Site icon Vistara News

Viral Video: ಪ್ರಿಯಾಂಕಾ ಗಾಂಧಿ ಸಾಗುವ ಹಾದಿಯಲ್ಲಿ ಗುಲಾಬಿ ಹೂ ದಳಗಳ ಕಾರ್ಪೆಟ್​; ಕಾಂಗ್ರೆಸ್​ ಮಹಾ ಅಧಿವೇಶನದಲ್ಲಿ ಭರ್ಜರಿ ಸಿದ್ಧತೆ

Congress plenary session Rose carpet welcome to Priyanka Gandhi Vadra In Raipur

#image_title

ಛತ್ತೀಸ್​ಗಢ್​​ನ ರಾಯ್ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್​​ನ 85ನೇ ಮಹಾ ಅಧಿವೇಶನಕ್ಕೆ ಭರ್ಜರಿ ಸಿದ್ಧತೆಯನ್ನೇ ಮಾಡಲಾಗಿದೆ. ಅದರಲ್ಲೂ ಇಂದು ಬೆಳಗ್ಗೆ ರಾಯ್ಪುರಕ್ಕೆ ಬಂದು ಇಳಿದ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮತ್ತು ಇತರ ಕೆಲವು ಪ್ರಮುಖ ನಾಯಕರನ್ನು ಕೆಂಪು ಗುಲಾಬಿ ಹೂವಿನ ದಳಗಳು ತುಂಬಿದ ಕಾರ್ಪೆಟ್ ಮೂಲಕ ಸ್ವಾಗತಿಸಿ, ಅಧಿವೇಶನ ನಡೆಯುತ್ತಿರುವ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. ಮುಖ್ಯವಾಗಿ ಪ್ರಿಯಾಂಕಾ ಗಾಂಧಿ ವಾದ್ರಾರಿಗಾಗಿ ಈ ಗುಲಾಬಿ ಹೂವಿನ ಕಾರ್ಪೆಟ್​ ಸಿದ್ಧತೆಯಾಗಿತ್ತು ಎಂದು ವರದಿಯಾಗಿದೆ.

ಕಾಂಗ್ರೆಸ್​ನ 85ನೇ ಮಹಾ ಅಧಿವೇಶನ ಫೆ. 24ರಿಂದ ರಾಯ್ಪುರದಲ್ಲಿ ನಡೆಯುತ್ತಿದೆ. ಮೊದಲ ದಿನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಗವಹಿಸಿರಲಿಲ್ಲ. ಎರಡನೇ ದಿನವಾದ ಇಂದು ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಪ್ರಿಯಾಂಕಾ ಗಾಂಧಿ ಆಗಮಿಸಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಶುಕ್ರವಾರ ಸಂಜೆಯೇ ರಾಯ್ಪುರವನ್ನು ತಲುಪಿದ್ದರು. ಇಂದು ಪ್ರಿಯಾಂಕಾ ಗಾಂಧಿ ರಾಯ್ಪುರಕ್ಕೆ ಬರುವ ಹೊತ್ತಿಗೆ, ಅಲ್ಲಿನ ಏರ್​ಪೋರ್ಟ್​​ನಿಂದ ಮಹಾ ಅಧಿವೇಶನ ನಡೆಯುತ್ತಿರುವ ಸ್ಥಳದವರೆಗೆ ಸುಮಾರು 2 ಕಿಮೀ ದೂರ ಈ ಗುಲಾಬಿ ದಳಗಳ ದಪ್ಪನೆಯ ಹಾಸು​ ಹಾಕಲಾಗಿತ್ತು. ಜಾನಪದ ಕಲಾವಿದರ ಸಾಂಪ್ರದಾಯಿಕ ​​ನೃತ್ಯ ನಡೆಯುತ್ತಲೇ ಇತ್ತು. ಆ ವಿಡಿಯೊ ವೈರಲ್ ಆಗಿದೆ.

ಪ್ರಿಯಾಂಕಾ ಗಾಂಧಿಯನ್ನು ಬರಮಾಡಿಕೊಳ್ಳಲು ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್​, ರಾಜ್ಯ ಕಾಂಗ್ರೆಸ್​ ಮುಖ್ಯಸ್ಥ ಮೋಹನ್​ ಮಾರ್ಕಂ ಮತ್ತು ಇತರ ನಾಯಕರು ಏರ್​ಪೋರ್ಟ್​ಗೆ ತೆರಳಿದ್ದರು. ಏರ್​ಪೋರ್ಟ್​​ನಿಂದ ಹೊರಬಂದು, ಗುಲಾಬಿ ದಳಗಳ ಕಾರ್ಪೆಟ್​ ಮೇಲೆ, ಕಾರಿನಲ್ಲಿ ಹೊರಟ ಪ್ರಿಯಾಂಕಾ ಗಾಂಧಿಯವರಿಗೆ ದಾರಿಯುದ್ದಕ್ಕೂ ಕಾರ್ಯಕರ್ತರು ವಿಶ್​ ಮಾಡಿದರು. ಅವರತ್ತ ಕಾಂಗ್ರೆಸ್ ಧ್ವಜ ಬೀಸಿದರು. ಪ್ರಿಯಾಂಕಾ ಗಾಂಧಿ ಆಗಮನವನ್ನು ಅತ್ಯುತ್ಸಾಹದಿಂದ ಸಂಭ್ರಮಿಸಿದರು. ಘೋಷಣೆಗಳನ್ನು ಕೂಗಿದರು. ಇದನ್ನೆಲ್ಲ ನೋಡಿ, ನನಗೆ ತುಂಬ ಖುಷಿಯಾಯಿತು ಎಂದು ಪ್ರಿಯಾಂಕಾ ಗಾಂಧಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Congress Plenary Session: ಕಾಂಗ್ರೆಸ್​ ಮಹಾ ಅಧಿವೇಶನದಲ್ಲಿ ಇಂದು ಸೋನಿಯಾ ಗಾಂಧಿ ಭಾಷಣ, ರಾಹುಲ್ ಗಾಂಧಿ ಉಪಸ್ಥಿತಿ

‘2 ಕಿಮೀ ದೂರದ ರಸ್ತೆಯನ್ನು ಸಿಂಗರಿಸಲು ಸುಮಾರು 6ಸಾವಿರ ಕೆಜಿ ಗುಲಾಬಿ ಹೂವನ್ನು ಬಳಸಲಾಗಿದೆ. ಏರ್​ಪೋರ್ಟ್​​ನಿಂದ ಮಹಾಧಿವೇಶನದ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ವಿವಿಧ ಕಡೆಗಳಲ್ಲಿ ಸಣ್ಣಸಣ್ಣ ಸ್ಟೇಜ್​ ನಿರ್ಮಿಸಲಾಗಿದೆ. ಅಲ್ಲೆಲ್ಲ ಪ್ರಿಯಾಂಕಾ ಗಾಂಧಿಯವರ ಮೇಲೆ ಕಾರ್ಯಕರ್ತರು ಗುಲಾಬಿ ಹೂವಿನ ದಳದ ಸುರಿಮಳೆ ಸುರಿಸಿದರು ಎಂದು ರಾಯ್ಪುರ ಮೇಯರ್​ ಐಜಾಜ್ ಧೆಬರ್ ತಿಳಿಸಿದ್ದಾರೆ.

ಗುಲಾಬಿ ದಳಗಳ ಕಾರ್ಪೆಟ್​:

Exit mobile version