಅಸಲಿ ಆಟ ಶುರು! ಕಾಂಗ್ರೆಸ್ ಕೂಟದಲ್ಲಿ 24 ಪಕ್ಷಗಳಿದ್ದರೆ, ಬಿಜೆಪಿಯ ಎನ್‌ಡಿಎದಲ್ಲಿ 30 ಪಾರ್ಟಿ!

ಇನ್ನುಳಿದಂತೆ ಅಶೋಕ್ ಪಿ ತಯ್ವಾಡೆ, ಅಭಾಸ್ ಭಟ್ನಾಗರ್, ಅಭಯ್ ತಿವಾರಿ, ಅಭಿಲಾಶ್ ಪಾಟಿ, ಅಭಿಷೇಕ್ ಮಹಾನಂದ, ಆದಿತ್ಯ ಭಗತ್, ಅಕ್ಷಿತ್ ಕುಮಾರ್, ಅಮರ್ಜಿತ್ ಸಿಂಗ್, ಅನೂಜ್ ಶುಕ್ಲಾ, ಅರುಣ್ ಬೀರೆಡ್ಡಿ, ಆಯುಷ್ ಪಾಂಡೆ, ಭವ್ಯಾ ನರಸಿಂಹಮೂರ್ತಿ, ದೀಪಕ್ ಖತ್ರಿ, ದುರ್ಗೇಶ್ ಕುಮಾರ್, ಗೌತಮ್ ನೌತಿಯಾಲ್, ಗೀತ್ ಸೇಥಿ, ಕೆ ಕೆ ಶಾಸ್ತ್ರಿ, ಲವ್ ದತ್ತಾ, ಮನಾಫ್ ನುಲ್ಲಿಪಾಡಿ, ಷಹಾನುಲ್ಲಾ ಖಾನ್(ಶುಜಾ ಗಾಂಧಿ) ಅವರನ್ನು ನೇಮಕ ಮಾಡಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version